‘ಸಾವಿರ ಗುಂಗಲ್ಲಿ’ ಆಲ್ಬಂ ಹಾಡಿನಲ್ಲಿ ಮಿಂಚಿದ ನಟಿ ಬೃಂದಾ ಆಚಾರ್ಯ
ಬೃಂದಾ ಆಚಾರ್ಯ, ಭರತ್ ಬೋಪಣ್ಣ ಮುಂತಾದವರು ನಟಿಸಿರುವ ‘ಸಾವಿರ ಗುಂಗಲ್ಲಿ’ ಎಂಬ ಆಲ್ಬಂ ಸಾಂಗ್ ಮೂಡಿಬಂದಿದೆ. ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದು, ಪೃಥ್ವಿ ಭಟ್ ಅವರು ಧ್ವನಿ ನೀಡಿದ್ದಾರೆ. ಮ್ಯೂಸಿಕ್ ವಿಡಿಯೋ ಅಥವಾ ಆಲ್ಬಂ ಸಾಂಗ್ನ ಟ್ರೆಂಡ್ ಕಡಿಮೆ ಆಗಿರುವ ಈ ಸಂದರ್ಭದಲ್ಲಿ ‘ಸಾವಿರ ಗುಂಗಲ್ಲಿ’ ಸಾಂಗ್ ಬಿಡುಗಡೆ ಆಗಿದೆ.
ಕೇಳುಗರನ್ನು ಆವರಿಸಿಕೊಳ್ಳುವಂತಹ ಹಾಡಿಗಾಗಿ ಕಾಯುವ ಸಂಗೀತ ಪ್ರೇಮಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಬೃಂದಾ ಆಚಾರ್ಯ (Brinda Acharya) ಹಾಗೂ ಭರತ್ ಬೋಪಣ್ಣ ಅಭಿನಯಿಸಿರುವ ಮ್ಯೂಸಿಕ್ ವಿಡಿಯೋ ಬಿಡುಗಡೆ ಆಗಿದೆ. ಸಂಗೀತ, ಸಾಹಿತ್ಯ, ಪರಿಕಲ್ಪನೆ, ಅಭಿನಯಯ ಸೇರಿದಂತೆ ಎಲ್ಲ ಆಯಾಮದಲ್ಲೂ ಈ ಸಾಂಗ್ ಗಮನ ಸೆಳೆಯುತ್ತಿದೆ. ‘ಸಾವಿರ ಗುಂಗಲ್ಲಿ’ (Saavira Gungalli) ಎಂಬುದು ಈ ಸಾಂಗ್ನ ಶೀರ್ಷಿಕೆ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಆಚೆಗೂ ಹಾಡುಗಳು ಜನಮನ ಸೆಳೆಯುತ್ತಿವೆ.
ಇತ್ತೀಚಿನ ದಿನಗಳಲ್ಲಿ ಆಲ್ಬಂ ಸಾಂಗ್ ಅಥವಾ ಮ್ಯೂಸಿಕ್ ವಿಡಿಯೋ ಎಂಬ ಕಾನ್ಸೆಪ್ಟ್ ಕಡಿಮೆ ಆಗುತ್ತಿವೆ. ಆ ಕೊರತೆಯನ್ನು ನೀಗಿಸುವ ರೀತಿಯಲ್ಲಿ ‘ಸಾವಿರ ಗುಂಗಲ್ಲಿ’ ಹಾಡು ಮೂಡಿಬಂದಿದೆ. ಇದೊಂದು ನವಿರಾದ ಹಾಡು. ಈ ಹಾಡಿಗೆ ಮೆಚ್ಚುಗೆ ಸಿಗುತ್ತಿರುವುದು ತಂಡಕ್ಕೆ ಖುಷಿ ನೀಡಿದೆ. ಕೃಷ್ಣ ನಂಜುಂಡಯ್ಯ ಅವರ ಪರಿಕಲ್ಪನೆ ಈ ಹಾಡಿನ ಹಿಂದಿದೆ. ಬೃಂದಾ ಆಚಾರ್ಯ, ಮಯೂರ್ ಸಾಗರ್, ಭರತ್ ಬೋಪಣ್ಣ, ಮಾನಿನಿ ಪಿ. ರಾವ್, ಕೃತಿಕಾ ಗೌಡ ಮುಂತಾದವರು ಈ ಆಲ್ಬಂ ಸಾಂಗ್ನ ಭಾಗವಾಗಿದ್ದಾರೆ.
ಈ ಹಾಡಿನ ಪ್ರಧಾನ ಆಕರ್ಷಣೆಯಾಗಿ ಬೃಂದಾ ಆಚಾರ್ಯ ಕಾಣಿಸುತ್ತಿದ್ದಾರೆ. ಸಾಂಗ್ನಲ್ಲಿ ಕಥೆಯೊಂದು ಕೂಡ ಇದೆ. ಕೇಳುಗರನ್ನು ಈ ಹಾಡು ಸೆಳೆಯುವಂತಿದೆ. ಕನ್ನಡ ಚಿತ್ರರಂಗದಲ್ಲಿ ಹಿಟ್ ಹಾಡುಗಳನ್ನು ನೀಡಿರುವ ಪ್ರಮೋದ್ ಮರವಂತೆ ಅವರು ಈ ಸಾಂಗ್ಗೆ ಸಾಹಿತ್ಯ ಬರೆದಿದ್ದಾರೆ. ಪೃಥ್ವಿ ಭಟ್ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಛಾಯಾಗ್ರಹಣ, ಅದ್ದೂರಿತನ ಕೂಡ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ನಿರೂಪ್ ಭಂಡಾರಿ ಜೊತೆ ಬೃಂದಾ ಆಚಾರ್ಯ ಹೊಸ ಸಿನಿಮಾ; ಶಿವಾನಿಗೆ ಸಖತ್ ಚಾನ್ಸ್
ನಟಿ ಬೃಂದಾ ಆಚಾರ್ಯ ಅವರು ಇದೀಗ ಹಲವು ಬಿಗ್ ಬಜೆಟ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವುಗಳ ನಡುವೆ ಇಂಥದ್ದೊಂದು ನವಿರಾದ ಹಾಡಿನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಹತ್ತಿರ ಆಗಿದ್ದಾರೆ. ಧಾರಾವಾಹಿ ಜಗತ್ತಿನಿಂದ ಈಗ ನಾಯಕನಾಗಿ ಸಕ್ರಿಯವಾಗಿರುವ ಭರತ್ ಬೋಪಣ್ಣ ಸಹ ಅಷ್ಟೇ ಸೂಪರ್ ಆಗಿ ನಟಿಸಿದ್ದಾರೆ. ಜೋಯ್ ಕಾಸ್ಟಾ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
ಎನ್.ಕೆ. ರಾಜ್ ಅವರು ಛಾಯಾಗ್ರಹಣ ಮಾಡಿದ್ದಾರೆ. ತಮಿಳರಸನ್ ಎಂ. ಅವರು ಸಂಕಲನ ಮಾಡಿದ್ದಾರೆ. ಅನಿಲ್ ಸಹ ನಿರ್ದೇಶನ ಈ ಹಾಡಿಗೆ ಇದೆ. ದಿನದಿಂದ ದಿನಕ್ಕೆ ಈ ಸಾಂಗ್ ಹೆಚ್ಚು ಹೆಚ್ಚು ಜನರನ್ನು ತಲುಪುತ್ತಿರುವುದು ತಂಡಕ್ಕೆ ಖುಷಿ ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.