ಜೊಮ್ಯಾಟೋ ಜಾಹೀರಾತಿನಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ವ್ಯಂಗ್ಯವಾಡಿದ ಅಲ್ಲು ಅರ್ಜುನ್; ಹಿಗ್ಗಾಮುಗ್ಗಾ ತರಾಟೆ
ಸಿನಿಮಾ ಹಿಟ್ ಆದ ನಂತರದಲ್ಲಿ ಅದೇ ಥೀಮ್ಅನ್ನು ಜಾಹೀರಾತಿನವರೂ ಬಳಕೆ ಮಾಡಿಕೊಳ್ಳುತ್ತಾರೆ. ‘ಪುಷ್ಪ’ ಸಿನಿಮಾ ಹಿಟ್ ಆಗಿದೆ. ಈಗ ಅನೇಕ ಬ್ರ್ಯಾಂಡ್ಗಳು ಅಲ್ಲು ಅರ್ಜುನ್ ಹಿಂದೆ ಬಿದ್ದಿವೆ.
ದಕ್ಷಿಣ ಭಾರತದ ಚಿತ್ರರಂಗಕ್ಕೂ (South India Film Industry) ಹಾಗೂ ಬಾಲಿವುಡ್ಗೂ (Bollywood) ಸಾಕಷ್ಟು ವ್ಯತ್ಯಾಸವಿದೆ. ಎರಡೂ ಚಿತ್ರರಂಗದವರು ಒಂದಕ್ಕಿಂತ ಒಂದು ಅದ್ಭುತ ಸಿನಿಮಾಗಳನ್ನು ನೀಡುವುದರಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಇಬ್ಬರಲ್ಲಿ ಯಾರು ಗ್ರೇಟ್ ಎನ್ನುವ ವಿಚಾರದ ಬಗ್ಗೆಯೂ ಚರ್ಚೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಬಾಲಿವುಡ್ಅನ್ನು ದಕ್ಷಿಣ ಭಾರತದ ಫ್ಯಾನ್ಸ್ ಟ್ರೋಲ್ ಮಾಡಿದರೆ, ಸೌತ್ ಇಂಡಿಯಾ ಇಂಡಸ್ಟ್ರಿಯನ್ನು ಬಾಲಿವುಡ್ ಅಭಿಮಾನಿಗಳು ಟೀಕೆ ಮಾಡುತ್ತಾರೆ. ಈಗ ಟಾಲಿವುಡ್ನ ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಟೀಕೆಗೆ ಗುರಿಯಾಗಿದ್ದಾರೆ. ಇಲ್ಲಿಯೇ ಇದ್ದುಕೊಂಡು, ಇಲ್ಲಿನ ಚಿತ್ರರಂಗದ ಬಗ್ಗೆ ಅವರು ವ್ಯಂಗ್ಯವಾಡಿದ್ದಾರೆ.
ಸಿನಿಮಾ ಹಿಟ್ ಆದ ನಂತರದಲ್ಲಿ ಅದೇ ಥೀಮ್ಅನ್ನು ಜಾಹೀರಾತಿನವರೂ ಬಳಕೆ ಮಾಡಿಕೊಳ್ಳುತ್ತಾರೆ. ‘ಪುಷ್ಪ’ ಸಿನಿಮಾ ಹಿಟ್ ಆಗಿದೆ. ಈಗ ಅನೇಕ ಬ್ರ್ಯಾಂಡ್ಗಳು ಅಲ್ಲು ಅರ್ಜುನ್ ಹಿಂದೆ ಬಿದ್ದಿವೆ. ‘ಪುಷ್ಪ’ ಸಿನಿಮಾದ ಥೀಮ್ ಇಟ್ಟುಕೊಂಡು ಜಾಹೀರಾತುಗಳನ್ನು ಮಾಡಲಾಗುತ್ತಿದೆ. ಸೂಪರ್ ಹಿಟ್ ‘ಪುಷ್ಪ’ ಸಿನಿಮಾದಲ್ಲಿ ಫೈಟಿಂಗ್ ವೇಳೆ ಕೆಲ ಸ್ಲೋ ಮೋಷನ್ ದೃಶ್ಯಗಳು ಬಂದಿದ್ದವು. ಇದು ಕೇವಲ ‘ಪುಷ್ಪ’ ಸಿನಿಮಾಗೆ ಮಾತ್ರ ಸೀಮಿತವಾಗಿಲ್ಲ. ದಕ್ಷಿಣ ಭಾರತ ಹಾಗೂ ಬಾಲಿವುಡ್ನ ಸಾಕಷ್ಟು ಸಿನಿಮಾಗಳಲ್ಲಿ ಫೈಟಿಂಗ್ ವೇಳೆ ಇದೇ ಮಾದರಿಯ ತಂತ್ರ ಬಳಕೆ ಮಾಡಿಕೊಳ್ಳಾಗಿದೆ. ಈಗ ಬಂದಿರುವ ಜೊಮ್ಯಾಟೋ ಜಾಹೀರಾತಿನಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ವ್ಯಂಗ್ಯವಾಡಲಾಗಿದೆ.
