ಪುಸ್ತಕ ರೂಪದಲ್ಲಿ ಬರ್ತಿದೆ ಪುನೀತ್ ಜೀವನ; ‘ಅಪ್ಪು’ ಹೆಸರಲ್ಲೇ ಪುಸ್ತಕ ರಿಲೀಸ್  

|

Updated on: Mar 18, 2025 | 11:54 AM

ಪುನೀತ್ ರಾಜಕುಮಾರ್ ಅವರ ಜೀವನ ಚರಿತ್ರೆ "ಅಪ್ಪು" ಪುಸ್ತಕವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಪ್ರಕೃತಿ ಬನವಾಸಿ ಅವರು ಬರೆದಿದ್ದಾರೆ. ಇದು ಅಪ್ಪು ಅವರ ಜೀವನದ ಬಹುಮುಖ್ಯ ಘಟನೆಗಳನ್ನು ವಿವರಿಸುತ್ತದೆ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಈ ಸುದ್ದಿಯನ್ನು ಘೋಷಿಸಲಾಗಿದೆ .

ಪುಸ್ತಕ ರೂಪದಲ್ಲಿ ಬರ್ತಿದೆ ಪುನೀತ್ ಜೀವನ; ‘ಅಪ್ಪು’ ಹೆಸರಲ್ಲೇ ಪುಸ್ತಕ ರಿಲೀಸ್  
ಅಶ್ವಿನಿ
Follow us on

ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ನಮ್ಮನ್ನು ಅಗಲಿದ್ದಾರೆ. ಆದರೆ, ಕೆಲಸಗಳ ಮೂಲಕ, ಸಿನಿಮಾಗಳ ಮೂಲಕ ಅವರು ಇನ್ನೂ ಜೀವಂತವಾಗಿ ಇದ್ದಾರೆ. ಅದೇ ರೀತಿ ಅವರನ್ನು ನೆನಪಿಸಿಕೊಳ್ಳಲು ನಾನಾ ರೀತಿಯ ಕೆಲಸಗಳನ್ನು ಮಾಡಲಾಗುತ್ತಿದೆ. ಈಗ ಪುನೀತ್ ಬಯೋಗ್ರಫಿ ಬರೆಯಲಾಗಿದೆ. ಈ ಬಗ್ಗೆ ಅಪ್ಪು ಜನ್ಮದಿನದ (ಮಾರ್ಚ್ 17) ಪ್ರಯುಕ್ತ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಘೋಷಣೆ ಮಾಡಿದ್ದಾರೆ. ಈ ವಿಚಾರ ತಿಳಿದು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದರ ಅಧಿಕೃತ ದಿನಾಂಕ ಇನ್ನಷ್ಟೇ ತಿಳಿಯಬೇಕಿದೆ.

ಪುನೀತ್ ಎನ್ನುವುದಕ್ಕಿಂತ ಅಪ್ಪು ಎಂಬುದೇ ಹೆಚ್ಚು ಸೂಕ್ತ ಎನಿಸುತ್ತದೆ. ಈ ಕಾರಣಕ್ಕೆ ಫ್ಯಾನ್ಸ್ ಕೂಡ ಅವರನ್ನು ಅಪ್ಪು ಎಂದೇ ಕರೆಯುತ್ತಾರೆ. ಹೀಗಾಗಿ ‘ಅಪ್ಪು’ ಅನ್ನೋ ಹೆಸರಿನಲ್ಲೇ ಪುನೀತ್ ಬಯೋಗ್ರಫಿ ಬರೆಯಲಾಗಿದೆ. ಅಶ್ವಿನಿ ಮತ್ತು ಪ್ರಕೃತಿ ಬನವಾಸಿ ಒಟ್ಟಾಗಿ ಸೇರಿ ಈ ಪುಸ್ತಕ ಬರೆದಿದ್ದಾರೆ. ಎರಡು ವರ್ಷಗಳ ಪ್ರಯತ್ನದಿಂದ ಈ ಪುಸ್ತಕ ಹೊರ ಬಂದಿದೆ. ಈ ಪುಸ್ತಕದ ಕವರ್ ಪೇಜ್ ಹೇಗಿದೆ ಎಂಬುದನ್ನು ರಿವೀಲ್ ಮಾಡಲಾಗಿದೆ.

