ಈ ಫೋಟೋದಲ್ಲಿರುವ ನಟಿ ಯಾರೆಂದು ಗುರುತಿಸುತ್ತೀರಾ? ಪುನೀತ್ ರಾಜ್​ಕುಮಾರ್ ಜೊತೆಯೂ ತೆರೆಹಂಚಿಕೊಂಡಿದ್ದರು..

ಪುನೀತ್ ರಾಜ್​ಕುಮಾರ್, ಪ್ರಭಾಸ್, ಮೆಗಾಸ್ಟಾರ್ ಚಿರಂಜೀವಿ, ವೆಂಕಟೇಶ್, ನಾಗಾರ್ಜುನ ಹೀಗೆ ಎಲ್ಲಾ ಸ್ಟಾರ್ ಹೀರೋಗಳ ಎದುರು ನಟಿಸಿ ಈ ನಟಿ ಫೇಮಸ್ ಆಗಿದ್ದಾರೆ.

ಈ ಫೋಟೋದಲ್ಲಿರುವ ನಟಿ ಯಾರೆಂದು ಗುರುತಿಸುತ್ತೀರಾ? ಪುನೀತ್ ರಾಜ್​ಕುಮಾರ್ ಜೊತೆಯೂ ತೆರೆಹಂಚಿಕೊಂಡಿದ್ದರು..
ನಟಿಯ ಬಾಲ್ಯದ ಫೋಟೋ- ಪುನೀತ್ ರಾಜ್​ಕುಮಾರ್

Updated on: May 25, 2023 | 7:36 AM

ಸೋಶಿಯಲ್ ಮೀಡಿಯಾದಲ್ಲಿ ಈಗ ಥ್ರೋಬ್ಯಾಕ್ ಟ್ರೆಂಡ್ ಜೋರಾಗಿದೆ. ಬಾಲ್ಯದ ಫೋಟೋ ಹಂಚಿಕೊಂಡು ಥ್ರೋಬ್ಯಾಕ್ ಹ್ಯಾಶ್​ಟ್ಯಾಗ್ ಹಾಕಲಾಗುತ್ತದೆ. ಈ ಟ್ರೆಂಡ್​ನಲ್ಲಿ ನಾಯಕಿಯ ಫೋಟೋ ಒಂದು ವೈರಲ್ ಆಗಿದೆ. ಫೋಟೋದಲ್ಲಿರುವ ಹುಡುಗಿ ಈಗ ಸ್ಟಾರ್ ನಟಿ. ಈ ಚೆಲುವೆ 1999ರಲ್ಲಿ ‘ಮಿಸ್ ಚೆನ್ನೈ’ ಪಟ್ಟ ಗೆದ್ದುಕೊಂಡಿದ್ದರು. ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್. ಅವರು ಸುಮಾರು 2 ದಶಕಗಳಿಂದ ದಕ್ಷಿಣ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಪುನೀತ್ ರಾಜ್​ಕುಮಾರ್ (Puneeth Rajkumar), ಪ್ರಭಾಸ್, ಮೆಗಾಸ್ಟಾರ್ ಚಿರಂಜೀವಿ, ವೆಂಕಟೇಶ್, ನಾಗಾರ್ಜುನ ಹೀಗೆ ಎಲ್ಲಾ ಸ್ಟಾರ್ ಹೀರೋಗಳ ಎದುರು ನಟಿಸಿ ಅವರು ಫೇಮಸ್ ಆಗಿದ್ದಾರೆ. ಈ ಫೋಟೋ ಅವರ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ.

ಈ ಫೋಟೋದಲ್ಲಿರುವ ನಟಿ ತ್ರಿಷಾ ಕೃಷ್ಣನ್. ಈ ನಟಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಸೌಂದರ್ಯ ಸಿನಿಪ್ರಿಯರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ 1’ ಹಾಗೂ ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಯುವರಾಣಿ ಕುಂದವೈ ಪಾತ್ರದಲ್ಲಿ ಎಲ್ಲರ ಗಮನ ಸೆಳೆದರು. ನಲವತ್ತರ ಹರೆಯದಲ್ಲೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ಅವರ ಬಾಲ್ಯದ ಫೋಟೋ ವೈರಲ್ ಆಗಿದೆ.

ತ್ರಿಷಾ ಅವರು ಸೋಫಾ ಮೇಲೆ ಕುಳಿತಿದ್ದಾರೆ. ಜೀನ್ಸ್ ಧರಿಸಿ ಅದಕ್ಕೆ ಬಿಳಿ ಬಣ್ಣದ ಶರ್ಟ್ ಧರಿಸಿದ್ದಾರೆ. ಅವರು ಮನಸಾರೆ ನಗುತ್ತಿದ್ದಾರೆ. ಈ ಫೋಟೋ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತಿದೆ.

ಇದನ್ನೂ ಓದಿ: Trisha: ದಳಪತಿ ವಿಜಯ್​ ಜತೆಗಿನ ‘ಲಿಯೋ’ ಚಿತ್ರದ ಸೆಟ್​ನಿಂದ ತ್ರಿಷಾ ವಾಪಸ್​ ಬಂದಿದ್ದೇಕೆ? ಇಲ್ಲಿದೆ ಅಸಲಿ ವಿಷಯ

ಚೆನ್ನೈನಲ್ಲಿ ಜನಿಸಿದ ತ್ರಿಷಾ ಅವರು ‘ಮೌನಂ ಪೇಸಿಯದೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಸೂರ್ಯ ಎದುರು ತ್ರಿಷಾ ಕಾಣಿಸಿಕೊಂಡಿದ್ದರು. ಇದಾದ ನಂತರ ತ್ರಿಷಾ ತೆಲುಗು ಮೊದಲಾದ ಭಾಷೆಗಳಲ್ಲಿ ನಟಿಸಿದರು. 2014ರಲ್ಲಿ ತೆರೆಗೆ ಬಂದ ಪುನೀತ್ ರಾಜ್​ಕುಮಾರ ನಟನೆಯ ‘ಪವರ್’ ಸಿನಿಮಾ ಮೂಲಕ ತ್ರಿಷಾ ಕನ್ನಡಕ್ಕೆ ಕಾಲಿಟ್ಟರು. ‘ದ್ವಿತ್ವ’ ಚಿತ್ರದಲ್ಲಿ ಪುನೀತ್ ಜೊತೆ ಅವರು ತೆರೆ ಹಂಚಿಕೊಳ್ಳಬೇಕಿತ್ತು. ಅಪ್ಪು ನಿಧನ ಬಳಿಕ ಸಿನಿಮಾ ಅರ್ಧಕ್ಕೆ ಕೈಬಿಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:35 am, Thu, 25 May 23