ಜೊಮ್ಯಾಟೋ ಜಾಹೀರಾತಿನಲ್ಲಿ ಅಲ್ಲು ಅರ್ಜುನ್ ಹಾಗೂ ತೆಲುಗು ನಟ ಸುಬ್ಬರಾಜು ನಡುವೆ ಫೈಟ್ ನಡೆಯುತ್ತಿರುತ್ತದೆ. ಈ ಫೈಟ್ನಲ್ಲಿ ಸುಬ್ಬರಾಜುಗೆ ಅಲ್ಲು ಅರ್ಜುನ್ ಹೊಡೆಯುತ್ತಾರೆ. ಆಗ ಸುಬ್ಬರಾಜು ಅವರು ಸ್ಲೋಮೋಷನ್ನಲ್ಲಿ ಕೆಳಗೆ ಬಿದ್ದಂತೆ ತೋರಿಸಲಾಗಿದೆ. ‘ಬನ್ನಿ ನನ್ನನ್ನು ಬೇಗ ಬೀಳಿಸು. ನನಗೆ ಮಟನ್ ಕರ್ರಿ ತಿನ್ನಬೇಕು. ನಾನು ಬೀಳುವ ವೇಳೆಗೆ ರೆಸ್ಟೋರೆಂಟ್ ಕ್ಲೋಸ್ ಮಾಡುತ್ತಾರೆ’ ಎಂದಿದ್ದಾರೆ ಸುಬ್ಬರಾಜು. ಇದಕ್ಕೆ ಉತ್ತರಿಸಿರುವ ಅಲ್ಲು ಅರ್ಜುನ್, ‘ಇದು ದಕ್ಷಿಣ ಭಾರತ ಸಿನಿಮಾ. ನಾವು ಮಾಡೋದೆ ಹೀಗೆ’ ಎಂದಿದ್ದಾರೆ.
manasu korithe, thaggedele! ? @alluarjun pic.twitter.com/i30UGZEQKD
— zomato (@zomato) February 4, 2022
ಇದು ಅನೇಕರ ಕೋಪಕ್ಕೆ ಕಾರಣವಾಗಿದೆ. ಬಾಲಿವುಡ್ನ ಹಲವು ಸಿನಿಮಾಗಳಲ್ಲಿ ಫೈಟಿಂಗ್ ವೇಳೆ ಇದೇ ರೀತಿಯ ಸ್ಲೋ ಮೋಷನ್ ಬಳಕೆ ಮಾಡಿಕೊಳ್ಳಲಾಗುತ್ತದೆ. ಅದನ್ನು ಇಲ್ಲೇಕೆ ಉಲ್ಲೇಖ ಮಾಡಿಲ್ಲ ಎನ್ನುವ ಪ್ರಶ್ನೆ ಎದುರಾಗಿದೆ. ಸದ್ಯ, ಈ ಜಾಹೀರಾತಿನಿಂದ ಜೊಮ್ಯಾಟೋ ಸಂಸ್ಥೆ ಸಂಕಷ್ಟಕ್ಕೆ ಸಿಲುಕುವ ಎಲ್ಲಾ ಸಾಧ್ಯತೆ ಗೋಚರವಾಗಿದೆ.
As if rohit shetty films are pure realistic films ? https://t.co/gExBtJKOpJ
— Martian (@_Martiann) February 4, 2022
@zomato uninstall ✅ https://t.co/TkR0fJlUuj
— Ash ? (@MBTHELIFE) February 4, 2022
#Prabhas Increasing south indian Cinema Standards and @alluarjun Increasing his own Standards by degrading south indian cinema
pic.twitter.com/aGOUgpID8q https://t.co/4y6M4F21yl
— ‘ (@_raghavaa) February 4, 2022
It is shameful to see our icon degrading the south cinema which is now face of Indian cinema.Not expected this degrading ads from our https://t.co/yhd2qzimf5 should be responsible after achieving certain heights in career but Our AA Is not going through that way. https://t.co/xgn6Whrt9U
— kesava Taggedeley? (@KESAVAA1998) February 4, 2022
ಇದನ್ನೂ ಓದಿ: Pushpa: ಕಾರಿನಲ್ಲಿ ನಡೆವ ರಶ್ಮಿಕಾ-ಅಲ್ಲು ಅರ್ಜುನ್ ಇಂಟಿಮೇಟ್ ದೃಶ್ಯಕ್ಕೆ ಕತ್ತರಿ
ಪುನೀತ್ ಮನೆಗೆ ಭೇಟಿ, ಸಮಾಧಿಗೆ ನಮನ; ಇಲ್ಲಿವೆ ಅಲ್ಲು ಅರ್ಜುನ್ ಭೇಟಿಯ ಫೋಟೋ ಚಿತ್ರಣ
Published On - 5:50 pm, Fri, 4 February 22