
ಅರ್ಧ ಶತಮಾನಕ್ಕೂ ಹೆಚ್ಚು ಸಮಯದಿಂದ ಸಿನಿಮಾ ಅನ್ನೇ ಉಸಿರಾಡಿದ ಅತ್ಯುತ್ತಮ ನಟ ಅನಂತ್ ನಾಗ್ ಅವರು ಸಿನಿಮಾಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಯ್ತು. ಇಂದು (ಸೆಪ್ಟೆಂಬರ್ 22) ಗುಜರಾತ್ನ ಅಹಮದಾಬಾದ್ ಸಮೀತದ ಏಕತಾ ನಗರದಲ್ಲಿ ಆಯೋಜಿಸಲಾಗಿದ್ದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನಂತ್ ನಾಗ್ ಅವರಿಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಿದರು. ಭಾರತೀಯ ಚಿತ್ರರಂಗದ ಹಲವಾರು ಪ್ರತಿಭಾವಂತ ನಟ-ನಟಿಯರು, ತಂತ್ರಜ್ಞರ ಹಾಜರಿಯಲ್ಲಿ ಅನಂತ್ ನಾಗ್ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕಾರ ಮಾಡಿದರು.
ಪ್ರಶಸ್ತಿ ಸ್ವೀಕಾರಕ್ಕೂ ಮುಂಚೆಯೇ ಅನಂತ್ ನಾಗ್ ಅವರಿಗೆ ಇಡೀ ಸಭಾಂಗಣವೇ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿತು. ಅದ್ಭುತ ನಟ ಮಮ್ಮುಟಿ ಅವರು ಅನಂತ್ ನಾಗ್ ಅವರ ಕೈಕುಲುಕುವ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸಿದರು. ಅನಂತ್ ನಾಗ್ ಸಹ ಎದ್ದು ನಿಂತು ಎಲ್ಲರಿಗೂ ಕೈ ಮುಗಿದು ಧನ್ಯವಾದ ಸಲ್ಲಿಸಿದರು. ಅನಂತ್ ನಾಗ್ ಸಹ ಎದ್ದು ನಿಂತು ಎಲ್ಲರಿಗೂ ಕೈ ಮುಗಿದು ಧನ್ಯವಾದ ಸಲ್ಲಿಸಿದರು. ಆ ನಂತರ ಅನಂತ್ ನಾಗ್ ಅವರು ನಟಿಸಿರುವ ಸಿನಿಮಾಗಳ ಕೆಲ ತುಣುಕುಗಳನ್ನು ತೋರಿಸಲಾಯ್ತು, ನೆರೆದಿದ್ದವರಿಗೆ ಅನಂತ್ ನಾಗ್ ಅವರ ಜೀವನ ಪಯಣದ ಬಗ್ಗೆ ತಿಳಿಸಲಾಯ್ತು. ಸರಳವಾಗಿ ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟು, ಗಾಢ ನೀಲಿ ಬಣ್ಣದ ಶರ್ಟ್ ಧರಿಸಿ ವೇದಿಕೆ ಏರಿದ ಅನಂತ್ ನಾಗ್ ಅವರು, ರಾಷ್ಟ್ರಪತಿ ಅವರಿಗೆ ನಮಿಸಿ ಅವರಿಂದ ಪ್ರಶಸ್ತಿ ಸ್ವೀಕಾರ ಮಾಡಿದರು. ಅನಂತ್ ನಾಗ್ ಅವರು ಪ್ರಶಸ್ತಿ ಸ್ವೀಕಾರ ಮಾಡಿದಾಗ ಸಭಾಂಗಣದಲ್ಲಿ ಸೇರಿದ್ದ ಸಭಿಕರೆಲ್ಲ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು. ಜೊತೆಗೆ ಹಿರಿಯ ನಟನ ಸಾಧನೆಗೆ ಗೌರವ ಸಲ್ಲಿಸಿದರು.
ತಮ್ಮ 50ಕ್ಕೂ ಹೆಚ್ಚು ವರ್ಷಗಳ ನಟನಾ ವೃತ್ತಿಯಲ್ಲಿ ಹಲವಾರು ಬಾರಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಅನಂತ್ ನಾಗ್ ಅವರಿಗೆ ಅವರು ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ತುಸು ತಡವಾಗಿ ಆದರೂ ಗುರುತಿಸಿ ಈ ಬಾರಿ ಅನಂತ್ ನಾಗ್ ಅವರನ್ನು ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಸಹಜವಾಗಿಯೇ ಕನ್ನಡ ಸಿನಿಮಾ ಪ್ರೇಮಿಗಳು ಅನಂತ್ ನಾಗ್ ಅವರ ಸಿಗುತ್ತಿರುವ ಗೌರವ ಕುರಿತಾಗಿ ಥ್ರಿಲ್ ಆಗಿದ್ದರು, ಖುದ್ದು ನಟ ಅನಂತ್ ನಾಗ್ ಅವರೂ ಸಹ ಪ್ರಶಸ್ತಿಗೆ ಆಯ್ಕೆ ಆಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ಇಂದು ರಾಷ್ಟ್ರಪ್ರಶಸ್ತಿ ಅವರಿಗೆ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ಆ ಮೂಲಕ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಪಡೆದ ಮೂರನೇ ಕನ್ನಡಿಗ ಮತ್ತು ಎರಡನೇ ಕನ್ನಡದ ನಟ ಎನಿಸಿಕೊಂಡಿದ್ದಾರೆ ಅನಂತ್ ನಾಗ್.
ಇದನ್ನೂ ಓದಿ:ಇನ್ಮುಂದೆ ನಟಿಸಲ್ಲ; ಕಠಿಣ ನಿರ್ಧಾರಕ್ಕೆ ಕಾರಣ ತಿಳಿಸಿದ ಅನಂತ್ ನಾಗ್
ನಾಟಕ ರಂಗದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಅನಂತ್ ನಾಗ್, ಕನ್ನಡ ಚಿತ್ರರಂಗ ಮಾತ್ರವೇ ಅಲ್ಲದೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ತಮ್ಮ ನಟನೆಯ ಛಾಪನ್ನು ಮೂಡಿಸಿದ್ದಾರೆ. ಕಲಾತ್ಮಕ ಚಿತ್ರಗಳು, ಮನೊರಂಜನಾತ್ಮಕ ಸಿನಿಮಾಗಳು, ಹಾಸ್ಯಪ್ರಧಾನ ಸಿನಿಮಾಗಳು, ಐತಿಹಾಸಿಕ ಸಿನಿಮಾಗಳು ಹೀಗೆ ಹಲವಾರು ರೀತಿಯ ಸಿನಿಮಾಗಳಲ್ಲಿ ಹಲವಾರು ರೀತಿಯ ಪಾತ್ರಗಳನ್ನು ಅನಂತ್ ನಾಗ್ ನಿರ್ವಹಿಸಿದ್ದಾರೆ. ಸಿನಿಮಾ ಮಾತ್ರವೇ ಅಲ್ಲದೆ ‘ಗರ್ವ’, ‘ಮಾಲ್ಗುಡಿ ಡೇಸ್’ ರೀತಿಯ ಧಾರಾವಾಹಿಗಳಲ್ಲಿಯೂ ಸಹ ಅನಂತ್ ನಾಗ್ ನಟಿಸಿದ್ದು, ತಾವು ಎಲ್ಲೆಡೆಯೂ ಒಗ್ಗುವ ಸಂಪೂರ್ಣ ನಟ ಎಂದು ಎಂದೋ ಸಾಬೀತುಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