ಈ ಫೋಟೋದಲ್ಲಿ ಸ್ಟಾರ್ ನಟಿ ಯಾರೆಂದು ಪತ್ತೆ ಹಚ್ಚುವಿರಾ? ಪುನೀತ್ ಜೊತೆಯೂ ನಟಿಸಿದ್ದರು

|

Updated on: Jul 20, 2023 | 7:41 AM

ಈ ಫೋಟೋದಲ್ಲಿರುವ ನಟಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುವ ಮೂಲಕ ಜನಪ್ರಿಯತೆ ಪಡೆದರು. ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಕ್ರೇಜ್ ಇದೆ.

ಈ ಫೋಟೋದಲ್ಲಿ ಸ್ಟಾರ್ ನಟಿ ಯಾರೆಂದು ಪತ್ತೆ ಹಚ್ಚುವಿರಾ? ಪುನೀತ್ ಜೊತೆಯೂ ನಟಿಸಿದ್ದರು
ಸೆಲೆಬ್ರಿಟಿ ಬಾಲ್ಯದ ಫೋಟೋ
Follow us on

ಈ ಮೇಲಿನ ಫೋಟೋದಲ್ಲಿ ದಕ್ಷಿಣದ ಸ್ಟಾರ್ ನಟಿ ಇದ್ದಾರೆ. ಮೊದಲ ಸಿನಿಮಾದಲ್ಲೇ ಅವರು ಪ್ರೇಕ್ಷಕರ ಮನ ಕದ್ದರು. ಸುಂದರ ರೂಪ, ಅದ್ಭುತ ನಟನೆ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ಫೇಮಸ್ ಆದರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುವ ಮೂಲಕ ಅವರು ಜನಪ್ರಿಯತೆ ಪಡೆದರು. ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಕ್ರೇಜ್ ಇದೆ. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ (Puneeth Rajkumar) ಜೊತೆಯೂ ಅವರು ತೆರೆ ಹಂಚಿಕೊಂಡಿದ್ದಾರೆ. ಅವರು ಬೇರಾರೂ ಅಲ್ಲ ನಟಿ ಅನುಪಮಾ ಪರಮೇಶ್ವರನ್ (Anupama Parameshwaran).

ಅನುಪಮಾ ಹುಟ್ಟಿದ್ದು ಕೇರಳದ ತ್ರಿಶೂರ್​ನಲ್ಲಿ. ಮಲಯಾಳಂನ ‘ಪ್ರೇಮಂ’ ಸಿನಿಮಾ ಮೂಲಕ ಅವರು ಸಖತ್ ಜನಪ್ರಿಯತೆ ಪಡೆದರು. ಮೊದಲ ಸಿನಿಮಾದಲ್ಲೇ ಯಶಸ್ಸು ಸಿಕ್ಕಿತು. ಬಳಿಕ ಅವರಿಗೆ ಪರಭಾಷೆಯಿಂದಲೂ ಆಫರ್​ಗಳು ಬಂದವು. ಪುನೀತ್ ರಾಜ್​ಕುಮಾರ್ ನಟನೆಯ ‘ನಟಸಾರ್ವಭೌಮ’ ಸಿನಿಮಾದಲ್ಲಿ ನಟಿಸಿ ಕನ್ನಡ ಪ್ರೇಕ್ಷಕರಿಗೂ ಅವರು ಪರಿಚಿತರಾದರು. ಅವರು ಅನೇಕರಿಗೆ ಇಷ್ಟವಾದರು. ಇತ್ತೀಚೆಗೆ ರಿಲೀಸ್ ಆದ ‘ಕಾರ್ತಿಕೇಯ 2’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆದರು.

ಅನುಪಮಾ ಪರಮೇಶ್ವರನ್ ಅವರ ಬಾಲ್ಯದ ಫೋಟೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇವರು ಯಾರು ಎಂದು ಗುರುತಿಸುವಂತೆ ಚಾಲೆಂಜ್ ಮಾಡುತ್ತಿದ್ದಾರೆ. ಮೇಲಿನ ಫೋಟೋದಲ್ಲಿ ಅನುಪಮಾ ಮುಂದಿನ ಸಾಲಿನಲ್ಲಿ ನಿಂತಿದ್ದಾರೆ. 2022ರಲ್ಲಿ ಅವರ ನಟನೆಯ ನಾಲ್ಕೈದು ಸಿನಿಮಾಗಳು ರಿಲೀಸ್ ಆಗಿವೆ ಅನ್ನೋದು ವಿಶೇಷ.

ಇದನ್ನೂ ಓದಿ: ಎದೆಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡ ಅನುಪಮಾ ಪರಮೇಶ್ವರನ್​; ‘ನಿಮ್ಮ ಮೇಲಿದ್ದ ಗೌರವ ಹೋಯ್ತು’ ಎಂದ ಫ್ಯಾನ್ಸ್

ಸದ್ಯ ಅನುಪಮಾ ಅವರು ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ತಲಾ ಒಂದೊಂದು ಸಿನಿಮಾ ಮಾಡುತ್ತಿದ್ದಾರೆ. ಅವರು ಕನ್ನಡ ಸಿನಿಮಾ ಒಪ್ಪಿಕೊಳ್ಳಲಿ ಅನ್ನೋದು ಅಭಿಮಾನಿಗಳ ಆಸೆ. ಆದರೆ, ಅದು ಸದ್ಯಕ್ಕಂತೂ ಈಡೇರುವ ಸಾಧ್ಯತೆ ಕಡಿಮೆ. ಅನುಪಮಾ ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:40 am, Thu, 20 July 23