Sanya Iyer ‘ಹೆಣ್ಮಕ್ಳ ಮುಟ್ಟಿದ್ರೆ ಸರಿ ಇರಲ್ಲ’; ಕಪಾಳ ಮೋಕ್ಷದ ಬಳಿಕ ಸಾನ್ಯಾ ಐಯ್ಯರ್ ತರಾಟೆ

ಸಾನ್ಯಾ ಐಯ್ಯರ್ ಅವರು ಕಿರುತೆರೆ ಮೂಲಕ ಗುರುತಿಸಿಕೊಂಡವರು. ಕಳೆದ ವರ್ಷ ಅವರು ಬಿಗ್ ಬಾಸ್ ಒಟಿಟಿ ಹಾಗೂ ಟಿವಿ ಸೀಸನ್​ನಲ್ಲಿ ಮಿಂಚಿದರು. ಅನೇಕ ಕಾರ್ಯಕ್ರಮಗಳಿಗೆ ಅವರು ಅತಿಥಿಯಾಗಿ ತೆರಳುತ್ತಿದ್ದಾರೆ.

Sanya Iyer ‘ಹೆಣ್ಮಕ್ಳ ಮುಟ್ಟಿದ್ರೆ ಸರಿ ಇರಲ್ಲ’; ಕಪಾಳ ಮೋಕ್ಷದ ಬಳಿಕ ಸಾನ್ಯಾ ಐಯ್ಯರ್ ತರಾಟೆ
ಸಾನ್ಯಾ ಐಯ್ಯರ್​ (ಚಿತ್ರ: ಇನ್​ಸ್ಟಾಗ್ರಾಮ್)

Updated on: Jan 31, 2023 | 12:43 PM

ನಟಿ ಸಾನ್ಯಾ ಐಯ್ಯರ್ (Sanya Iyer) ಅವರು ವಿವಾದದ ಮೂಲಕ ಈಗ ಸುದ್ದಿ ಆಗಿದ್ದಾರೆ. ಇತ್ತೀಚೆಗೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದ ಕಂಬಳದಲ್ಲಿ ಸಾನ್ಯಾ ಭಾಗಿ ಆಗಿದ್ದರು. ಆ ಸಂದರ್ಭದಲ್ಲಿ ಕೈ ಹಿಡಿದು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ ಮಾಡಿದ್ದಾರೆ. ಅಷ್ಟೇ ಅಲ್ಲ ಕಂಬಳ ಆಯೋಜಕರ ಜತೆಗೆ ಅವರು ಜಗಳಕ್ಕೆ ಇಳಿದಿದ್ದಾರೆ. ಈ ವಿಡಿಯೋ ಟಿವಿ9 ಕನ್ನಡಕ್ಕೆ ಈ ವಿಡಿಯೋ ಲಭ್ಯವಾಗಿದೆ.

ಸಾನ್ಯಾ ಐಯ್ಯರ್ ಅವರು ಕಿರುತೆರೆ ಮೂಲಕ ಗುರುತಿಸಿಕೊಂಡವರು. ಕಳೆದ ವರ್ಷ ಅವರು ಬಿಗ್ ಬಾಸ್ ಒಟಿಟಿ ಹಾಗೂ ಟಿವಿ ಸೀಸನ್​ನಲ್ಲಿ ಮಿಂಚಿದರು. ರೂಪೇಶ್ ಶೆಟ್ಟಿ ಜತೆಗಿನ ಫ್ರೆಂಡ್​ಶಿಪ್​ ಕಾರಣಕ್ಕೂ ಅವರು ಸುದ್ದಿ ಆದರು. ದೊಡ್ಮನೆಯಿಂದ ಹೊರ ಬಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅನೇಕ ಕಾರ್ಯಕ್ರಮಗಳಿಗೆ ಅವರು ಅತಿಥಿಯಾಗಿ ತೆರಳುತ್ತಿದ್ದಾರೆ.

ಶನಿವಾರ (ಜ.28) ಪುತ್ತೂರಿನ ಕೋಟಿ ಚನ್ನಯ್ಯ ಜೋಡುಕೆರೆ ಕಂಬಳಕ್ಕೆ ಸಾನ್ಯಾ ಐಯ್ಯರ್ ಅತಿಥಿಯಾಗಿ ತೆರಳಿದ್ದರು. ಮಧ್ಯರಾತ್ರಿ ಸ್ನೇಹಿತರೊಂದಿಗೆ ಮತ್ತೆ ಕಂಬಳ ನೋಡಲು ಅವರು ಆಗಮಿಸಿದ್ದರು. ಅವರನ್ನು ನೋಡುತ್ತಿದ್ದಂತೆ ಒಂದಷ್ಟು ಮಂದಿ ಸೆಲ್ಫಿ ತೆಗೆದುಕೊಳ್ಳೋಕೆ ಮುಂದೆ ಬಂದಿದ್ದರು. ಆಗ ಯುವಕನೋರ್ವ ಸಾನ್ಯಾ ಅವರ ಕೈಹಿಡಿದು ಎಳೆದಿದ್ದ. ಕೋಪಗೊಂಡ ಅವರು ಯುವಕನಿಗೆ ಕಪಾಳಮೋಕ್ಷ ಮಾಡಿದ್ದರು. ಸಿಟ್ಟಾದ ಆತ ಮರಳಿ ಸಾನ್ಯಾ ಕೆನ್ನೆಗೆ ಬಾರಿಸಿದ್ದ. ಈ ಘಟನೆ ಬೆನ್ನಲ್ಲೇ ಸ್ಥಳೀಯರು ಯುವಕನಿಗೆ ಹೊಡೆದಿದ್ದಾರೆ.

YouTube video player
ಇದನ್ನೂ ಓದಿ: ಪದವಿ ಪಡೆದ ಖುಷಿಯಲ್ಲಿ ನಟಿ ಸಾನ್ಯಾ ಐಯ್ಯರ್; ಇಲ್ಲಿದೆ ಫೋಟೋ ಗ್ಯಾಲರಿ

ಕಪಾಳ ಮೋಕ್ಷದ ಘಟನೆಯಿಂದ ಸಾನ್ಯಾ ಕೋಪಗೊಂಡಿದ್ದಾರೆ. ಕಂಬಳ ಆಯೋಜಕರನ್ನು ಸಾನ್ಯಾ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ’ ಎಂದು ಸಾನ್ಯಾ ಕೂಗಾಡಿರುವ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:29 pm, Tue, 31 January 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us