AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಗ್ ಹಾಕಿಸಿದ್ದೇ ದರ್ಶನ್​ಗೆ ಕಂಟಕ: ಕಾಳಿ ಉಪಾಸಕಿ ಚಂದಾ ಪಾಂಡೆ

ಉಗುರಿನಲ್ಲಿ ಹೋಗಬಹುದಾಗಿದ್ದ ಕೆಲಸಕ್ಕೆ ಕೊಡಲಿ ತೆಗೆದುಕೊಂಡ ಕಾರಣ ದರ್ಶನ್ ಇಂದು ಜೈಲು ಸೇರಿದ್ದಾರೆ. ದರ್ಶನ್​ರ ಈ ಸ್ಥಿತಿಗೆ ಅವರಿಗಿದ್ದ ಗಂಡಾಂತರವೇ ಕಾರಣ ಎಂದಿರುವ ಕಾಳಿ ಉಪಾಸಕಿ ಚಂದಾ ಪಾಂಡೆ, ಈ ಹಿಂದೆ ನಾನು ದರ್ಶನ್​ಗೆ ಎಚ್ಚರಿಕೆ ಹೇಳಿದ್ದೆ, ಆದರೆ ಈ ಬಾರಿ ಎಚ್ಚರಿಕೆ ಹೇಳಲು ಸಾಧ್ಯವಾಗಲಿಲ್ಲ. ಅದಕ್ಕೆ ಅವರೇ ಕಾರಣ ಎಂದಿದ್ದಾರೆ.

ವಿಗ್ ಹಾಕಿಸಿದ್ದೇ ದರ್ಶನ್​ಗೆ ಕಂಟಕ: ಕಾಳಿ ಉಪಾಸಕಿ ಚಂದಾ ಪಾಂಡೆ
ಮಂಜುನಾಥ ಸಿ.
|

Updated on: Jul 26, 2024 | 3:53 PM

Share

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದಾರೆ. ಉಗುರಿನಲ್ಲಿ ಹೋಗಬಹುದಾಗಿದ್ದ ಪ್ರಕರಣಕ್ಕೆ ಕೊಡಲಿ ಎತ್ತುಕೊಂಡು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಅವರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳು ಹಲವರಿಂದ ನಡೆಯುತ್ತಿದೆ. ಇದರ ಜೊತೆಗೆ ಕೆಲವರು ದರ್ಶನ್​ರ ಜಾತಕ ವಿಶ್ಲೇಷಣೆಯನ್ನೂ ಸಹ ಮಾಡಿದ್ದಾರೆ. ಇದೀಗ ಕಾಳಿ ಉಪಾಸಕಿ ಚಂದಾ ಪಾಂಡೇ ಅಮ್ಮಾಜಿ ಅವರು ದರ್ಶನ್​ಗೆ ಈ ಸಂಕಷ್ಟ ಎದುರಾಗಲು ಅವರ ತಲೆ ಗೂದಲಿನಿಂದ ಹಿಡಿದು ಹಲವು ಕಾರಣಗಳಿವೆ ಎಂದಿದ್ದು, ಅವುಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಟಿವಿ9 ಜೊತೆಗೆ ಮಾತನಾಡಿರುವ ಚಂದಾ ಪಾಂಡೆ, ‘2018ಕ್ಕೂ ಮುಂಚೆ ದರ್ಶನ್ ಗೆಳೆಯ ಹೇಮಂತ್ ಎಂಬುವರು ನಮ್ಮ ಮನೆಗೆ ಬರುತ್ತಿದ್ದರು. ದರ್ಶನ್, ದಸರಾ ಕಾರ್ ರೇಸ್​ನಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದ್ದರು. ಆದರೆ ನಾನು ಬೇಡ, ದರ್ಶನ್​ಗೆ ಕಂಟಕ ಇದೆ. ರೇಸ್​ಗೆ ಹೋದರೆ ಮರಳಿ ಬರುವುದಿಲ್ಲ ಅದನ್ನು ತಪ್ಪಿಸು ಎಂದಿದ್ದೆ. ಹಾಗೆಯೇ ಆತ ಅದನ್ನು ತಪ್ಪಿಸಿದ. ಆದರೆ ಅದಾದ ಸ್ವಲ್ಪ ದಿನಕ್ಕೆ ದರ್ಶನ್​ಗೆ ಕಾರು ಅಪಘಾತವಾಗಿ ಕೈಗೆ ಪೆಟ್ಟಾಯ್ತು. ಆ ಘಟನೆ ಆದ ಬಳಿಕ ದರ್ಶನ್ ನನ್ನ ಬಂದು ಭೇಟಿ ಆಗಿ ಆಶೀರ್ವಾದ ಪಡೆದರು. ನಾನು ಕೆಲವು ಸಲಹೆಗಳನ್ನು ಆಗಲೇ ನೀಡಿದ್ದೆ. ಕೆಲವು ದೊಡ್ಡ ಗಂಡಾಂತರ ಮುಂದಿದೆ ಎಂದು ಸಹ ಹೇಳಿದ್ದೆ’ ಎಂದಿದ್ದಾರೆ.

