ಸೂಪರ್ ಹಿಟ್ ಸಿನಿಮಾದಲ್ಲಿ ಗಿಲ್ಲಿ ನಟ: ಟೀಸರ್ ತುಂಬಾ ಸಿಕ್ಕಾಪಟ್ಟೆ ನಗು

ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಕಾಮಿಡಿ ಮೂಲಕ ಎಲ್ಲರನ್ನೂ ನಗಿಸುತ್ತಿದ್ದಾರೆ. ಅವರ ಹೀರೋ ಆಗಿ ನಟಿಸಿರುವ ‘ಸೂಪರ್ ಹಿಟ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಗಿಲ್ಲಿ ನಟ ಅವರ ಜೊತೆ ಹಲವು ಕಾಮಿಡಿ ಕಲಾವಿದರ ದಂಡೇ ಇದೆ.

ಸೂಪರ್ ಹಿಟ್ ಸಿನಿಮಾದಲ್ಲಿ ಗಿಲ್ಲಿ ನಟ: ಟೀಸರ್ ತುಂಬಾ ಸಿಕ್ಕಾಪಟ್ಟೆ ನಗು
Super Hit Kannada Movie Poster

Updated on: Dec 02, 2025 | 4:05 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ವೀಕ್ಷಕರಿಗೆಲ್ಲ ಗಿಲ್ಲಿ ನಟ (Gilli Nata) ಅವರು ಫೇವರಿಟ್ ಆಗಿದ್ದಾರೆ. ಈಗಾಗಲೇ ಹಲವು ರಿಯಾಲಿಟಿ ಶೋಗಳ ಮೂಲಕ ಅವರು ಮಿಂಚಿದ್ದಾರೆ. ಈಗ ಅವರು ‘ಸೂಪರ್ ಹಿಟ್’ (Super Hit) ಸಿನಿಮಾಗೆ ಹೀರೋ ಆಗಿದ್ದಾರೆ. ಅವರ ಜೊತೆ ಗೌರವ್ ಶೆಟ್ಟಿ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾಗೆ ಶ್ವೇತಾ ನಾಯಕಿಯಾಗಿದ್ದಾರೆ. ‘ಸೂಪರ್ ಹಿಟ್’ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ನೋಡಿದ ಪ್ರೇಕ್ಷಕರಿಗೆ ನಗುವಿನ ಭರಪೂರ ಮನರಂಜನೆ ಸಿಕ್ಕಿದೆ. ವಿಜಯಾನಂದ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

‘ಸೂಪರ್ ಹಿಟ್’ ಟೀಸರ್ ಬಿಡುಗಡೆ ಮಾಡಿದ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿದರು. ‘ಸು ಫ್ರಮ್ ಸೋ’ ರೀತಿಯೇ ‘ಸೂಪರ್ ಹಿಟ್’ ಸಿನಿಮಾ ಕೂಡ ಪ್ರೇಕ್ಷಕರ ಮನ ಗೆಲ್ಲಲಿದೆ ಎಂಬ ಭರವಸೆ ಚಿತ್ರತಂಡಕ್ಕೆ ಇದೆ. ಸಿನಿಮಾ ಬಿಡುಗಡೆ ಆದ ಬಳಿಕ ಸೂಪರ್ ಹಿಟ್ ಎನ್ನುವುದು ಸಹಜ. ಆದರೆ ಈ ಸಿನಿಮಾಗೆ ಶೀರ್ಷಿಕೆಯೇ ಸೂಪರ್ ಹಿಟ್. ಅದಕ್ಕೂ ಒಂದು ಕಾರಣ ಇದೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ವಿಜಯಾನಂದ ವಿವರಿಸಿದರು.

