‘ಪತ್ನಿಯಿಂದ ದೂರವಿದ್ದೇನೆ, ಮಗನಿಗೋಸ್ಕರ ಎರಡನೇ ಮದುವೆ ಆಗಿಲ್ಲ’; ಖಾಸಗಿ ಜೀವನದ ಬಗ್ಗೆ ಹೇಳಿದ ಡಾಗ್ ಸತೀಶ್

ಬಿಗ್ ಬಾಸ್ ಕನ್ನಡ 12ಕ್ಕೆ ಕಾಲಿಟ್ಟ ಡಾಗ್ ಸತೀಶ್, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಪತ್ನಿಯಿಂದ ದೂರವಿದ್ದು, ಮಗನಿಗಾಗಿ ಎರಡನೇ ಮದುವೆ ಆಗಿಲ್ಲ ಎಂದಿದ್ದಾರೆ. ತಮ್ಮ ಬಿಸ್ನೆಸ್ ಹಾಗೂ ದುಬಾರಿ ಶ್ವಾನಗಳ ಮೇಲಿನ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹೊಸ ದಾಖಲೆ ಸೃಷ್ಟಿಸುವ ಗುರಿ ಹೊಂದಿದ್ದಾರೆ.

‘ಪತ್ನಿಯಿಂದ ದೂರವಿದ್ದೇನೆ, ಮಗನಿಗೋಸ್ಕರ ಎರಡನೇ ಮದುವೆ ಆಗಿಲ್ಲ’; ಖಾಸಗಿ ಜೀವನದ ಬಗ್ಗೆ ಹೇಳಿದ ಡಾಗ್ ಸತೀಶ್
ಡಾಗ್ ಸತೀಶ್

Updated on: Sep 29, 2025 | 7:05 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಒಟ್ಟೂ 19 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ ಸ್ಪರ್ಧಿಗಳ ಪೈಕಿ ಹೆಚ್ಚು ಗಮನ ಸೆಳೆದವರಲ್ಲಿ ಡಾಗ್ ಸತೀಶ್ ಕೂಡ ಒಬ್ಬರು. ಅವರು ಪಕ್ಕಾ ಬಿಸ್ನೆಸ್​​ಮೆನ್. ಅವರು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದು, ದುಬಾರಿ ಶ್ವಾನಗಳ ಒಡೆತನದ ಕಾರಣದಿಂದ. ಈಗ ಅವರು ಬಿಗ್  ಬಾಸ್ ಮನೆಗೆ ಮೂರನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ.

‘ನನಗೆ ನಾಯಿ ಎಂದರೆ ಇಷ್ಟ. 6ನೇ ಕ್ಲಾಸ್​​ನಲ್ಲಿ ಇದ್ದಾಗ ಕ್ರಾಸ್ ಬ್ರೀಡ್ ಡಾಗ್ ಕೊಡಿಸಿದರು. ನಾಯಿಗಳಿಗೂ ಬೆಲೆ ಇದೆ ಎಂದು ಆಗ ಗೊತ್ತಾಗುತ್ತದೆ. ರೇರ್ ಬ್ರೀಡ್​ಗಳನ್ನು ನಾನು ಭಾರತಕ್ಕೆ ತರಿಸಿಕೊಳ್ಳೋಕೆ ಆರಂಭಿಸಿದೆ. ಫಂಕ್ಷನ್​ಗೆ ನಾನು ಒಬ್ಬನೇ ಹೋದರೆ ನನ್ನ ಗುರುತಿಸೋದಿಲ್ಲ. ಆದರೆ, ಶ್ವಾನದ ಜೊತೆ ಹೋದರೆ ನನ್ನ ಗುರುತಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
‘ಬಿಗ್ ಬಾಸ್’ ಮನೆ ಪ್ರವೇಶಿಸಿದ ಎಲ್ಲಾ ಸ್ಪರ್ಧಿಗಳ ಫೋಟೋ, ಹೆಸರು, ವಿವರ
‘ಹೀಗೆನೆ ಹನುಮಂತ ಗೆದ್ರು’; ಲುಂಗಿ ಉಟ್ಟು ಬಂದ ಗಿಲ್ಲಿಗೆ ಸುದೀಪ್ ಕೌಂಟರ್
ಊಹಿಸಿದ್ದಕ್ಕಿಂತ ಹೆಚ್ಚಿನ ಸ್ಪರ್ಧಿಗಳು ಬಿಗ್ ಬಾಸ್​ಗೆ ಎಂಟ್ರಿ
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

