‘ದರ್ಶನ್​ಗೆ ಶಿಕ್ಷೆಯಾಗಬೇಕು’: ರೇಣುಕಾ ಸ್ವಾಮಿ ನಿವಾಸಕ್ಕೆ ಭಾವನಾ ಬೆಳಗೆರೆ ಭೇಟಿ

|

Updated on: Jun 11, 2024 | 5:38 PM

ದರ್ಶನ್ ತೂಗುದೀಪ ಮತ್ತು ಸಹಚರರಿಂದ ಕೊಲೆ ಆಗಿದ್ದಾರೆ ಎನ್ನಲಾಗುತ್ತಿರುವ ಚಿತ್ರದುರ್ಗದ ರೇಣುಕಾ ಸ್ವಾಮಿ ನಿವಾಸಕ್ಕೆ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಭೇಟಿ ನೀಡಿದ್ದರು. ರೇಣುಕಾ ಸ್ವಾಮಿ ಪತ್ನಿಯೊಟ್ಟಿಗೆ ಮಾತನಾಡಿ ಸಾಂತ್ವನ ಹೇಳಿದ ಭಾವನಾ, ದರ್ಶನ್ ತಪ್ಪು ಮಾಡಿದ್ದರೆ ಖಂಡಿತ ಶಿಕ್ಷೆ ಆಗಬೇಕು ಎಂದಿದ್ದಾರೆ.

‘ದರ್ಶನ್​ಗೆ ಶಿಕ್ಷೆಯಾಗಬೇಕು’: ರೇಣುಕಾ ಸ್ವಾಮಿ ನಿವಾಸಕ್ಕೆ ಭಾವನಾ ಬೆಳಗೆರೆ ಭೇಟಿ
ದರ್ಶನ್-ಭಾವನಾ
Follow us on

ದರ್ಶನ್ (Darshan Thoogudeepa) ಹಾಗೂ ಸಹಚರರಿಂದ ಹತ್ಯೆಯಾಗಿದ್ದಾನೆ ಎಂದು ಹೇಳಲಾಗುತ್ತಿರುವ ರೇಣುಕಾ ಸ್ವಾಮಿ ಅವರ ಚಿತ್ರದುರ್ಗದ ನಿವಾಸಕ್ಕೆ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಭೇಟಿ ನೀಡಿ, ಮೃತ ರೇಣುಕಾ ಸ್ವಾಮಿಯ ಪತ್ನಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಭೇಟಿ ಬಳಿಕ ಪತ್ರಕರ್ತರೊಟ್ಟಿಗೆ ಮಾತನಾಡಿರುವ ಭಾವನಾ ಬೆಳಗೆರೆ, ‘ಈ ಕೊಲೆ ಪ್ರಕರಣ ಅತ್ಯಂತ ಹೇಯಪೂರ್ಣ ಕೃತ್ಯ, ಯಾವ ಅಭಿಮಾನವೂ ಸಾವು ಬಯೋಸೋದಿಲ್ಲ, ದರ್ಶನ್, ಒಂದೊಮ್ಮೆ ಹೊಡಿಯಿರಿ, ಕೊಲ್ಲಿಸಿ ಅಂತಾ ಹೇಳಿದ್ದರೆ ಅವರಿಗೆ ತಕ್ಕ ಶಿಕ್ಷೆಯಾಗಬೇಕು’ ಎಂದಿದ್ದಾರೆ ಭಾವನಾ.

