ಅಂಗಾಂಗದಾನ ಕ್ಯಾಂಪೇನ್: ರಾಯಭಾರಿ ಆಗಲು ಅಶ್ವಿನಿ ಪುನೀತ್ಗೆ ಆಹ್ವಾನ ನೀಡಿದ ರಾಜ್ಯ ಸರ್ಕಾರ
Ashwini Puneeth Rajkumar: ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರು ನೇತ್ರದಾನ ಮಾಡಿದ್ದರು. ಕಣ್ಣಿನ ದಾನ ಮಾಡುವಂತೆ ಅವರು ಅನೇಕರಿಗೆ ಸ್ಫೂರ್ತಿ ನೀಡಿದ್ದರು. ಈ ಕಾರಣದಿಂದ ಅಶ್ವಿನಿ ಪುನೀತ್ ಅವರಿಗೆ ‘ಅಂಗಾಂಗದಾನ ಕ್ಯಾಂಪೇನ್’ನ ರಾಯಭಾರಿ ಆಗುವಂತೆ ಆಹ್ವಾನ ನೀಡಲಾಗಿದೆ.
ಡಾ. ರಾಜ್ಕುಮಾರ್ (Dr Rajkumar) ಕುಟುಂಬ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದೆ. ಕೇವಲ ನಟನೆ ಮಾತ್ರವಲ್ಲದೆ ಹಲವು ಸಾಮಾಜಿಕ ಕೆಲಸಗಳ ಮೂಲಕವೂ ಈ ಕುಟುಂಬದವರು ಗುರುತಿಸಿಕೊಂಡಿದ್ದಾರೆ. ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಅವರು ಸಮಾಜಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಈ ಕೆಲಸವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕೂಡ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈಗ ಅಂಗಾಂಗದಾನ ಕ್ಯಾಂಪೇನ್ಗೆ ರಾಯಭಾರಿ ಆಗುವಂತೆ ಅಶ್ವಿನಿ ಅವರಿಗೆ ರಾಜ್ಯ ಸರ್ಕಾರ ಆಹ್ವಾನ ನೀಡಿದೆ.
ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರು ನೇತ್ರದಾನ ಮಾಡಿದ್ದರು. ಕಣ್ಣಿನ ದಾನ ಮಾಡುವಂತೆ ಅವರು ಅನೇಕರಿಗೆ ಸ್ಫೂರ್ತಿ ನೀಡಿದ್ದರು. ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರನ್ನು ಅನುಸರಿಸಿ ಅನೇಕರು ಕಣ್ಣಿನ ದಾನ ಮಾಡಲು ಹೆಸರು ನೋಂದಣಿ ಮಾಡಿಸಿದ್ದರು. ಈ ಕಾರಣದಿಂದ ಅಶ್ವಿನಿ ಪುನೀತ್ ಅವರಿಗೆ ‘ಅಂಗಾಂಗದಾನ ಕ್ಯಾಂಪೇನ್’ನ ರಾಯಭಾರಿ ಆಗುವಂತೆ ಆಹ್ವಾನ ನೀಡಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಇದರಲ್ಲಿ ಅವರು ರಾಜ್ಕುಮಾರ್ ಕುಟುಂಬದ ಕೊಡುಗೆಯನ್ನು ಸ್ಮರಿಸಿದ್ದಾರೆ ಮತ್ತು ಅಶ್ವಿನಿ ಅವರಿಗೆ ಅಂಬಾಸಿಡರ್ ಆಗಲು ಆಹ್ವಾನ ನೀಡಿರುವ ವಿಚಾರವನ್ನು ಅವರು ತಿಳಿಸಿದ್ದಾರೆ.
‘ರಾಜ್ಕುಮಾರ್ ಹಾಗೂ ಅವರ ಕಿರಿಮಗ ಪುನೀತ್ ರಾಜ್ಕುಮಾರ್ ಅವರು ಮರಣಾನಂತರ ಕಣ್ಣುಗಳನ್ನು ದಾನ ಮಾಡಿ ಮಾದರಿ ಆದರು. ಅನೇಕರು ಇವರನ್ನು ಅನುಕರಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಿದೆ. ಈ ಕಾರಣದಿಂದ ಆರೋಗ್ಯ ಇಲಾಖೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಅಂಗಾಂಗದಾನ ದಾನ ಕ್ಯಾಂಪೇನ್ನ ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ನಿರ್ಧರಿಸಿದೆ’ ಎಂದು ಗುಂಡೂರಾವ್ ಅವರು ತಿಳಿಸಿದ್ದಾರೆ. ಅಂಗಾಂಗದಾನಕ್ಕೆ ಸಹಕರಿಸಿದ 150 ಕುಟುಂಬಗಳನ್ನು ಆರೋಗ್ಯ ಇಲಾಖೆ ಸನ್ಮಾನಿಸಿದೆ.
ಇದನ್ನೂ ಓದಿ: ಅಪರೂಪಕ್ಕೆ ಮೈಕ್ ಹಿಡಿದು ಮಾತನಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್ ಏನಂದರು?
ಪುನೀತ್ ಮರಣಾ ನಂತರ ಅಶ್ವಿನಿ ಪುನೀತ್ ಅವರು ‘ಪಿಆರ್ಕೆ ಪ್ರೊಡಕ್ಷನ್’ ನಿರ್ಮಾಣ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ನಿರ್ಮಾಣ ಸಂಸ್ಥೆಯಡಿಯಲ್ಲಿ ‘ಆಚಾರ್ ಆ್ಯಂಡ್ ಕೋ’ ಸಿನಿಮಾ ಮೂಡಿಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:47 am, Mon, 24 July 23