ನಿರ್ಮಾಪಕರಾದ ಜಿ. ಉಮೇಶ್ ಅವರು ಒಂದಷ್ಟು ಏಳುಬೀಳು ಕಂಡಿದ್ದಾರೆ. ಸೂಪರ್ ಹಿಟ್ ಸಿನಿಮಾವನ್ನು ನಿರ್ಮಾಣ ಮಾಡಬೇಕು ಎಂಬ ಕನಸನ್ನು ಅವರು ಹೊಂದಿದ್ದರು. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡಿದ್ದ ನಿರ್ದೇಶಕರು, ಕಥೆಗೂ ಹೊಂದಿಕೆ ಆಗುತ್ತೆ ಎಂಬ ಕಾರಣದಿಂದ ‘ಸೂಪರ್ ಹಿಟ್’ ಎಂಬುದನ್ನೇ ಶೀರ್ಷಿಕೆ ಆಗಿಸಿದ್ದಾರೆ. ರನ್ನಿಂಗ್ ಸಕ್ಸಸ್‌ಫುಲಿ ಎಂಬ ಟ್ಯಾಗ್ ಲೈನ್ ಕೂಡ ಈ ಶೀರ್ಷಿಕೆ ಇದೆ.

‘ಸೂಪರ್ ಹಿಟ್’ ಸಿನಿಮಾ ಟೀಸರ್:

ಖ್ಯಾತ ಸಿನಿಮಾ ಸಾಹಿತಿ ನಾಗೇಂದ್ರ ಪ್ರಸಾದ್ ಅವರ ಸಹೋದರನಾದ ವಿಜಯಾನಂದ ಅವರು ಕಮರ್ಶಿಯಲ್ ಧಾಟಿಯಲ್ಲಿ ಹಾಸ್ಯ ಪ್ರಧಾನವಾಗಿ ‘ಸೂಪರ್ ಹಿಟ್’ ಸಿನಿಮಾ ಮಾಡಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಈ ಚಿತ್ರದ ಎಲ್ಲ ಕೆಲಸಗಳು ಪೂರ್ಣಗೊಂಡಿವೆ. ಆದಷ್ಟು ಬೇಗ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಅಣ್ಣ ಎಂದು ಕೂಗಾಡಿದ ಕಾವ್ಯ: ಐ ಲವ್ ಯೂ ಅಂತ ಚೀರಾಡಿದ ಗಿಲ್ಲಿ ನಟ

ಕಾಮಿಡಿ ಥ್ರಿಲ್ಲರ್ ಶೈಲಿಯಲ್ಲಿ ‘ಸೂಪರ್ ಹಿಟ್’ ಸಿನಿಮಾ ಮೂಡಿಬಂದಿದೆ. ಇದು ಕನ್ನಡ ಚಿತ್ರರಂಗದಲ್ಲಿ ಮೊದಲ ಪ್ರಯತ್ನ ಎಂದು ನಿರ್ದೇಶಕರು ಹೇಳಿದ್ದಾರೆ. ‘ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್’ ಮೂಲಕ ಜಿ. ಉಮೇಶ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನಾಗೇಂದ್ರ ಪ್ರಸಾದ್ ಕೂಡ ಒಂದು ಪಾತ್ರ ಮಾಡಿದ್ದಾರೆ.

Super Hit Kannada Movie Team

ಸಾಧು ಕೋಕಿಲ, ನಾಗವರ್ಧನ್, ಪ್ರಮೋದ್ ಶೆಟ್ಟಿ, ಡ್ರ್ಯಾಗನ್ ಮಂಜು, ಸೀನು ಭಾಯ್, ಜೀಜಿ, ಟೆನ್ನಿಸ್ ಕೃಷ್ಣ, ಗಿರಿ, ಕರಿಸುಬ್ಬು, ಸೋಮಶೇಖರ್, ವಂಶಿ, ಮಂಜಣ್ಣ, ಅಶ್ವಿನಿ ರಾವ್, ಬಿ.ಎನ್. ಮಂಗಳ, ಸ್ವಪ್ನ ಶೆಟ್ಟಿಗಾರ್, ಮಂಗಳೂರು ಮೀನನಾಥ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಆರ್.ಡಿ. ನಾಗಾರ್ಜುನ ಅವರ ಛಾಯಾಗ್ರಹಣ, ಶ್ರೀಕಾಂತ್ ಅವರ ಸಂಕಲನ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ಸಂಗೀತ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.