ಇದನ್ನೂ ಓದಿ:ದರ್ಶನ್​ಗಾಗಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾ ಹೋಮ ಮಾಡಿಸಿದ ವಿಜಯಲಕ್ಷ್ಮೀ

‘ಆದರೆ ದರ್ಶನ್ ಬಂದ ಸಮಯದಲ್ಲಿ ಅವರೊಟ್ಟಿಗೆ ನನ್ನ ಫೋಟೊ ವೈರಲ್ ಆಯ್ತು. ಆದರೆ ಆ ಫೋಟೊವನ್ನು ಇಟ್ಟುಕೊಂಡು ನಾನು ಪ್ರಚಾರ ಪಡೆಯುತ್ತಿದ್ದೇನೆ ಎಂದು ದರ್ಶನ್ ಗೆ ಅನಿಸಿ, ಮನಸ್ತಾಪ ಮೂಡಿತು. ಅಸಲಿಗೆ ಆ ಫೋಟೊ ಅನ್ನು ದರ್ಶನ್​ರ ಸಂಘದ ಅಧ್ಯಕ್ಷನೊಬ್ಬ ವೈರಲ್ ಮಾಡಿದ್ದ. ಮನಸ್ತಾಪದ ಬಳಿಕ ದರ್ಶನ್ ನನ್ನನ್ನು ಸಂಪರ್ಕಿಸಲಿಲ್ಲ, ನಾನು ಸಹ ದರ್ಶನ್ ಅನ್ನು ಸಂಪರ್ಮಿಸಲಿಲ್ಲ. ಆದರೆ ದರ್ಶನ್​ಗೆ ಯಾವಾಗ ಎರಡನೇ ಬಾರಿ ಕೈಗೆ ಪೆಟ್ಟಾಯ್ತೋ ಆಗ ನನಗೆ ದರ್ಶನ್​ಗಿರುವ ಗಂಡಾಂತರ ನೆನಪಿಗೆ ಬಂತು. ಆದರೆ ನನ್ನ ಸಂಪರ್ಕದಲ್ಲಿ ದರ್ಶನ್ ಇಲ್ಲದ ಕಾರಣ ನಾನು ಅವರಿಗೆ ಏನನ್ನೂ ಹೇಳಲು ಹೋಗಲಿಲ್ಲ’ ಎಂದಿದ್ದಾರೆ.

ಮೊದಲ ಭಾರಿ ದರ್ಶನ್​ಗೆ ಕೈ ಮುರಿದಾಗ ಶನಿ ಭುಕ್ತಿ ನಡೆಯುತ್ತಿತ್ತು, ಏಳು ವರ್ಷಗಳ ಒಳಗೆ ಮತ್ತೆ ಕೈ ಮುರಿದಿದೆ ಹಾಗಾಗಿ ಮತ್ತೆ ಶನಿಯ ಸಮಸ್ಯೆಯೇ ಅವರನ್ನು ಕಾಡಿದೆ. ಮೂಳೆ ಮುರಿಯುವುದು ಶನಿಯ ಪ್ರಭಾವದ ಮುನ್ಸೂಚನೆ. ಇದರ ಜೊತೆಗೆ ಅವರು ಇದೇ ಸಂದರ್ಭದಲ್ಲಿ ತಲೆ ಕೂದಲಿಗೆ ಏನೋ ಮಾಡಿಸಿಕೊಂಡರು. ಕೂದಲನ್ನು ಶನಿಯೊಟ್ಟಿಗೆ ಹೋಲಿಸುತ್ತೀವಿ. ಹೀಗಿರುವಾಗ ಅವರು ಕೂದಲು ಶೈಲಿ ಬದಲಾಯಿಸಿಕೊಂಡಿದ್ದು ಸಹ ಗಂಡಾಂತರದ ಮುನ್ಸೂಚನೆಯೇ. ಅವರು ಕೂದಲೂ ಕಸಿ ಮಾಡಿಸಿಕೊಳ್ಳದೇ ಇದ್ದಿದ್ದರೆ ಈ ಪ್ರಕರಣ ಖಂಡಿತ ಆಗುತ್ತಿರಲಿಲ್ಲ ಎಂದಿದ್ದಾರೆ ಚಂದಾ ಪಾಂಡೆ. ಅಲ್ಲದೆ, ದರ್ಶನ್ ನಟಿಸುತ್ತಿದ್ದ ಸಿನಿಮಾ ಹೆಸರು ‘ಡೆವಿಲ್’ ಎಂದಿದ್ದು ಅದರ ಪರಿಣಾಮವೂ ಸಹ ದರ್ಶನ್​ ಮೇಲೆ ಆಗಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!