Bhajarangi 2: ಮತ್ತೆ ಟ್ರ್ಯಾಕ್​ಗೆ ಮರಳಿದ ‘ಭಜರಂಗಿ 2’; ಗೆಲುವಿನ ಹಾದಿ ಹಿಡಿದ ಶಿವಣ್ಣನ ಸಿನಿಮಾ ​

| Updated By: ರಾಜೇಶ್ ದುಗ್ಗುಮನೆ

Updated on: Nov 04, 2021 | 3:09 PM

Bhajarangi 2 Collec tion:ಈ ವಾರದಿಂದ ನಿಧಾನವಾಗಿ ಸಿನಿಮಾದ ಕಲೆಕ್ಷನ್​ ಹೆಚ್ಚುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ ಈ ಸಿನಿಮಾಗೆ 15 ಕೋಟಿ ಖರ್ಚಾಗಿದೆ. ಸಿನಿಮಾದ ಹಿಂದಿ ಡಬ್ಬಿಂಗ್​ ಹಕ್ಕು 5 ಕೋಟಿ ರೂಪಾಯಿಗೆ ಮಾರಾಟವಾಗಿ ಎನ್ನಲಾಗಿದೆ.

Bhajarangi 2: ಮತ್ತೆ ಟ್ರ್ಯಾಕ್​ಗೆ ಮರಳಿದ ‘ಭಜರಂಗಿ 2’; ಗೆಲುವಿನ ಹಾದಿ ಹಿಡಿದ ಶಿವಣ್ಣನ ಸಿನಿಮಾ ​
ಶಿವರಾಜ್​ಕುಮಾರ್​
Follow us on

ಶಿವರಾಜ್​ಕುಮಾರ್​ ಹಾಗೂ ಎ.ಹರ್ಷ ಕಾಂಬಿನೇಷನ್​ನಲ್ಲಿ ಮೂಡಿ ಬಂದ ಮೂರನೇ ಸಿನಿಮಾ  ‘ಭಜರಂಗಿ 2’. ಈ ಚಿತ್ರದ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಳ್ಳಲಾಗಿತ್ತು. ಆದರೆ, ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದಾಗ್ಯೂ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಲಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಲೆಕ್ಕಾಚಾರ ತಲೆಕೆಳಗಾಗಿತ್ತು. ಪುನೀತ್​ ನಿಧನ ಹಿನ್ನೆಲೆಯಲ್ಲಿ ಚಿತ್ರಮಂದಿರದತ್ತ ಹೆಜ್ಜೆ ಹಾಕುವವರ ಸಂಖ್ಯೆ ಕಡಿಮೆ ಆಗಿತ್ತು. ಆದರೆ, ಈಗ ಮತ್ತೆ ಚಿತ್ರಮಂದಿರದತ್ತ ಜನರು ಬರುತ್ತಿದ್ದಾರೆ. ನಿಧಾನವಾಗಿ ಕಲೆಕ್ಷನ್​ ಹೆಚ್ಚುತ್ತಿದೆ.

