ಶಂಕರ್ ನಾಗ್​ಗೆ ನಿಧನದ ಮೊದಲೇ ಸಿಕ್ಕಿತ್ತು ಸೂಚನೆ; ಅನಂತ್ ನಾಗ್ ಹೇಳಿದ ಆ ಮಾತು ನಿಜವಾಯ್ತು

| Updated By: ರಾಜೇಶ್ ದುಗ್ಗುಮನೆ

Updated on: Sep 04, 2024 | 10:54 AM

ಶಂಕರ್ ನಾಗ್ ಅವರು 1990ರ ಸೆಪ್ಟೆಂಬರ್ 30ರಂದು ಅಘಾತದಲ್ಲಿ ಮೃತಪಟ್ಟರು. ಆಗ ಅವರಿಗೆ 35 ವರ್ಷ ವಯಸ್ಸು. ಶಂಕರ್ ನಾಗ್​ಗೆ ಸಾಯುವುದಕ್ಕೂ ಎರಡು ವರ್ಷ ಮೊದಲು ​ ಅವರಲ್ಲಿ ತರಾತುರಿ ಮಿತಿಮೀರಿತ್ತಂತೆ. ಈ ಬಗ್ಗೆ ಅನಂತ್ ನಾಗ್ ಹೇಳಿಕೊಂಡಿದ್ದರು. ಆ ಬಗ್ಗೆ ಇಲ್ಲಿದೆ ವಿವರ.

ಶಂಕರ್ ನಾಗ್​ಗೆ ನಿಧನದ ಮೊದಲೇ ಸಿಕ್ಕಿತ್ತು ಸೂಚನೆ; ಅನಂತ್ ನಾಗ್ ಹೇಳಿದ ಆ ಮಾತು ನಿಜವಾಯ್ತು
ಶಂಕರ್-ಅನಂತ್
Follow us on

ಅನಂತ್ ನಾಗ್ ಹಾಗೂ ಶಂಕರ್ ನಾಗ್ ಒಂದೇ ತಾಯಿ ಮಕ್ಕಳು. ಇಬ್ಬರೂ ಒಟ್ಟಾಗಿ ಬೆಳೆದರು. ಶಂಕರ್​ ನಾಗ್ ನಿಧನ ಹೊಂದಿ ಈಗ 34 ವರ್ಷಗಳ ಮೇಲಾಗಿದೆ. ಅವರಿಲ್ಲ ಎಂಬ ನೋವನ್ನು ಮರೆತು ಅನಂತ್ ನಾಗ್ ಮುಂದೆ ಬಂದಿದ್ದಾರೆ. ಅನಂತ್ ನಾಗ್ ಅವರಿಗೆ ಇಂದು (ಸೆಪ್ಟೆಂಬರ್ 4) ಬರ್ತ್​ಡೇ. ಬಹುಶಃ ಶಂಕರ್ ನಾಗ್ ಇದ್ದಿದ್ದರೆ ಖುಷಿಯಿಂದ ಅವರ ಜನ್ಮದಿನವನ್ನು ಆಚರಿಸುತ್ತಿದ್ದರೇನೋ. ಶಂಕರ್ ನಾಗ್ ಇಲ್ಲದಾಗ ಅವರಿಗೆ ಅತಿಯಾಗಿ ಒಂಟಿತನ ಕಾಡಿತ್ತಂತೆ.

ಶಂಕರ್ ನಾಗ್ ಅವರು 1990ರ ಸೆಪ್ಟೆಂಬರ್ 30ರಂದು ಅಘಾತದಲ್ಲಿ ನಿಧನ ಹೊಂದಿದರು. ಆಗ ಅವರಿಗೆ 35 ವರ್ಷ ವಯಸ್ಸು. ಕೆಲವೇ ವರ್ಷಗಳಲ್ಲಿ ಅವರು ಸಾಕಷ್ಟು ಸಿನಿಮಾ ಮಾಡಿದ್ದರು. ಅದರಲ್ಲೂ ಸಾಯುವುದಕ್ಕೂ ಎರಡು ವರ್ಷ ಮೊದಲು ಶಂಕರ್ ನಾಗ್​ ಅವರಲ್ಲಿ ತರಾತುರಿ ಮಿತಿಮೀರಿತ್ತಂತೆ. ಈ ಬಗ್ಗೆ ಅನಂತ್ ನಾಗ್ ಹೇಳಿಕೊಂಡಿದ್ದರು.

