
ಆಶಾ ಭಟ್ (Asha Bhat) ಅವರು ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೆ ಹೆಚ್ಚು ಪರಿಚಿತರಾದರು. ಅವರ ಖ್ಯಾತಿ ಆ ಸಮಯದಲ್ಲಿ ಸಾಕಷ್ಟು ಹೆಚ್ಚಿತ್ತು. ಆ ಬಳಿಕ ಅವರು ಯಾವುದೇ ಕನ್ನಡ ಸಿನಿಮಾ ಘೋಷಣೆ ಮಾಡಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಲೇ ಇದೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ಈವರೆಗೆ ರಿವೀಲ್ ಮಾಡಿಲ್ಲ. ಹಾಗಾದರೆ ಆಶಾ ಭಟ್ ಹೊಸ ಸಿನಿಮಾ ಘೋಷಣೆ ಮಾಡದೇ ಇರಲು ಕಾರಣ ಏನಿರಬಹುದು ಎಂಬುದರ ಬಗ್ಗೆ ಇಲ್ಲಿದೆ ಒಂದಷ್ಟು ಸಾಧ್ಯಾಸಾಧ್ಯತೆ.
ಆಶಾ ಭಟ್ 2014ರಲ್ಲಿ ‘ಸುಪ್ರಾ ಇಂಟರ್ನ್ಯಾಷನಲ್’ ಕಿರೀಟ ಸಿಕ್ಕಿತು. ಆಗ ಅವರಿಗೆ 22 ವರ್ಷ ವಯಸ್ಸು. ಈ ಬಿರುದನ್ನು ಪಡೆದ ಮೊದಲ ಭಾರತೀಯ ಮಹಿಳೆ ಇವರು ಅನ್ನೋದು ಮತ್ತೊಂದು ವಿಶೇಷ. ಮಾಡೆಲಿಂಗ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಳಿಕ ಸಾಮಾನ್ಯವಾಗಿ ಚಿತ್ರರಂಗದಲ್ಲಿ ಆಫರ್ ಸಿಗುತ್ತದೆ. ಆಶಾ ಭಟ್ಗೂ ಹಾಗೆಯೇ ಆಯಿತು.
2019ರಲ್ಲಿ ರಿಲೀಸ್ ಆದ ಹಿಂದಿಯ ‘ಜಂಗ್ಲೀ’ ಚಿತ್ರದಲ್ಲಿ ಆಶಾ ಭಟ್ ಅವರು ನಟಿಸಿದರು. ಅವರಿಗೆ ಕನ್ನಡ ಸಿನಿಮಾ ಮಾಡಬೇಕು ಎನ್ನುವ ಆಸೆ ಮೊದಲಿನಿಂದಲೂ ಇತ್ತು. ಆ ಆಸೆಯನ್ನು ಅವರು ‘ರಾಬರ್ಟ್’ ಚಿತ್ರದ ಮೂಲಕ ಈಡೇರಿಸಿಕೊಂಡರು. ದರ್ಶನ್ ನಟನೆಯ ಈ ಚಿತ್ರ ಯಶಸ್ಸು ಕಂಡಿತು. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ಪರಿಚಯಗೊಂಡರು.
ಇದನ್ನೂ ಓದಿ: ಲಂಗ ದಾವಣಿ ಧರಿಸಿ ನಲಿದಾಡಿದ ‘ರಾಬರ್ಟ್’ ನಟಿ ಆಶಾ ಭಟ್
ಆ ಬಳಿಕ ಅವರು 2022ರಲ್ಲಿ ‘ಒರಿ ದೇವುಡ’ ಚಿತ್ರದ ಮೂಲಕ ತೆಲುಗು ಬಣ್ಣದ ಲೋಕಕ್ಕೆ ಕಾಲಿಟ್ಟರು. ಮೀರಾ ಹೆಸರಿನ ಪಾತ್ರವನ್ನು ಮಾಡಿದರು. ಆ ಬಳಿಕ ಆಶಾ ಭಟ್ ನಟನೆಯ ಯಾವುದೇ ಚಿತ್ರ ರಿಲೀಸ್ ಆಗಿಲ್ಲ. ಅವರು ಹೊಸ ಸಿನಿಮಾ ಬಗ್ಗೆ ಯಾವುದೇ ಘೋಷಣೆ ಕೂಡ ಮಾಡಿಲ್ಲ.
ಈ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ್ದ ಆಶಾ ಭಟ್ ಅವರು, ಕನ್ನಡ ಚಿತ್ರಗಳನ್ನು ಮಾಡಬೇಕು ಎಂದು ಆಸಕ್ತಿ ತೋರಿಸಿದ್ದರು. ಹಾಗಂದ ಮಾತ್ರಕ್ಕೆ ಅವರು ಸಿಕ್ಕ ಎಲ್ಲಾ ಚಿತ್ರಗಳನ್ನು ಒಪ್ಪಿ ನಟಿಸಲು ರೆಡಿ ಇಲ್ಲ. ಪಾತ್ರ ಹಾಗೂ ಕಥೆ ಎರಡೂ ಇಷ್ಟ ಆಗಬೇಕು. ಈ ಕಾರಣದಿಂದಲೇ ಸೂಕ್ತ ಸ್ಕ್ರಿಪ್ಟ್ಗಾಗಿ ಅವರು ಕಾಯುತ್ತಾ ಇರಬಹುದು ಎಂಬುದು ಅನೇಕರ ಅಭಿಪ್ರಾಯ. ಸದ್ಯ ಆಶಾ ಭಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ವಿವಿಧ ರೀತಿಯ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.