Bigg Boss Kannada: ಹೇಗಿರಲಿದೆ ‘ಬಿಗ್ ಬಾಸ್ ಸೀಸನ್ 13’? ಯಾವ ಥೀಮ್? ಎಷ್ಟು ಗಂಟೆಗೆ ಆರಂಭ?

Bigg Boss Kannada Season 13 Contestants List, Launch Date: ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 13' ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 6ರಿಂದ ಸಂಜೆ 7 ಗಂಟೆಗೆ ಶೋ ಪ್ರಸಾರವಾಗಲಿದ್ದು, ಕಿಚ್ಚ ಸುದೀಪ್ ನಿರೂಪಿಸಲಿದ್ದಾರೆ. ಫ್ಲೈಟ್ ಹಾಗೂ ವರ್ಲ್ಡ್ ಟೂರ್ ಥೀಮ್ ಹೊಂದಿರುವ ಈ ಬಾರಿಯ ದೊಡ್ಮನೆಗೆ 18 ಸ್ಪರ್ಧಿಗಳು ಕಾಲಿಡುವ ನಿರೀಕ್ಷೆಯಿದೆ.

Bigg Boss Kannada: ಹೇಗಿರಲಿದೆ ‘ಬಿಗ್ ಬಾಸ್ ಸೀಸನ್ 13’? ಯಾವ ಥೀಮ್? ಎಷ್ಟು ಗಂಟೆಗೆ ಆರಂಭ?
ಬಿಗ್ ಬಾಸ್

Updated on: Sep 05, 2026 | 2:56 PM

ಮುಖ್ಯಾಂಶಗಳು

  • ದೊಡ್ಮನೆ ಪ್ರವೇಶಕ್ಕೆ ಕೌಂಟ್‌ಡೌನ್ ಸ್ಟಾರ್ಟ್
  • ಸೆಪ್ಟೆಂಬರ್ 6ರಿಂದ ಶುರು ಬಿಗ್ ಬಾಸ್ ರಂಗು
  • ಬದಲಾಯ್ತು ಪ್ರಸಾರದ ಸಮಯ

‘ಬಿಗ್ ಬಾಸ್ ಕನ್ನಡ ಸೀಸನ್ 13’ರ  ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಸೆಪ್ಟೆಂಬರ್ 6ರಿಂದ ಶೋ ಶುರುವಾಗಲಿದೆ. 16-18 ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸುವ ಸಾಧ್ಯತೆ ಇದೆ. ಈ ಬಾರಿಯ ಶೋ ಮತ್ತಷ್ಟು ರಂಗೇರಲಿದೆ. ಈ ಬಾರಿ ಯಾವ ಸ್ಪರ್ಧಿಗಳು ಬರುತ್ತಾರೆ, ಯಾರು ಫೇವರಿಟ್ ಆಗ್ತಾರೆ, ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ. ಹಾಗಾದರೆ, ಶೋ ಹೇಗಿರಲಿದೆ ಎಂಬುದರ ವಿವರ ಇಲ್ಲಿದೆ.

ಆರಂಭ ಸಮಯ

ಪ್ರತಿ ಬಾರಿ ಬಿಗ್ ಬಾಸ್ ಸೀಸನ್ ಸಂಜೆ 6 ಗಂಟೆಗೆ ಪ್ರಸಾರ ಆಗುತ್ತಿತ್ತು. ಆದರೆ, ಈ ಬಾರಿ ಬಿಗ್ ಬಾಸ್ ಆರಂಭ ಆಗ್ತಿರೋದು 7 ಗಂಟೆಗೆ. ಹೌದು, ಭಾನುವಾರ (ಸೆಪ್ಟೆಂಬರ್ 6) ಸಂಜೆ 7 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಪ್ರಸಾರ ಶುರುವಾಗಲಿದೆ. ಈ ಶೋನ ಕಿಚ್ಚ ಸುದೀಪ್ ಅವರು ನಡೆಸಿಕೊಡಲಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್​ಸ್ಟಾರ್​​ನಲ್ಲಿ ಶೋ ಪ್ರಸಾರ ಕಾಣಲಿದೆ.

ಎಷ್ಟು ಸ್ಪರ್ಧಿಗಳು?

ಈ ಬಾರಿ ‘ಬಿಗ್ ಬಾಸ್’ ಶೋನಲ್ಲಿ 18 ಸ್ಪರ್ಧಿಗಳು ಇರೋ ನಿರೀಕ್ಷೆ ಇದೆ. ಬಿಗ್ ಬಾಸ್ ಅಗ್ನಿಪರೀಕ್ಷೆಯಿಂದ 4 ಸ್ಪರ್ಧಿಗಳು ಬರೋ ನಿರೀಕ್ಷೆ ಇದೆ. 3 ಸ್ಪರ್ಧಿಗಳು ಜನರು ವೋಟ್ ಮಾಡಿ ಕಳುಹಿಸಿದರೆ, ಇನ್ನೋರ್ವ ಸ್ಪರ್ಧಿಯನ್ನು ಜಡ್ಜ್​​ಗಳು ಆಯ್ಕೆ ಮಾಡಿ ಕಳುಹಿಸುವ ಸಾಧ್ಯತೆ ಇದೆ.

ವಿವಿಧ ಕ್ಷೇತ್ರದವರು

ಪ್ರತಿ ಬಾರಿ ಬಿಗ್ ಬಾಸ್​ನಲ್ಲಿ ವಿವಿಧ ಕ್ಷೇತ್ರದವರನ್ನು ಕರೆಸಲಾಗುತ್ತದೆ. ಈ ಬಾರಿಯೂ ಅದು ಮುಂದುವರಿಯಲಿದೆ. ಮಾಡೆಲಿಂಗ್, ನಟನೆ, ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿದವರು ಬಿಗ್ ಬಾಸ್ ವೇದಿಕೆ ಏರಲಿದ್ದಾರೆ. ಇದರ ಜೊತೆಗೆ ಜನಸಾಮಾನ್ಯರು ಕೂಡ ಇರಲಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ಗೆ ಎಂಟ್ರಿ ಕೊಡೋ ಸ್ಪರ್ಧಿಗಳು ಇವರೇ ನೋಡಿ; ವಿಡಿಯೋದಲ್ಲೇ ರಿವೀಲ್

ಯಾವ ಥೀಮ್?

ಈ ಬಾರಿ ಫ್ಲೈಟ್ ಥೀಮ್​ನೊಂದಿಗೆ ಬಿಗ್ ಬಾಸ್ ಬರುತ್ತಿದೆ. ವರ್ಲ್ಡ್​ ಟೂರ್ ಥೀಮ್ ಇರಲಿದ್ದು, ವಿಶ್ವದ ಅದ್ಭುತಗಳನ್ನು ದೊಡ್ಮನೆಯಲ್ಲಿ ನಿರ್ಮಾಣ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us