‘ಬಿಗ್ ಬಾಸ್’ ಮನೆಯಲ್ಲಿ ಸ್ಪೆಷಲ್ ಟಾಸ್ಕ್; ಎರಡು ತಂಡಗಳ ಮಧ್ಯೆ ಗೆದ್ದವರು ಯಾರು?

|

Updated on: Oct 22, 2023 | 1:30 PM

ಮೊದಲು ಸ್ಪರ್ಧೆಗೆ ಇಳಿದಿದ್ದು ರಣಶಕ್ತಿ ಟೀಂನ ಸಂಗೀತಾ ಶೃಂಗೇರಿ. ಅವರ ಕಣ್ಣಿಗೆ ಪಟ್ಟಿಕಟ್ಟಿದ್ದು ವಿನಯ್. ಸಂಗೀತಾಗೆ ಮಾರ್ಗದರ್ಶನ ನೀಡಿದ್ದು ತನಿಷಾ. ಸಂಗೀತಾ ಬಾಲ ಬಿಡಿಸಿದರು. ಆ ಬಳಿಕ ಮಾಣಿಕ್ಯ ತಂಡದಿಂದ ನಮ್ರತಾ ಅಖಾಡಕ್ಕೆ ಇಳಿದರು. ಅವರು ಕೂಡ ಕಷ್ಟಪಟ್ಟು ಬಾಲ ಬಿಡಿಸಿದರು.

‘ಬಿಗ್ ಬಾಸ್’ ಮನೆಯಲ್ಲಿ ಸ್ಪೆಷಲ್ ಟಾಸ್ಕ್; ಎರಡು ತಂಡಗಳ ಮಧ್ಯೆ ಗೆದ್ದವರು ಯಾರು?
ಬಿಗ್ ಬಾಸ್
Follow us on

ಬಿಗ್ ಬಾಸ್ (Bigg Boss) ಮನೆಯಲ್ಲಿ ಸಾಕಷ್ಟು ಟಾಸ್ಕ್ ನೀಡಲಾಗುತ್ತದೆ. ಪ್ರತಿ ಟಾಸ್ಕ್​ಗಳೂ ವಿಶೇಷವಾಗಿರುತ್ತವೆ. ಬಿಗ್ ಬಾಸ್ ಮನೆಯಲ್ಲಿ ರಣಶಕ್ತಿ ಮತ್ತು ಮಾಣಿಕ್ಯ ಹೆಸರಿನ ತಂಡಗಳಿವೆ. ಇಬ್ಬರಿಗೂ ಒಂದು ಸ್ಪೆಷಲ್ ಟಾಸ್ಕ್ ನೀಡಲಾಗಿತ್ತು. ಬಿಗ್‌ಬಾಸ್‌ ಹಾಗೂ ಜಿಯೋ ಸಿನಿಮಾ ಕಡೆಯಿಂದ ಈ ಟಾಸ್ಕ್‌ ಕೊಡಲಾಗಿತ್ತು. ‘ಹೂಂ ಅಂತಿಯಾ ಊಹೂಂ ಅಂತಿಯಾ?’ ಎಂಬುದು ಈ ಟಾಸ್ಕ್​ನ ಹೆಸರು.

ಆಟದ ಸ್ವರೂಪ ಹಾಗೂ ನಿಯಮಗಳನ್ನು ಬಿಗ್ ಬಾಸ್ ನೀಡಿದ್ದರು. ಆಡುವ ಪ್ರತಿ ಸದಸ್ಯರು ಕಣ್ಣಿಗೆ ಪಟ್ಟಿಕೊಳ್ಳಬೇಕು. ಆರಂಭದಿಂದ ಅಂತಿಮ ಸ್ಥಾನಕ್ಕೆ ಬಂದು ಆನೆಯ ಚಿತ್ರಕ್ಕೆ ಬಾಲ ಬಿಡಿಸಬೇಕು. ಆಡುವ ಸದಸ್ಯ ಸಾಗುತ್ತಿರುವ ಹಾದಿ ಸರಿಯಾಗಿ ಇದೆಯೋ ಅಥವಾ ಇಲ್ಲವೋ ಎನ್ನುವುದನ್ನು ತಂಡದವರು ವಿವರಿಸಬೇಕು. ಈ ಟಾಸ್ಕ್​ನಲ್ಲಿ ಅತಿ ಹೆಚ್ಚು ಬಾರಿ ಸರಿಯಾಗಿ ಬಾಲ ಬಿಡಿಸಿದ ತಂಡ ಈ ಟಾಸ್ಕ್ ಗೆಲ್ಲುತ್ತದೆ.

ಮೊದಲು ಸ್ಪರ್ಧೆಗೆ ಇಳಿದಿದ್ದು ರಣಶಕ್ತಿ ಟೀಂನ ಸಂಗೀತಾ ಶೃಂಗೇರಿ. ಅವರ ಕಣ್ಣಿಗೆ ಪಟ್ಟಿಕಟ್ಟಿದ್ದು ವಿನಯ್. ಸಂಗೀತಾಗೆ ಮಾರ್ಗದರ್ಶನ ನೀಡಿದ್ದು ತನಿಷಾ. ಸಂಗೀತಾ ಬಾಲ ಬಿಡಿಸಿದರು. ಆ ಬಳಿಕ ಮಾಣಿಕ್ಯ ತಂಡದಿಂದ ನಮ್ರತಾ ಅಖಾಡಕ್ಕೆ ಇಳಿದರು. ಅವರು ಕೂಡ ಕಷ್ಟಪಟ್ಟು ಬಾಲ ಬಿಡಿಸಿದರು. ನಂತರ ರಣಶಕ್ತಿ ಮತ್ತು ಮಾಣಿಕ್ಯ ತಂಡದ ನೀತು, ಇಶಾನಿ, ವರ್ತೂರು ಸಂತೋಷ್, ಸಿರಿ ಯಶಸ್ವಿಯಾಗಿ ಬಾಲ ಬಿಡಿಸಿದರು. ತುಕಾಲಿ ಸಂತೋಷ್, ಭಾಗ್ಯಶ್ರಿ, ಬುಲೆಟ್ ರಕ್ಷಕ್ ದಾರಿ ತಪ್ಪಿದರೂ ನಂತರ ಸರಿಯಾಗಿ ಬಾಲ ಬಿಡಿಸಿದರು.

ಇದನ್ನೂ ಓದಿ: ‘ಅತೀ ಸುರಕ್ಷಿತ ಮನೆ ಬಿಗ್ ಬಾಸ್’; ಸ್ಪರ್ಧಿಗಳಿಗೆ ಸುದೀಪ್ ಎಚ್ಚರಿಕೆ

ಹಲವಾರು ಫನ್ ಮೂಮೆಂಟ್​ಗೆ ಈ ಟಾಸ್ಕ್​ ಸಾಕ್ಷಿ ಆಯಿತು. ಸ್ಪರ್ಧಿಗಳೂ ಈ ಆಟವನ್ನು ಎಂಜಾಯ್ ಮಾಡಿದರು. ಈ ಸ್ಪರ್ಧೆಯಲ್ಲಿ ರಣಶಕ್ತಿ ತಂಡ ಗೆದ್ದಿದೆ. ಈ ರೀತಿಯ ಫನ್ ಗೇಮ್‌ನ ಜಿಯೋ ಸಿನಿಮಾದ ಫನ್ ಫ್ರೈಡೇ ಸೆಗ್ಮೆಂಟ್‌ನಲ್ಲಿ ವೀಕ್ಷಿಸಬಹುದು.

ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಆಗುತ್ತಿದೆ. ಜಿಯೋದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