‘ಸಲಾಂ ರಾಕಿ ಭಾಯ್’; ಯಶ್ ಮಗಳು ಅದೆಷ್ಟು ಕ್ಯೂಟ್ ಆಗಿ ಯಶ್​ರನ್ನು ಕರೆಯುತ್ತಾಳೆ ನೋಡಿ

ಆಯ್ರಾ ಸಖತ್ ಚೂಟಿ. ಅವಳ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ರಾಧಿಕಾ ಪಂಡಿತ್ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅವಳು ಮಾಡುವ ಕೀಟಲೆಗಳು ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಅದರಲ್ಲೂ ಆಯ್ರಾಳ ನಗು ಫ್ಯಾನ್ಸ್​ಗೆ ಸಖತ್ ಇಷ್ಟ.

‘ಸಲಾಂ ರಾಕಿ ಭಾಯ್’; ಯಶ್ ಮಗಳು ಅದೆಷ್ಟು ಕ್ಯೂಟ್ ಆಗಿ ಯಶ್​ರನ್ನು ಕರೆಯುತ್ತಾಳೆ ನೋಡಿ
ಆಯ್ರಾ
Edited By:

Updated on: May 01, 2022 | 2:00 PM

‘ಕೆಜಿಎಫ್ 2’ ಸಿನಿಮಾ (KGF: Chapter 2) ತೆರೆಗೆ ಬಂದು ಕೆಲವು ವಾರಗಳು ಕಳೆದರೂ ಹವಾ ಮಾತ್ರ ಇನ್ನೂ ನಿಂತಿಲ್ಲ. ಚಿತ್ರದ ಡೈಲಾಗ್​ಗಳು ಇನ್​ಸ್ಟಾಗ್ರಾಮ್​ ರೀಲ್ಸ್​ನಲ್ಲಿ ಸಖತ್​ ಟ್ರೆಂಡಿಂಗ್​ನಲ್ಲಿದೆ. ‘ಕೆಜಿಎಫ್ 2’ ಡೈಲಾಗ್​ಅನ್ನು ಹೇಳುವ ವಿಡಿಯೋಗಳನ್ನು ಅನೇಕರು ಪೋಸ್ಟ್ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ‘ಸಲಾಂ ರಾಕಿ ಭಾಯ್’ ಎನ್ನುವ ಡೈಲಾಗ್​ ಕೂಡ ಬರುತ್ತದೆ. ಮೊದಲ ಚಾಪ್ಟರ್​​ನಲ್ಲಿ ‘ಸಲಾಂ ರಾಕಿ ಭಾಯ್​’ ಹೆಸರಿನ ಸಾಂಗ್ ಕೂಡ ಇತ್ತು. ಈ ಡೈಲಾಗ್​ಅನ್ನು ಯಶ್ (Yash) ಮಗಳು ಆಯ್ರಾ (Ayra) ಹೇಳಿದ್ದಾಳೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಆಯ್ರಾ ಸಖತ್ ಚೂಟಿ. ಅವಳ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ರಾಧಿಕಾ ಪಂಡಿತ್ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅವಳು ಮಾಡುವ ಕೀಟಲೆಗಳು ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಅದರಲ್ಲೂ ಆಯ್ರಾಳ ನಗು ಫ್ಯಾನ್ಸ್​ಗೆ ಸಖತ್ ಇಷ್ಟ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮಕ್ಕಳು ಎಂದರೆ ಫ್ಯಾನ್ಸ್​ ಗಮನ ಅವರ ಮೇಲೂ ನೆಟ್ಟಿರುತ್ತದೆ. ಅದೇ ರೀತಿ ಆಯ್ರಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗ ಯಶ್ ಖ್ಯಾತಿ ಹೆಚ್ಚಿರುವುದರಿಂದ ಅವರ ಮಗಳ ಖ್ಯಾತಿಯೂ ಹಿರಿದಾಗಿದೆ.

‘ಸಲಾಂ ರಾಕಿ ಭಾಯ್​..ರಾಕ್ ರಾಕ್​ ರಾಕಿ’ ಎಂದು ಹೇಳಿದ್ದಾಳೆ ಆಯ್ರಾ. ಇದನ್ನು ಹೇಳಿದ ನಂತರ ಅವಳು ಮನಸ್ಫೂರ್ತಿಯಾಗಿ ನಕ್ಕಿದ್ದಾಳೆ. ಇದು ಫ್ಯಾನ್ಸ್​ಗೆ ಸಖತ್ ಇಷ್ಟವಾಗಿದೆ. ಈ ವಿಡಿಯೋ ಲಕ್ಷಾಂತರ ಲೈಕ್ಸ್ ಹಾಗೂ ವೀವ್ಸ್ ಪಡೆದುಕೊಂಡಿದೆ. ‘ರಾಕಿ ಭಾಯ್ ಬಗ್ಗೆ ಫನ್ ಮಾಡುವ ಮೂಲಕ ದಿನ ಆರಂಭಗೊಳ್ಳುತ್ತದೆ’ ಎಂಬರ್ಥ ಬರುವ ರೀತಿಯಲ್ಲಿ ಯಶ್ ಕ್ಯಾಪ್ಶನ್ ನೀಡಿದ್ದಾರೆ.

ಆಯ್ರಾಳನ್ನು ಕಂಡರೆ ಯಶ್​ಗೆ ಸಖತ್ ಇಷ್ಟ. ಅವಳನ್ನು ತುಂಬಾನೇ ಮುದ್ದಿನಿಂದ ಸಾಕಿದ್ದಾರೆ. ಅವಳು ಜನಿಸಿದಾಗ ಸಖತ್ ಸುದ್ದಿ ಆಗಿದ್ದಳು. ಅವಳಿಗೆ ಏನು ಹೆಸರು ಇಡುತ್ತಾರೆ ಎನ್ನುವ ಬಗ್ಗೆಯೂ ಚರ್ಚೆ ಆಗಿತ್ತು. ಯಶ್ ಹಾಗೂ ರಾಧಿಕಾ ಹೆಸರಿನ ಅಕ್ಷರಗಳನ್ನು ಸೇರಿಸಿ ಅವಳಿಗೆ ಯಶಿಕಾ ಎಂದು ಹೆಸರು ಇಡಲಾಗುತ್ತದೆ ಎಂದೇ ಫ್ಯಾನ್ಸ್ ಅಂದುಕೊಂಡಿದ್ದರು. ಆದರೆ, ಕೊನೆಗೆ ಆಯ್ರಾ ಎನ್ನುವ ಹೆಸರನ್ನು ಇಡಲಾಯಿತು.

ಇದನ್ನೂ ಓದಿ: ಯಶ್​ ಜನ್ಮದಿನಕ್ಕೆ ಆಯ್ರಾ, ಯಥರ್ವ್​ ಕೊಟ್ಟ ಗಿಫ್ಟ್​ ಏನು? ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್​

ಮಗಳು ಆಯ್ರಾಗೆ ಕನ್ನಡ ಪಾಠ; ರಾಧಿಕಾ ಪಂಡಿತ್ ಹಂಚಿಕೊಂಡ್ರು​ ವಿಶೇಷ ವಿಡಿಯೋ