ಅಕ್ಟೋಬರ್​ 29ರಂದು  ‘ಭಜರಂಗಿ 2’ ಸಿನಿಮಾ ತೆರೆಗೆ ಬಂದಿತ್ತು. 10 ಗಂಟೆ ಶೋ ಪೂರ್ಣಗೊಳ್ಳುವ ಮೊದಲೇ ಶಾಕಿಂಗ್​ ಸುದ್ದಿ ಹೊರಬಿದ್ದಿತ್ತು. ರಾಜ್​ಕುಮಾರ್​ ಕುಟುಂಬದ ಕುಡಿ ಪುನೀತ್​ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎನ್ನುವ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದನ್ನು ಅನೇಕರ ಬಳಿ ನಂಬೋಕೆ ಸಾಧ್ಯವಾಗಲಿಲ್ಲ. ಮೊದಲ ದಿನ ಅನೇಕ ಕಡೆಗಳಲ್ಲಿ ಶೋ ಅರ್ಧಕ್ಕೆ ನಿಲ್ಲಿಸಲಾಯಿತು. ಹೀಗಾಗಿ, ಮೊದಲ ದಿನದ ಕಲೆಕ್ಷನ್​ ಮೇಲೆ ದೊಡ್ಡ ಬರೆ ಬಿದ್ದಿತ್ತು. ಶನಿವಾರ ಹಾಗೂ ಭಾನುವಾರ ಅಂತಿಮ ದರ್ಶನ ಹಾಗೂ ಅಂತ್ಯಸಂಸ್ಕಾರದ ಕಡೆ ಜನರ ಗಮನ ಹರಿಯಿತು. ಇನ್ನು, ಶಿವರಾಜ್​ಕುಮಾರ್​ ಅವರು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದರು. ಅವರು ಸಿನಿಮಾ ಬಗ್ಗೆ ಆಲೋಚಿಸುವ ಸ್ಥಿತಿಯಲ್ಲಿ ಇರಲಿಲ್ಲ. ಸ್ಯಾಂಡಲ್​​ವುಡ್​ಗೆ ಸೂತಕದ ಛಾಯೆ ಇದ್ದಾಗ ಸಿನಿಮಾ ಬಗ್ಗೆ ಪ್ರಚಾರ ಮಾಡುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಚಿತ್ರತಂಡ ಕೂಡ ಆ ಕಡೆ ಗಮನ ಹರಿಸಿಲ್ಲ. ಈ ಎಲ್ಲಾ ಕಾರಣಗಳಿಂದ ಚಿತ್ರದ ಕಲೆಕ್ಷನ್​ಗೆ ದೊಡ್ಡ ಹೊಡೆತ ಬಿದ್ದಿತ್ತು.

ಈ ವಾರದಿಂದ ನಿಧಾನವಾಗಿ ಸಿನಿಮಾದ ಕಲೆಕ್ಷನ್​ ಹೆಚ್ಚುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ ಈ ಸಿನಿಮಾಗೆ 15 ಕೋಟಿ ಖರ್ಚಾಗಿದೆ. ಸಿನಿಮಾದ ಹಿಂದಿ ಡಬ್ಬಿಂಗ್​ ಹಕ್ಕು 5 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎನ್ನಲಾಗಿದೆ. ಇನ್ನು, ಆಡಿಯೋ ಹಕ್ಕು ಕೂಡ ದೊಡ್ಡ ಮೊತ್ತಕ್ಕೆ ಸೇಲ್​ ಆಗಿದೆಯಂತೆ. ಇದರ ಜತೆಗೆ ಟಿವಿ ಹಕ್ಕು, ಡಿಜಿಟಲ್​ ಹಕ್ಕಿನಿಂದ ನಿರ್ಮಾಪಕರಿಗೆ ದೊಡ್ಡ ಮೊತ್ತದ ಹಣ ಸಿಗಲಿದೆ. ಹೀಗಾಗಿ, ಹಾಕಿದ ಮೊತ್ತಕ್ಕೆ ಯಾವುದೇ ತೊಂದರೆ ಆಗಿಲ್ಲ. ಈಗ ಸಿನಿಮಾ ನೋಡೋಕೆ ಜನರು ಬರುತ್ತಿರುವುದರಿಂದ ನಿರ್ಮಾಪಕರಾದ ಜಯಣ್ಣ ಹಾಗೂ ಭೋಗೇಂದ್ರ ಮೊಗದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ: Bhajarangi 2: ಪುನೀತ್​ ನಿಧನದಿಂದ ಅರ್ಧಕ್ಕೆ ನಿಂತಿದ್ದ ‘ಭಜರಂಗಿ 2’ ಪ್ರದರ್ಶನ ಈಗ ಹೇಗೆ ಸಾಗುತ್ತಿದೆ? ಇಲ್ಲಿದೆ ರಿಪೋರ್ಟ್​

‘ಸಿನಿಮಾಗೆ ರೆಸ್ಪಾನ್ಸ್ ಬರ್ತಿಲ್ಲ, ಭವಿಷ್ಯ ಇಲ್ಲಿಗೆ ಕೊನೆಯಾದ ಹಾಗೆ ಅನಿಸುತ್ತಿದೆ’; ‘ಭಜರಂಗಿ 2’ ಖಳನ ಕಣ್ಣೀರು

Published On - 1:50 pm, Thu, 4 November 21