ಇದನ್ನೂ ಓದಿ
ಪುನೀತ್ ರಾಜ್​ಕುಮಾರ್ 50ನೇ ವರ್ಷದ ಜನ್ಮದಿನ; ಎಂದಿಗೂ ಕಮ್ಮಿ ಆಗಲ್ಲ ಅಭಿಮಾನ
ಹೊಸ ನಟರು ಬಂದರೂ ಪುನೀತ್ ಫ್ಯಾನ್ಸ್ ನಿಯತ್ತು ಬದಲಾಗಲ್ಲ: ರಮ್ಯಾ ಮೆಚ್ಚುಗೆ
ಪುನೀತ್ ಕಪ್ಪಿದ್ದಾರೆ ಎಂದವರಿಗೆ ಖಡಕ್ ಉತ್ತರ ಕೊಟ್ಟಿದ್ದ ರಾಜ್​ಕುಮಾರ್
ಪುರಿ ಜಗನ್ನಾಥ ದೇವಾಲಯಕ್ಕೆ ಪ್ರವೇಶಿಸಲು ನಿರಾಕರಿಸಿದ್ದ ಪುನೀತ್, ಕಾರಣ?

ಅಪ್ಪು ಬರ್ತ್​ಡೇ ಸಂದರ್ಭದಲ್ಲಿ ಅಶ್ವಿನಿ ಹಾಗೂ ಮಕ್ಕಳು ಪುಸ್ತಕ ಹಿಡಿದು ಪೋಸ್ ಕೊಟ್ಟಿದ್ದಾರೆ. ಅಪ್ಪು ಕಲರ್​ಫುಲ್ ಜೀವನವನ್ನು ತೆರೆದಿಡುವ ಪುಸ್ತಕಕ್ಕೆ ಬ್ಲ್ಯಾಕ್ ಆ್ಯಂಡ್ ವೈಟ್​ನ ಕವರ್ ಪೇಜ್ ಮಾಡಲಾಗಿದೆ. ಈ ಪುಸ್ತಕದಲ್ಲಿ ಯಾವೆಲ್ಲ ವಿಚಾರಗಳು ಇರಲಿವೆ ಎನ್ನುವ ಕುತೂಹಲ ಮೂಡಿದೆ. ಆಪ್ತರನ್ನು, ಕುಟುಂಬದವರಿಂದ ಮಾಹಿತಿ ಕಲೆ ಹಾಕಿ ಪುಸ್ತಕ ಬರೆಯಲಾಗಿದೆ ಎನ್ನಲಾಗಿದೆ.

ಸದ್ಯದಲ್ಲೇ ಅಧಿಕೃತವಾಗಿ ‘ಅಪ್ಪು’ ಪುಸ್ತಕ ರಿಲೀಸ್ ಮಾಡಲು ಅಶ್ವಿನಿ ಪ್ಲ್ಯಾನ್ ಮಾಡಿದ್ದಾರೆ. ದೊಡ್ಡ ದೊಡ್ಡ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗೋ ಸಾಧ್ಯತೆ ಇದೆಯಂತೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ.

ಇದನ್ನೂ ಓದಿ: ‘ಒಮ್ಮೆ ಬಂದು ನೊಡ್ಕೊಂಡು ಹೋಗೋ ಕಂದಾ’; ಸೋದರತ್ತೆ ನಾಗಮ್ಮಗೆ ಇನ್ನೂ ತಿಳಿದಿಲ್ಲ ಅಪ್ಪು ಸಾವಿನ ವಿಚಾರ

ಪುನೀತ್ ಜನ್ಮದಿನದ ಪ್ರಯುಕ್ತ ‘ಅಪ್ಪು’ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ ಎಂದು ವರದಿ ಆಗಿದೆ. ಈ ಬೆನ್ನಲ್ಲೇ ‘ಅಪ್ಪು’ ಬಯೋಗ್ರಫಿ ಹೊರ ಬರುತ್ತಿರುವ ವಿಚಾರ ತಿಳಿದು ಫ್ಯಾನ್ಸ್ ಕೂಡ ಖುಷಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 11:00 am, Tue, 18 March 25