AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಸಂಬಳಕ್ಕೆ ಬಂದಿಲ್ಲ, ಹಂಬಲಕ್ಕೆ ಬಂದಿದ್ದೇನೆ’; ಬಿಗ್ ಬಾಸ್ ಹಿಂದಿನ ಕಾರಣ ತಿಳಿಸಿದ ಕಾಕ್ರೋಚ್ ಸುಧಿ

Cockroach Sudhi: ಸುಧಿ ಅವರು ಬಿಗ್ ಬಾಸ್​ಗೆ ಬರುತ್ತಾರೆ ಎಂಬ ಸುದ್ದಿ ಮೊದಲೇ ಹರಿದಾಡಿತ್ತು. ಈ ಬಗ್ಗೆ ಸಂದರ್ಶನಗಳಲ್ಲಿಯೂ ಅವರಿಗೆ ಪ್ರಶ್ನೆ ಮಾಡಲಾಯಿತು. ಆದರೆ, ಸಿನಿಮಾ ಕಮಿಟ್​ಮೆಂಟ್ ಹೆಚ್ಚಿರುವುದರಿಂದ ನಾನಂತೂ ದೊಡ್ಮನೆಗೆ ಹೋಗಲ್ಲ ಎಂದು ಅವರು ನೇರವಾಗಿ ಹೇಳಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು.

‘ನಾನು ಸಂಬಳಕ್ಕೆ ಬಂದಿಲ್ಲ, ಹಂಬಲಕ್ಕೆ ಬಂದಿದ್ದೇನೆ’; ಬಿಗ್ ಬಾಸ್ ಹಿಂದಿನ ಕಾರಣ ತಿಳಿಸಿದ ಕಾಕ್ರೋಚ್ ಸುಧಿ
ಸುಧಿ
ರಾಜೇಶ್ ದುಗ್ಗುಮನೆ
|

Updated on:Sep 28, 2025 | 7:02 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ಗೆ (Bigg Boss) ಕಾಕ್ರೋಚ್ ಸುಧಿ ಎಂಟ್ರಿ ಆಗಿದೆ. ಸುದೀಪ್ ಅವರು ನಟನನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಸುಧಿ ಅವರು ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು. ಅವರು ಸಖತ್ ಚಿಲ್ ಆಗಿ ಇರುವವರು. ದೊಡ್ಮನೆಯಲ್ಲಿ ಅವರು ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಅವರು ಬಿಗ್ ಬಾಸ್​ಗೆ ಬಂದಿದ್ದು ಏಕೆ ಎಂಬುದನ್ನು ವಿವರಿಸಿದ್ದಾರೆ.

ಸುಧಿ ಅವರು ಬಿಗ್ ಬಾಸ್​ಗೆ ಬರುತ್ತಾರೆ ಎಂಬ ಸುದ್ದಿ ಮೊದಲೇ ಹರಿದಾಡಿತ್ತು. ಈ ಬಗ್ಗೆ ಸಂದರ್ಶನಗಳಲ್ಲಿಯೂ ಅವರಿಗೆ ಪ್ರಶ್ನೆ ಮಾಡಲಾಯಿತು. ಆದರೆ, ಸಿನಿಮಾ ಕಮಿಟ್​ಮೆಂಟ್ ಹೆಚ್ಚಿರುವುದರಿಂದ ನಾನಂತೂ ದೊಡ್ಮನೆಗೆ ಹೋಗಲ್ಲ ಎಂದು ಅವರು ನೇರವಾಗಿ ಹೇಳಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಈಗ ಅವರು ಬರಲ್ಲ, ಬರಲ್ಲ ಅಂತಲೇ ದೊಡ್ಮನೆಗೆ ಬಂದಿದ್ದಾರೆ.

ಇದನ್ನೂ ಓದಿ
Image
‘ಬಿಗ್ ಬಾಸ್’ಗೆ ಮಂಗಳೂರಿನ ರಕ್ಷಿತಾ ಎಂಟ್ರಿ; ಮಾತು ಕೇಳಿ ಸುದೀಪ್ ಶಾಕ್
Image
ಊಹಿಸಿದ್ದಕ್ಕಿಂತ ಹೆಚ್ಚಿನ ಸ್ಪರ್ಧಿಗಳು ಬಿಗ್ ಬಾಸ್​ಗೆ ಎಂಟ್ರಿ
Image
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ
Image
‘ನಾನು ಒಂದು ದಿನ ಮಗು ಹೊಂದುತ್ತೇನೆ’; ಮನದ ಆಸೆ ಹೊರಹಾಕಿದ ಸಲ್ಮಾನ್ ಖಾನ್

