AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನುಡಿದಂತೆ ನಡೆಯಲಿಲ್ಲ ರಾಧಿಕಾ ಪಂಡಿತ್: ಐದು ವರ್ಷಗಳ ಹಿಂದೆ ಹೀಗೊಂದು ಭರವಸೆ ಕೊಟ್ಟಿದ್ದರು

Radhika Pandit: ನಟಿ ರಾಧಿಕಾ ಪಂಡಿತ್ ಐದು ವರ್ಷಗಳ ಹಿಂದೆ ಭರವಸೆಯೊಂದನ್ನು ನೀಡಿದ್ದರು ಆದರೆ ಅದನ್ನು ಈಡೇರಿಸಿಲ್ಲ. ಏನು ಆ ಭರವಸೆ?

ನುಡಿದಂತೆ ನಡೆಯಲಿಲ್ಲ ರಾಧಿಕಾ ಪಂಡಿತ್: ಐದು ವರ್ಷಗಳ ಹಿಂದೆ ಹೀಗೊಂದು ಭರವಸೆ ಕೊಟ್ಟಿದ್ದರು
ರಾಧಿಕಾ ಪಂಡಿತ್
Follow us
ಮಂಜುನಾಥ ಸಿ.
|

Updated on:Jul 19, 2023 | 8:56 PM

ಕನ್ನಡ ಚಿತ್ರರಂಗ (Sandalwood) ಇತ್ತೀಚಿನ ಹತ್ತು-ಹದಿನೈದು ವರ್ಷಗಳಲ್ಲಿ ಕಂಡ ಅತ್ಯುತ್ತಮ ನಟಿಯರಲ್ಲಿ ರಾಧಿಕಾ ಪಂಡಿತ್ (Radhika Pandit) ಸಹ ಒಬ್ಬರು. ಮದುವೆಯಾದ ಮೇಲೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ರಾಧಿಕಾ ಪತಿ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದ ಬಳಿಕ ಏಕೋ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಂದಹಾಗೆ ರಾಧಿಕಾ ಪಂಡಿತ್, ಸಿನಿಮಾ ರಂಗಕ್ಕೆ ಕಾಲಿಟ್ಟು ಹದಿನೈದು ವರ್ಷಗಳಾಗಿದ್ದು ಇದೇ ಖುಷಿಯಲ್ಲಿ ಐದು ವರ್ಷ ಹಿಂದೆ ಹಂಚಿಕೊಂಡಿದ್ದ ಪೋಸ್ಟ್ ಒಂದನ್ನು ಮತ್ತೆ ಹಂಚಿಕೊಂಡಿದ್ದಾರೆ.

ಧಾರಾವಾಹಿ ಮೂಲಕ ನಟನೆ ಆರಂಭಿಸಿದ ರಾಧಿಕಾ ಪಂಡಿತ್, ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು ಕಲ್ಟ್ ಎಂದು ಕರೆಯಬಹುದಾದ ‘ಮೊಗ್ಗಿನ ಮನಸ್ಸು’ ಸಿನಿಮಾ ಮೂಲಕ. ಅದೇ ಸಿನಿಮಾದಲ್ಲಿ ರಾಧಿಕಾರ ಬಾಯ್​ಫ್ರೆಂಡ್ ಪಾತ್ರದಲ್ಲಿ ಯಶ್ ನಟಿಸಿದ್ದನ್ನು ಮರೆಯುವಂತಿಲ್ಲ. ರಾಧಿಕಾರ ಎಂಟ್ರಿಗೆ ಕಾರಣವಾದ ‘ಮೊಗ್ಗಿನ ಮನಸ್ಸು’ ಸಿನಿಮಾ ಬಿಡುಗಡೆ ಆಗಿ ನಿನ್ನೆಗೆ (ಜುಲೈ 18) 15 ವರ್ಷಗಳಾಗಿವೆ. ಸತತವಾಗಿ ಸಕ್ರಿಯ ಹತ್ತು ವರ್ಷಗಳನ್ನು ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದಲ್ಲಿ ಕಳೆದಿದ್ದಾರೆ.

”ಜುಲೈ 18, 2008 ‘ರಾಧಿಕಾ ಪಂಡಿತ್’ ಆಗಿ ನಿಮಗೆಲ್ಲ ಪರಿಚಿತಳಾದೆ, ನನಗೆ ಚಿತ್ರಪ್ರಪಂಚದ ಪರಿಚಯವಾಯ್ತು. ನಟಿಯರ ಜೀವನ ಚಿಕ್ಕದು ಎನ್ನುತ್ತಾರೆ ಆದರೆ 10 ವರ್ಷ ಎಂಬುದು ಸಣ್ಣದಲ್ಲ. 10 ವರ್ಷ ಹೋರಾಡಿ ಉಳಿದದ್ದೇನೂ ಅಲ್ಲ ಬದಲಿಗೆ ಗಟ್ಟಿಯಾಗಿ ನೆಲೆಗೊಂಡಿದ್ದು. ಈ ಹತ್ತು ವರ್ಷಗಳಲ್ಲಿ ನಿನ್ನ ಸಾಧನೆ ಏನು? ಎಂದು ನೀವು ಕೇಳಬಹುದು, ನಿಮ್ಮನ್ನು (ಅಭಿಮಾನಿಗಳು) ಗಳಿಸಿರುವುದೇ ನನ್ನ ಸಾಧನೆ. ಇಂದಿಗೂ ನನ್ನನ್ನು ಪ್ರೀತಿಸುವ ಅಭಿಮಾನಿಗಳನ್ನು ಪಡೆದಿದ್ದೇನೆ. ಗೌರವಿಸುವ ಚಿತ್ರೋದ್ಯಮವನ್ನು ಪಡೆದಿದ್ದೇನೆ” ಎಂದು ಐದು ವರ್ಷಗಳ ಹಿಂದಿನ ಪೋಸ್ಟ್​ನಲ್ಲಿ ನಟಿ ರಾಧಿಕಾ ಪಂಡಿತ್ ಬರೆದಿದ್ದರು.

