ಅಭಿಮಾನಿಗಳ ಪ್ರಶ್ನೆಗೆ ತಮ್ಮದೇ ಸ್ಟೈಲ್ನಲ್ಲಿ ಉತ್ತರಿಸಿದ ಶಿವರಾಜ್ಕುಮಾರ್
ಶಿವರಾಜ್ಕುಮಾರ್ ಅವರು ಟ್ವಿಟರ್ನಲ್ಲಿ #AskNimmaShivanna ಸೆಷನ್ ನಡೆಸಿದ್ದಾರೆ. ಅಭಿಮಾನಿಗಳು ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಅವರು ತಮ್ಮದೇ ಸ್ಟೈಲ್ನಲ್ಲಿ ಉತ್ತರ ನೀಡಿದ್ದಾರೆ.
ಶಿವರಾಜ್ಕುಮಾರ್ (Shivarajkumar) ನಟನೆಯ ‘ಘೋಸ್ಟ್’ ಸಿನಿಮಾ (Ghost Movie) ಅಕ್ಟೋಬರ್ 19ರಂದು ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಶ್ರೀನಿ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಶಿವಣ್ಣ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಕಾರಣದಿಂದಲೇ ಸಿನಿಮಾಗೆ ಭರ್ಜರಿ ಪ್ರಮೋಷನ್ ನೀಡಲು ಅವರು ರೆಡಿ ಆಗಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳಲು ಅವರು ನಿರ್ಧರಿಸಿದ್ದಾರೆ.
ಶಿವರಾಜ್ಕುಮಾರ್ ಅವರು ಟ್ವಿಟರ್ನಲ್ಲಿ #AskNimmaShivanna ಸೆಷನ್ ನಡೆಸಿದ್ದಾರೆ. ಅಭಿಮಾನಿಗಳು ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಅವರು ತಮ್ಮದೇ ಸ್ಟೈಲ್ನಲ್ಲಿ ಉತ್ತರ ನೀಡಿದ್ದಾರೆ. ‘ಕ್ಯಾಪ್ಟನ್ ಮಿಲ್ಲರ್ ಬಗ್ಗೆ ಹೇಳಿ’ ಎಂದು ಅಭಿಮಾನಿಯೋರ್ವ ಪ್ರಶ್ನೆ ಮಾಡಿದ್ದ. ಇದಕ್ಕೆ ಶಿವಣ್ಣ ಉತ್ತರಿಸಿದ್ದಾರೆ. ‘ಇಡೀ ತಂಡದ ಜೊತೆ ಕೆಲಸ ಮಾಡಿದ್ದು ಖುಷಿ ಇದೆ. ಧನುಷ್ ಜೊತೆ ಕೆಲಸ ಮಾಡಿದ ಬಗ್ಗೆ ಸಂತಸ ಇದೆ’ ಎಂದಿದ್ದಾರೆ ಶಿವರಾಜ್ಕುಮಾರ್.
Humbleness Personified. I observed that Dhoni doesn’t speak much, but there is so much you can learn just by observing him. As a cricket fan I’ve always loved his captaincy but as a human I’ve loved how he has been calm in the face of adversities. #Dhoni #AskNimmaShivanna… https://t.co/3zKaI1fJzi
— DrShivaRajkumar (@NimmaShivanna) September 28, 2023
Loved working with the team. Also happy to be working with @dhanushkraja his passion towards cinema is phenomenal #CaptainMiller #AskNimmaShivanna #GhostOct19 #Ghost https://t.co/TJT5Aq9Bxq
— DrShivaRajkumar (@NimmaShivanna) September 28, 2023
‘ಐತಿಹಾಸಿಕ, ಪೌರಾಣಿಕ ಪಾತ್ರ ಮಾಡೋದು ಯಾವಾಗ’ ಎಂಬ ಪ್ರಶ್ನೆಗೆ ‘ಶೀಘ್ರವೇ..’ ಎನ್ನುವ ಉತ್ತರ ಬಂದಿದೆ. ‘ಒಂದು ಸಾಲಿನಲ್ಲಿ ನಿಮ್ಮ ಪ್ರಯಾಣದ ಬಗ್ಗೆ ಹೇಳಿ ಎನ್ನುವ ಪ್ರಶ್ನೆಗೆ, ‘ಆನಂದ.. ಆನಂದ.. ಆನಂದ’ ಎಂದಿದ್ದಾರೆ ಶಿವಣ್ಣ. ಇನ್ನು, ಧೋನಿ ಅವರನ್ನು ಭೇಟಿ ಮಾಡಿದ ಕ್ಷಣ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಮಹೇಶ್ ಬಾಬು, ಸೂರ್ಯ ಅಭಿಮಾನಿ ಸಂಘಟನೆಗಳು ಮಾಡಿದ ಟ್ವೀಟ್ಗೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
He’s a man of few words. Extremely dignified, and professional in his approach. It’s a pleasure to see such soft spoken person explode on screen with electrifying performances. Wishing you the best @urstrulyMahesh garu and the to the fans that have loved you so much!… https://t.co/Jnb7IjRuop
— DrShivaRajkumar (@NimmaShivanna) September 28, 2023
ಇದನ್ನೂ ಓದಿ: ಕರ್ನಾಟಕ ಬಂದ್: ಚಿತ್ರರಂಗದ ಪ್ರತಿಭಟನೆಗೆ ಶಿವರಾಜ್ಕುಮಾರ್ ನೇತೃತ್ವ
ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವನ್ನು ವಿರೋಧಿಸಿ ಇಂದು (ಸೆಪ್ಟೆಂಬರ್ 29) ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಕನ್ನಡ ಚಿತ್ರರಂಗದವರೂ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಶಿವರಾಜ್ಕುಮಾರ್ ಇದರ ನೇತೃತ್ವ ವಹಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