‘ರೇಣುಕಾ ಸ್ವಾಮಿಯ ಪತ್ನಿಯನ್ನು ನೋಡಿ ಕಣ್ಣಿನಲ್ಲಿ ನೀರು ಬಂತು. ರೇಣುಕಾ ಸ್ವಾಮಿ ಪತ್ನಿ 5 ತಿಂಗಳ ಗರ್ಭಿಣಿ, ಆಕೆ ಪಾಪ ಬಹಳಾ ಮುಗ್ಧರು, ನೊಂದುಕೊಂಡಿದ್ದಾರೆ. ಅವರಿಗೆ ಏನಾಗಿದೆ, ಏನಾಗುತ್ತಿದೆ ಏನೂ ಗೊತ್ತಾಗುತ್ತಿಲ್ಲ. ರೇಣುಕಾ ಸ್ವಾಮಿ ಮನೆಯಲ್ಲಿ 97 ವರ್ಷದ ಅಜ್ಜಿ ಇದ್ದಾರೆ, ಇನ್ನೊಬ್ಬ ಅಜ್ಜಿಯೂ ಇದ್ದಾರೆ. ಅವರಿಗೆ ಮೊಮ್ಮಗನಿಗೆ ಏನಾಗಿದೆ ಎಂಬುದು ಗೊತ್ತಾಗುತ್ತಿಲ್ಲ ಮೊಮ್ಮಗ ಗುಣವಾಗಿ ಬರುತ್ತಾನೆ ಅನ್ನುತ್ತಿದ್ದಾರೆ. ಪ್ರಕರಣದ ಬಗ್ಗೆ ಅಜ್ಜಿಯವರಿಗೆ ಗೊತ್ತಾಗಿಲ್ಲ. ರೇಣುಕಾಸ್ವಾಮಿ ತುಂಬಾ ಅಮಾಯಕ, ಆತ ದರ್ಶನ ಅಭಿಮಾನಿ ಅಲ್ಲ, ಫಾಲೋವರ್ ಸಹ ಅಲ್ಲ, ಫೇಸ್ ಬುಕ್ , ದರ್ಶನ ಜೊತೆಗಿನ ಸಂಬಂಧದ ಬಗ್ಗೆ ಮನೆಯವರಿಗೆ ಏನು ಗೊತ್ತಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​, ಪವಿತ್ರಾ ಸೇರಿ 13 ಜನರ ಬಂಧನ; ಇಲ್ಲಿದೆ ಎಲ್ಲರ ವಿವರ

‘ಈ ರೀತಿಯ ಖಾಸಗಿ ಕಮೆಂಟ್​ಗಳು ಪ್ರತಿದಿನವೂ ನೋಡುತ್ತಲೇ ಇರುತ್ತೇವೆ. ಪರ್ಸನಲ್ ಕಮೆಂಟ್ ಅನ್ನು ಕೆಟ್ಟದಾಗಿ ಮಾಡಿದಾಗ ಅದನ್ನು ವಿಚಾರಿಸಲೆಂದೇ ಸೈಬರ್ ಕ್ರೈಂ ವಿಭಾಗ ಇದೆ. ಅದಕ್ಕೆ ದೂರು ನೀಡಬೇಕೆ ವಿನಃ ಹೀಗೆ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಸೋಷಿಯಲ್ ಮೀಡಿಯಾದಿಂದ ಕೊಲೆಯೇ ಆಗುತ್ತಿದೆ. ಸ್ಟಾರ್ ಗಿರಿ ಎಂಬುದು ನೋಡಿ ಎಂಥಹಾ ವಿಷಯವನ್ನು ಯಾವ ಮಟ್ಟಿಗೆ ತೆಗೆದುಕೊಂಡು ಹೋಗಿದೆ. ಅಭಿಮಾನಿಗಳದ್ದು ಕುರುಡು ಅಭಿಮಾನ. ಪವಿತ್ರಾ, ದರ್ಶನ್ ಅರೆಸ್ಟ್ ಆಗಿದ್ದಾರೆ ಎಂಬುದು ಗೊತ್ತಾಗಿದೆ. ಅವರು ತಪ್ಪು ಮಾಡಿದ್ದರೆ ಖಂಡಿತ ಅವರಿಗೆ ಶಿಕ್ಷೆ ಆಗಬೇಕು’ ಎಂದಿದ್ದಾರೆ.

ರೇಣುಕಾ ಸ್ವಾಮಿ ಚಿತ್ರದುರ್ಗದವರಾಗಿದ್ದು ಬಡ ಮಧ್ಯಮ ಕುಟುಂಬದವರಾಗಿದ್ದಾರೆ. ಕಳೆದ ವರ್ಷ ಇದೇ ತಿಂಗಳು ಮದುವೆಯಾಗಿದ್ದ ರೇಣುಕಾ ಸ್ವಾಮಿಯ ಪತ್ನಿ ಐದು ತಿಂಗಳ ಗರ್ಭಿಣಿ. ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸ್ವಾಮಿಯನ್ನು ಶನಿವಾರ ಅಪಹರಣ ಮಾಡಿದ್ದ ನಟ ದರ್ಶನ್ ಸಹಚರರು ಪಟ್ಟಣಗೆರೆಯ ಶೆಡ್​ನಲ್ಲಿ ಕೂಡಿಹಾಕಿ ಹೊಡೆದು, ಚಿತ್ರಹಿಂಸೆ ನೀಡಿ ಕೊಲೆ ಮಾಡಿ, ಚರಂಡಿಗೆ ಎಸಗಿ ಹೋಗಿದ್ದರು. ಇದೀಗ ನಟ ದರ್ಶನ್ ಬಂಧನವಾಗಿದ್ದು, ತನಿಖೆ ನಡೆಯುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