ಇದನ್ನೂ ಓದಿ:‘ನೀವು ಯಾವಾಗಲೂ ಸ್ಯಾಂಡಲ್​ವುಡ್​ನ ರಾಜಕುಮಾರಿ’; ರಾಧಿಕಾ ಪಂಡಿತ್ ಫೋಟೋಗೆ ಫ್ಯಾನ್ಸ್ ಕಮೆಂಟ್

ಮುಂದುವರೆದು, ”ಈ ಪಯಣ ಸುಲಭದ್ದೇನು ಆಗಿರಲಿಲ್ಲ. ಆದರೆ ಇದನ್ನು ಸಾಧ್ಯವಾಗಿಸುವುದರಲ್ಲಿ ನನ್ನ ಸುತ್ತಲಿನವರ ಶ್ರಮ ದೊಡ್ಡದು. ಅದರಲ್ಲಿಯೂ ನನ್ನ ಕುಟುಂಬದವರ ಶ್ರಮ ದೊಡ್ಡದು. ನನ್ನ ಕುಟುಂಬದವರು ನನಗೆ ಬೆಂಬಲ ನೀಡಿದರು, ಮಾರ್ಗದರ್ಶನ ಮಾಡಿದರು. ಎಲ್ಲ ರೀತಿಯ ಋಣಾತ್ಮಕತೆಗಳಿಂದಲೂ ನನ್ನನ್ನು ಕಾಪಾಡಿದರು. ನನ್ನ ಪ್ರತಿದಿನದ ಶೂಟಿಂಗ್​ನಲ್ಲೂ ನನ್ನ ತಾಯಿ ಜೊತೆಯಾಗಿರುತ್ತಿದ್ದರು, ಅಂತೆಯೇ ನನ್ನ ಸಹಾಯಕ ಶಂಕರ್ ಸಹ. ಶಂಕರ್ ನನ್ನ ಸಹಾಯಕನಾಗಿ ಕೆಲಸ ಆರಂಭಿಸಿ ಹತ್ತು ವರ್ಷಗಳಾಗಿವೆ” ಎಂದು ತಮ್ಮ ಸಿನಿಮಾ ಪಯಣಕ್ಕೆ ಸಹಾಯ ಮಾಡಿದ ಬೆಂಬಲವಾಗಿ ನಿಂತವರಿಗೆ ಧನ್ಯವಾದಗಳನ್ನು ರಾಧಿಕಾ ಪಂಡಿತ್ ಐದು ವರ್ಷಗಳ ಹಿಂದೆ ಹೇಳಿದ್ದರು.

ತಮ್ಮ ಐದು ವರ್ಷಗಳ ಹಿಂದಿನ ಪೋಸ್ಟ್​ನಲ್ಲಿ ”ಇದು ಸಿನಿಮಾ ರಂಗದ ನಿವೃತ್ತಿ ಭಾಷಣವಲ್ಲ, ‘ಪಿಕ್ಚರ್ ಇನ್ನೂ ಇದೆ’ ಎಂದಿದ್ದರು. ಆ ಮೂಲಕ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವುದಾಗಿ ಸೂಚನೆ ನೀಡಿದ್ದರು. ಆದರೆ ಆ ಬಳಿಕ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿಲ್ಲ. 2019 ರಲ್ಲಿ ಬಿಡುಗಡೆ ಆದ ‘ಆದಿಲಕ್ಷ್ಮಿ ಪುರಾಣ’ ರಾಧಿಕಾರ ಕೊನೆಯ ಸಿನಿಮಾ ಆಗಿದೆ. ಅದಾದ ಬಳಿಕ ಇನ್ಯಾವ ಸಿನಿಮಾದಲ್ಲಿಯೂ ರಾಧಿಕಾ ನಟಿಸಿಲ್ಲ. ಹಾಗೆಂದು ಸಿನಿಮಾಗಳಿಂದ ನಂಟು ಕಳೆದುಕೊಂಡಿಲ್ಲ, ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಗಳಿಗಾಗಿ ತೆರೆ ಮರೆಯಲ್ಲಿ ರಾಧಿಕಾ ಕೆಲಸ ಮಾಡಿದ್ದರು. ಯಶ್​ರ ಮುಂದಿನ ಸಿನಿಮಾ ತಂಡದಲ್ಲಿಯೂ ರಾಧಿಕಾ ಇರುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:50 pm, Wed, 19 July 23

ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