ಬಿಗ್ ಬಾಸ್ ವೇದಿಕೆ ಏರಿದ ಬಳಿಕ ಮಾತನಾಡಿದ ಕಾಕ್ರೋಚ್ ಸುಧಿ ಅವರು ತಾವು ದೊಡ್ಮನೆಗೆ ಬಂದಿದ್ದರ ಹಿಂದಿನ ಕಾರಣ ತಿಳಿಸಿದರು. ‘ನಿಮ್ಮ ಜೊತೆ ಕೆಲಸ ಮಾಡೋದು ಹಾಗಿರಲಿ, ನೋಡೋಕು ಅವಕಾಶ ಸಿಕ್ಕಿರಲಿಲ್ಲ. ಅಲ್ಲಿ ಸಿಕ್ಕಿದ್ರೆ ಸಂದರ್ಶನ, ಇಲ್ಲಿ ಸಿಗೋದು ನಿಜವಾದ ದರ್ಶನ’ ಎಂದರು ಸುಧಿ.

‘ಪ್ರತಿಯೊಬ್ಬ ಆರ್ಟಿಸ್ಟ್​ಗೂ ಕ್ಯಾಮೆರಾ ಎದುರು ಕ್ಲೋಸ್​ಅಪ್​ ಶಾಟ್ ಬೇಕು ಎಂದು ಅನಿಸುತ್ತಾ ಇರುತ್ತದೆ. ಆದರೆ, ಇಲ್ಲಿ ನೂರಾರು ಕ್ಯಾಮೆರಾಗಳು 24 ಗಂಟೆ ಜನರಿಗೆ ತೋರಿಸುತ್ತೇವೆ ಎಂದಾಗ ಹೇಗೆ ಬಿಡೋಕೆ ಆಗುತ್ತೆ ಹೇಳಿ’ ಎಂದು ಸುದೀಪ್​ಗೆ ಸುಧಿ ಕೇಳಿದರು.

‘ನನಗೆ ಸಂಭಾವನೆ ಮುಖ್ಯ ಎಂದು ನಾನು ಈ ಮೊದಲು ಹೇಳಿದ್ದೆ. ಆದರೆ, ನಿಮ್ಮ ಎದುರು ನಿಜವನ್ನು ಹೇಳುತ್ತಿದ್ದೇನೆ. ನಾನು ಸಂಬಳಕ್ಕೆ ಬಂದಿಲ್ಲ, ಹಂಬಲಕ್ಕೆ ಬಂದಿದ್ದೇನೆ. ನನ್ನನ್ನು ನಾನು ಅರಿತುಕೊಳ್ಳಲು ಇಲ್ಲಿಗೆ ಬಂದಿಲ್ಲ. ನಾನು ಏನು ಎಂಬುದನ್ನು ತೋರಿಸಲು ಬಂದಿದ್ದೇನೆ’ ಎಂದು ಸುದೀಪ್ ಎದುರು ಹೇಳಿದರು ಕಾಕ್ರೋಚ್ ಸುಧಿ.

ಇದನ್ನೂ ಓದಿ: ಹದಿನೇಳೂ ಅಲ್ಲ, ಹದಿನೆಂಟೂ ಅಲ್ಲ; ಊಹಿಸಿದ್ದಕ್ಕಿಂತ ಹೆಚ್ಚಿನ ಸ್ಪರ್ಧಿಗಳು ಬಿಗ್ ಬಾಸ್​ಗೆ ಎಂಟ್ರಿ

‘ಕಾಕ್ರೋಚ್’ ಸುಧಿ ಅವರು ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಶಿವರಾಜ್​ಕುಮಾರ್ ನಟನೆಯ ‘ಟಗರು’ ಸಿನಿಮಾದಲ್ಲಿ ಕಾಕ್ರೋಚ್ ಹೆಸರಿನ ಪಾತ್ರ ಮಾಡಿದ್ದರು ಸುಧಿ. ಅಲ್ಲಿಂದ ಕಾಕ್ರೋಚ್ ಸುಧಿ ಎಂದೇ ಫೇಮಸ್ ಆದರು. ಆ ಬಳಿಕ ಅವರಿಗೆ ಸಾಕಷ್ಟು ಆಫರ್​ಗಳು ಬಂದವರು. ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವಾಗ ಅವರ ಕೈಯಲ್ಲಿ ಸಾಕಷ್ಟು ಆಫರ್​ಗಳಿವೆ. ಈ ಕೆಲಸಗಳನ್ನು ಮುಂದಕ್ಕೆ ಹಾಕಿ ಅವರು ದೊಡ್ಮನೆಗೆ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:41 pm, Sun, 28 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