‘ಶಂಕರ್ ನಾಗ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮುಂಬೈನಲ್ಲಿ ಅವನು ನನ್ನ ಜೊತೆಯೇ ಬೆಳೆದ. ಅವನಿಗೆ ನಾನು ಅಣ್ಣ ಅಲ್ಲ, ಸಾಕು ತಂದೆ ಆದೆ. ಕೇವಲ 12 ವರ್ಷಗಳಲ್ಲಿ ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ. ನಿರ್ದೇಶನದತ್ತ ಹುಚ್ಚಿತ್ತು. ‘ಮಾಲ್ಗುಡಿ ಡೇಸ್’ ಮಾಡಿದ. ಅದು ಚೆನ್ನಾಗಿ ಆಯಿತು. ಆತನನ್ನು ಹಠಾತ್ ಕರೆದುಕೊಂಡು ಹೋದ. ಅದು ಬಹಳ ಅನಪೇಕ್ಷಣೀಯ. ಅವನಿಗೆ ದೇವರು ಆಯುಷ್ಯ ಕೊಟ್ಟಿದ್ದೇ ಅಷ್ಟೇ. ಎಲ್ಲವೂ ಪೂರ್ವನಿರ್ಧಾರಿತ. ನಾವು ನಿಮಿತ್ತ ಮಾತ್ರ’ ಎಂದಿದ್ದರು ಅವರು.

‘ಶಂಕರ್ ನಾಗ್​ಗೆ ಸಾಯೋದು ಎರಡು ವರ್ಷ ಮೊದಲೇ ಗೊತ್ತಿತ್ತು ಅನಿಸುತ್ತದೆ. 1988ರಲ್ಲೇ ಏನೋ ಚಡಪಡಿಕೆ. ಅದನ್ನು ಮಾಡಬೇಕು, ಇದನ್ನು ಮಾಡಬೇಕು ಎಂಬ ತರಾತುರಿ. ಒಂದಾದಮೇಲೆ ಒಂದು ಮಾಡುತ್ತಿದ್ದೀಯಾ. ಈಗ ನಾವಿಬ್ಬರೂ ಇದ್ದಾಗ ಸಾಲ ಕೊಡ್ತಾರೆ. ಆದರೆ, ಒಬ್ಬನು ಹೋದರೆ ಮತ್ತೊಬ್ಬನ ಕಥೆ ಮುಗಿಯಿತು ಎಂದಿದ್ದೆ. ಯಾವ ಕ್ಷಣದಲ್ಲಿ ಆ ಮಾತನ್ನು ಹೇಳಿದೆನೋ ಗೊತ್ತಿಲ್ಲ. 35 ವರ್ಷಕ್ಕೆ ಆತನನ್ನು ದೇವರು ಕರೆದುಕೊಂಡ’ ಎಂದಿದ್ದಾರೆ ಅನಂತ್ ನಾಗ್.

ಇದನ್ನೂ ಓದಿ: ‘ಬೆಳದಿಂಗಳ ಬಾಲೆ’ಯಲ್ಲಿ ಬರೋ ಧ್ವನಿ ಯಾರದ್ದು? ಅಲ್ಲಿ ನಟಿಸಿದ್ದು ಯಾರು?

‘ಅವನು ಹೋದ ಸಂದರ್ಭದಲ್ಲಿ ಬೆಟ್ಟದಷ್ಟು ಸಮಸ್ಯೆಗಳು ಹುಟ್ಟಿಕೊಂಡವು. ಕಷ್ಟಕಾಲ ಬಂದಾಗ ಒಬ್ಬಂಟಿಯಾಗಿದ್ದೆ. ಹೇಳುವ ಸ್ಥಿತಿಯಲ್ಲೂ ಇಲ್ಲ, ಕೇಳುವ ಸ್ಥಿತಿಯಲ್ಲೂ ಇಲ್ಲ. ಆ ಸಮಯದಲ್ಲಿ ನನ್ನ ಪತ್ನಿ ಇದ್ದರು. ಆ ಸಮಸ್ಯೆಗಳಿಂದ ಬರಲು 10 ವರ್ಷ ಬೇಕಾಯಿತು. ನನಗೆ ಶಿಕ್ಷಿಸೋದಕ್ಕೆ ದೇವರು ಅವನನ್ನು ಕರೆದುಕೊಂಡು ಹೋದ್ನಾ ಅನಿಸುತ್ತದೆ. ಅವನ ಬಗ್ಗೆ ಪುಸ್ತಕವನ್ನೂ ಬರೆದಿದ್ದೇನೆ. ಆದರೂ ಜನರು ಕೇಳ್ತಾರೆ. ಅವನ ಬಗ್ಗೆ ಇರೋ ಪ್ರೇಮ ಅದು. ತಮ್ಮನ ಕರೆದುಕೊಂಡ ವಿಚಾರದಲ್ಲಿ ಭಗವಂತನನ್ನು ನಾನು ಕ್ಷಮಿಸೋದಿಲ್ಲ’ ಎಂದಿದ್ದರು ಅನಂತ್ ನಾಗ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:26 am, Wed, 4 September 24