ಸ್ಪಂದನಾ ಅಂತಿಮ ದರ್ಶನ ಪಡೆದ ಅಶ್ವಿನಿ; ವಿಧಿಯ ಶಪಿಸಿ ಗಳಗಳನೆ ಅತ್ತ ಪುನೀತ್ ಪತ್ನಿ
ಸ್ಪಂದನಾ ಕೂಡ ರಾಜ್ ಫ್ಯಾಮಿಲಿ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಆದರೆ, ಅವರು ಏಕಾಏಕಿ ಮೃತಪಟ್ಟಿದ್ದು ಅನೇಕರಿಗೆ ಶಾಕ್ ತಂದಿದೆ. ಅಶ್ವಿನಿ ಅವರಿಗೂ ಈ ನೋವು ಸಾಕಷ್ಟು ಕಾಡಿದೆ.
ಡಾ. ರಾಜ್ಕುಮಾರ್ ಕುಟುಂಬಕ್ಕೆ ಒಂದಾದಮೇಲೆ ಒಂದರಂತೆ ದುಃಖ ಎದುರಾಗುತ್ತಲೇ ಇದೆ. 2021ರ ಅಕ್ಟೋಬರ್ ತಿಂಗಳಲ್ಲಿ ಪುನೀತ್ ರಾಜ್ಕುಮಾರ್ (Puneeth Rajkumar) ಮೃತಪಟ್ಟರು. ಇದಾದ ಕೆಲವೇ ತಿಂಗಳಲ್ಲಿ ಅಶ್ವಿನಿ ಅವರ ತಂದೆ ರೇವನಾಥ್ ನಿಧನ ಹೊಂದಿದರು. ರಾಜ್ ಕುಟುಂಬದ ಕುಡಿ ಸೂರಜ್ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಈಗ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ ಹೊಂದಿದ್ದಾರೆ. ಈ ನೋವನ್ನು ಅರಗಿಸಿಕೊಳ್ಳೋಕೆ ರಾಜ್ ಫ್ಯಾಮಿಲಿಗೆ ಸಾಧ್ಯವಾಗುತ್ತಿಲ್ಲ. ಸ್ಪಂದನಾ (Spandana) ಅಂತಿಮ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್ಕುಮಾರ್ ಕಣ್ಣೀರು ಹಾಕಿದರು.
ಪಾರ್ವತಮ್ಮ ರಾಜ್ಕುಮಾರ್ ಅವರ ಸಹೋದರ ಚಿನ್ನೇ ಗೌಡ ಅವರ ಮಕ್ಕಳು ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ. ಹೀಗಾಗಿ ರಾಜ್ ಕುಟುಂಬದ ಜೊತೆಗೆ ಇವರಿಗೆ ನಂಟಿದೆ. ಸ್ಪಂದನಾ ಕೂಡ ರಾಜ್ ಫ್ಯಾಮಿಲಿ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಆದರೆ, ಅವರು ಏಕಾಏಕಿ ಮೃತಪಟ್ಟಿದ್ದು ಅನೇಕರಿಗೆ ಶಾಕ್ ತಂದಿದೆ. ಅಶ್ವಿನಿ ಅವರಿಗೂ ಈ ನೋವು ಸಾಕಷ್ಟು ಕಾಡಿದೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಸ್ಪಂದನಾ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಕೂಡ ಹೃದಯಾಘಾತದಿಂದ ಮೃತಪಟ್ಟರು. ಕಣ್ಣೆದುರೇ ಅವರನ್ನು ಅಶ್ವಿನಿ ಕಳೆದುಕೊಂಡರು. ಅಶ್ವಿನಿ ಅವರಿಗೆ ಆ ನೋವು ಇನ್ನೂ ಕಡಿಮೆ ಆಗಿಲ್ಲ. ಸ್ಪಂದನಾ ಸಾವು ಮತ್ತಷ್ಟು ನೋವು ಕೊಟ್ಟಿದೆ. ಈ ಕಾರಣಕ್ಕೆ ಅಶ್ವಿನಿ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ‘ಆಚಾರ್ ಆ್ಯಂಡ್ ಕೋ’ ಗೆದ್ದ ಬಳಿಕ ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂದೆ ಇದೆ ದೊಡ್ಡ ಸವಾಲು
ಅಶ್ವಿನಿ ಪುನೀತ್ ರಾಜ್ಕುಮಾರ್ ಮಗಳು ಕೂಡ ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಬಂದಿದ್ದರು. ಅವರು ಕೂಡ ಕಣ್ಣೀರು ಹಾಕಿದ್ದಾರೆ. ಅಂತಿಮ ದರ್ಶನಕ್ಕೆ ಬಂದ ಅನೇಕರು ವಿಜಯ್ ರಾಘವೇಂದ್ರ ಅವರನ್ನು ಸಮಧಾನ ಮಾಡಿದ್ದಾರೆ. ಸದ್ಯ ಈ ವಿಡಿಯೋಗಳು ವೈರಲ್ ಆಗುತ್ತಿವೆ. ವಿಜಯ್ ರಾಘವೇಂದ್ರ ಅವರಿಗೆ ಕುಟುಂಬದವರನ್ನು ಸಂತೈಸುವುದೋ ಅಥವಾ ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳುವುದೋ ಎಂಬುದು ತಿಳಿಯುತ್ತಿಲ್ಲ.
ಇದನ್ನೂ ಓದಿ: ಕಣ್ಣೀರಲ್ಲೇ ಶಾಸ್ತ್ರ ಮಾಡಿದ ವಿಜಯ್ ರಾಘವೇಂದ್ರ; ರಾಘಣ್ಣನ ಸಮಾಧಾನ
ಮಧ್ಯಾಹ್ನ 4 ಗಂಟೆ ವೇಳೆಗೆ ಸ್ಪಂದನಾ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ. ಈಡಿಗರ ಸಂಪ್ರದಾಯದ ಪ್ರಕಾರ ಈ ಅಂತ್ಯ ಸಂಸ್ಕಾರ ನೆರವೇರಲಿದೆ. ಸ್ಯಾಂಡಲ್ವುಡ್ನ ಅನೇಕ ಸೆಲೆಬ್ರಿಟಿಗಳು ಇದಕ್ಕೆ ಸಾಕ್ಷಿ ಆಗಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