ಇದನ್ನೂ ಓದಿ: ‘ಬಿಗ್ ಬಾಸ್’ ಮನೆ ಪ್ರವೇಶಿಸಿದ 19 ಸ್ಪರ್ಧಿಗಳ ಫೋಟೋ, ಹೆಸರು, ವಿವರ ಇಲ್ಲಿದೆ

‘ಮಿಸಸ್ ಜೊತೆ ಸಣ್ಣ ಸಮಸ್ಯೆ ಆಗಿ ನಾವಿಬ್ಬರೂ ದೂರ ಇದ್ದೇವೆ. ನನಗೆ ಮಗನೇ ಎಲ್ಲ. ಮಗನ ಅಷ್ಟು ಪ್ರೀತಿಯಿಂದ ನೋಡಿಕೊಂಡಿದ್ದೇನೆ. ಬರುವ ಮಲತಾಯಿ ಆತನನ್ನು ಹೇಗೆ ನೋಡಿಕೊಳ್ಳುತ್ತಾಳೇನೋ ಎನ್ನುವ ಭಯ ನನಗೆ. ಹೀಗಾಗಿ, ಎರಡನೇ ಮದುವೆ ಆಗಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ.

ಸದ್ಯ ಸತೀಶ್ ಅವರಿಗೆ ಬಿಗ್ ಬಾಸ್ ಸ್ಪರ್ಧಿಗಳು ಈ ಮೊದಲು ಮಾಡಿದ ರೆಕಾರ್ಡ್​ಗಳನ್ನು ಬ್ರೇಕ್ ಮಾಡುವ ಉದ್ದೇಶ ಹೊಂದಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಬಿಗ್ ಬಾಸ್ ಮನೆ ಅಂದರೆ ಅಲ್ಲಿ ಸ್ಪರ್ಧೆಗಳು ಜೊರಾಗಿಯೇ ಇರುತ್ತವೆ. ಈ ಸ್ಪರ್ಧೆಗೆ ಪ್ರತಿ ಸ್ಪರ್ಧೆ ನೀಡೋದು ಅಷ್ಟು ಸುಲಭದ ಮಾತೇ ಅಲ್ಲ. ಇದನ್ನು ಸತೀಶ್ ಅವರು ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ನಿಮ್ಮದು ಫ್ರಾಡ್ ಬಿಸ್ನೆಸಾ’; ಡಾಗ್ ಸತೀಶ್​ಗೆ ನೇರವಾಗಿ ಕೇಳಿದ ಸುದೀಪ್

ಬಿಗ್ ಬಾಸ್ ಮನೆ ಪ್ರವೇಶಿಸಿದವರ ಹೆಸರಿನಲ್ಲಿ ಸಿನಿಮಾ ರಂಗದವರು, ಚಿತ್ರರಂಗದವರು, ಸುದ್ದಿ ವಾಹಿನಿ, ಆರ್​ಜೆ ಕ್ಷೇತ್ರ, ಸೋಶಿಯಲ್ ಮೀಡಿಯಾ ಮೊದಲಾದ ಕ್ಷೇತ್ರದವರು ಇದ್ದಾರೆ. ಬಿಗ್ ಬಾಸ್ ಸೇರಿದವರ ಸಂಪೂರ್ಣ ಪಟ್ಟಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.