ಫಿಲಂ ಫೆಸ್ಟ್:ನಟಿ ಶಬಾನಾ ಅಜ್ಮಿಗೆ ಜೀವಮಾನ ಸಾಧನೆ ಪ್ರಶಸ್ತಿ

|

Updated on: Mar 08, 2025 | 6:19 PM

Shabana Azmi: ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಇಂದು ಮುಕ್ತಾಯ ಆಗಲಿದೆ. ಖ್ಯಾತ ಬಹುಭಾಷಾ ನಟಿ, ಆರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ ಶಬಾನಾ ಆಜ್ಮಿ ಅವರಿಗೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಶನಾನಾ ಆಜ್ಮಿ ಅವರ ಜೀವನ, ಸಾಧನೆ ಇಲ್ಲಿ ತಿಳಿಯಿರಿ...

ಫಿಲಂ ಫೆಸ್ಟ್:ನಟಿ ಶಬಾನಾ ಅಜ್ಮಿಗೆ ಜೀವಮಾನ ಸಾಧನೆ ಪ್ರಶಸ್ತಿ
Shabana Azmi
Follow us on

16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಇಂದು (ಮಾರ್ಚ್ 08) ಮುಕ್ತಾಯವಾಗಲಿದೆ. ಇಂದು ಪ್ರಶಸ್ತಿ ವಿಜೇತ ಸಿನಿಮಾಗಳ ಪಟ್ಟಿ ಪ್ರಕಟಣೆ ಆಗಲಿದೆ. ಜೊತೆಗೆ ಹಲವು ಹಿರಿಯ ಸಿನಿಮಾ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ಸಹ ಕೊಡಲಾಗುತ್ತದೆ. ಪ್ರತಿ ವರ್ಷವೂ ಸಹ ಸಿನಿಮಾ ರಂಗದಲ್ಲಿ ಅಪ್ರತಿಮ ಸಾಧನೆ ಮಾಡಿದ ಹಿರಿಯ ನಟ-ನಟಿಯರನ್ನು ಗುರುತಿಸಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಬಾರಿ ಖ್ಯಾತ ನಟಿ ಶಬಾನಾ ಅಜ್ಮಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಭಾರತದ ಹೆಸರಾಂತ ಕವಿ,ಸಾಹಿತಿ ಕೈಫ್-ಇ-ಅಜ್ಮಿ ಅವರ ಮಗಳಾಗಿರುವ ಶಬಾನಾ ಅಜ್ಮಿ ವಿದ್ಯಾರ್ಥಿ ದೆಸೆಯಿಂದಲೂ ಕಲೆ,ಸಾಹಿತ್ಯ, ಸಾಂಸ್ಕೃತಿಕ ರಂಗದಲ್ಲಿ ತೊಡಗಿಸಿಕೊಂಡು ಸಿನಿಮಾ ಕ್ಷೇತ್ರದಲ್ಲಿ ಮೇರುಸಾಧನೆ ಮಾಡಿದ್ದಾರೆ. ವೈವಿಧ್ಯತೆಯಲ್ಲಿ ಏಕತೆ ಸಾಧಿಸಿರುವ ಭಾರತದ ಬಹುತ್ವ ಪರಂಪರೆಯ ಹೆಮ್ಮೆಯ ವಾರಸುದಾರರಾಗಿರುವ ಅವರು ದೇಶದ ಚಿತ್ರರಂಗಕ್ಕೆ ಸುಮಾರು ಐದು ದಶಕಗಳ ಕಾಲ ಸಲ್ಲಿಸಿರುವ ಸೇವೆ ಪರಿಗಣಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಈ ಪ್ರಶಸ್ತಿ ನೀಡಿ ಗೌರವಿಸುತ್ತಿವೆ.ಪ್ರಶಸ್ತಿಯು 10 ಲಕ್ಷ ರೂ.ನಗದು,ಸ್ಮರಣಿಕೆ ಒಳಗೊಂಡಿದೆ.

ಶಬಾನಾ ಆಜ್ಮಿ ಭಾರತೀಯ ಚಿತ್ರರಂಗದ ಅದ್ಭುತ ನಟಿಯರಲ್ಲಿ ಒಬ್ಬರು. ತಮ್ಮ ವಾರಗೆಯ ನಟಿಯರಾದ ರೇಖಾ, ಜಯಾ ಬಚ್ಚನ್, ಹೇಮಾಮಾಲಿನಿ ಅವರಂತೆ ಕಮರ್ಶಿಯಲ್ ಸಿನಿಮಾಗಳಲ್ಲಿ ತೊಡಗಿಕೊಳ್ಳದೆ, ನಟನೆಗೆ ಒತ್ತು ಇರುವ, ಘನ ಸಂದೇಶವುಳ್ಳ ಸಿನಿಮಾಗಳಲ್ಲಿ ಮಾತ್ರವೇ ನಟಿಸಿದರು ನಟಿ ಶಬಾನಾ ಆಜ್ಮಿ. 1974 ರಲ್ಲಿ ಬಿಡುಗಡೆ ಆದ ‘ಅಂಕುರ್’ ಸಿನಿಮಾ ಮೂಲಕ ನಟನೆ ಆರಂಭಿಸಿದ ಶಬಾನಾ ಆಜ್ಮಿ ತಮ್ಮ ಮೊದಲ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಈ ವರೆಗೆ ಆರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವುದು ಶಾಬಾನಾ ಆಜ್ಮಿ ಅವರ ನಟನಾ ಪ್ರತಿಭೆಗೆ ಸಾಕ್ಷಿ.

ಇದನ್ನೂ ಓದಿ:ದೇವಿಶ್ರೀ ಪ್ರಸಾದ್ ಎದುರು ತಮ್ಮ ಮ್ಯೂಸಿಕ್ ಹಿಸ್ಟರಿ ಬಿಚ್ಚಿಟ್ಟ ಸಾಧುಕೋಕಿಲ

ಶಬಾನಾ ಆಜ್ಮಿ ಕನ್ನಡದ ಕೇವಲ ಒಂದು ಸಿನಿಮಾದಲ್ಲಿ ಮಾತ್ರವೇ ನಟಿಸಿದ್ದಾರೆ. ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದಾಗಿರುವ ‘ಕನ್ನೇಶ್ವರ ರಾಮ’ ಸಿನಿಮಾನಲ್ಲಿ ಶಬಾನಾ ಆಜ್ಮಿ ನಾಯಕಿ. ಎಂಎಸ್ ಸತ್ಯು ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ಅನಂತ್ ನಾಗ್ ನಾಯಕ, ಅಮೋಲ್ ಪಾಲೇಕರ್ ಸಹ ನಟಿಸಿದ್ದರು. ಇದೀಗ ಶಬಾನಾ ಆಜ್ಮಿ ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಅವರಿಗೆ 16ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:11 pm, Sat, 8 March 25