RRR ಮೊಬೈಲ್​ಗಳಿಂದ CCB ಅಧಿಕಾರಿಗಳಿಗೆ ಸಿಕ್ಕಿದ್ದಾದರು ಏನು?

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಪಟ್ಟಂತೆ CCBಯಿಂದ ಬಂಧನಕ್ಕೊಳಗಾಗಿರುವ ರವಿಶಂಕರ್, ರಾಗಿಣಿ, ಹಾಗೂ ರಾಹುಲ್ ಅವರ ಮೊಬೈಲ್​ಗಳಿಂದ ಸ್ಪೋಟಕ ಮಾಹಿತಿಗಳು CCB ಅಧಿಕಾರಿಗಳಿಗೆ ಲಭ್ಯವಾಗಿವೆ. CCB ಅಧಿಕಾರಿಗಳಿಗೆ ಯಾವುದೇ ಮಾಹಿತಿ ಸಿಗಬಾರದೆಂದು ತಮ್ಮ ಮೊಬೈಲ್​ಗಳಲಿದ್ದ ಮಾಹಿತಿಯನ್ನು ಡಿಲಿಟ್​ ಮಾಡಿದ್ದರು. ಈ ಹಿನ್ನೆಲೆಯಿಂದಾಗಿ CCB ಅಧಿಕಾರಿಗಳು ಈ ಮೂವರ ಮೊಬೈಲ್ ಡಾಟಾ ರಿಟ್ರೀವ್ ಮಾಡಿಸಲು ಲ್ಯಾಬ್​ಗೆ ಕಳಿಸಿದ್ದರು.ಈಗ ಮೊಬೈಲ್​ಗಳಿಂದ ರಿಟ್ರೀವ್ ಆಗಿರುವ ಡಾಟಾದಿಂದ CCB ಅಧಿಕಾರಿಗಳಿಗೆ ಸಾಕಷ್ಟು ಸಾಕ್ಷಿಗಳು ದೊರೆತಿವೆ. ಈ ಮೂವರು ಯಾವ ಯಾವ […]

RRR ಮೊಬೈಲ್​ಗಳಿಂದ CCB ಅಧಿಕಾರಿಗಳಿಗೆ ಸಿಕ್ಕಿದ್ದಾದರು ಏನು?
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Sep 09, 2020 | 3:23 PM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಪಟ್ಟಂತೆ CCBಯಿಂದ ಬಂಧನಕ್ಕೊಳಗಾಗಿರುವ ರವಿಶಂಕರ್, ರಾಗಿಣಿ, ಹಾಗೂ ರಾಹುಲ್ ಅವರ ಮೊಬೈಲ್​ಗಳಿಂದ ಸ್ಪೋಟಕ ಮಾಹಿತಿಗಳು CCB ಅಧಿಕಾರಿಗಳಿಗೆ ಲಭ್ಯವಾಗಿವೆ.

CCB ಅಧಿಕಾರಿಗಳಿಗೆ ಯಾವುದೇ ಮಾಹಿತಿ ಸಿಗಬಾರದೆಂದು ತಮ್ಮ ಮೊಬೈಲ್​ಗಳಲಿದ್ದ ಮಾಹಿತಿಯನ್ನು ಡಿಲಿಟ್​ ಮಾಡಿದ್ದರು. ಈ ಹಿನ್ನೆಲೆಯಿಂದಾಗಿ CCB ಅಧಿಕಾರಿಗಳು ಈ ಮೂವರ ಮೊಬೈಲ್ ಡಾಟಾ ರಿಟ್ರೀವ್ ಮಾಡಿಸಲು ಲ್ಯಾಬ್​ಗೆ ಕಳಿಸಿದ್ದರು.ಈಗ ಮೊಬೈಲ್​ಗಳಿಂದ ರಿಟ್ರೀವ್ ಆಗಿರುವ ಡಾಟಾದಿಂದ CCB ಅಧಿಕಾರಿಗಳಿಗೆ ಸಾಕಷ್ಟು ಸಾಕ್ಷಿಗಳು ದೊರೆತಿವೆ.

ಈ ಮೂವರು ಯಾವ ಯಾವ ಸಮಯದಲ್ಲಿ ಎಲ್ಲಿ ಹೋಗಿದ್ರು. ಯಾವ ಪಾರ್ಟಿ ಅರೆಂಜ್ ಮಾಡಿದ್ರು. ಹಾಗೂ ಪಾರ್ಟಿಯಲ್ಲಿ ಯಾರು ಯಾರು ಭಾಗಿಯಾಗಿದ್ದರು ಎಂಬುದರ ಸಂಪೂರ್ಣ ಮಾಹಿತಿ ದೊರೆತಿದೆ.ಡ್ರಗ್ಸ್ ಪೆಡ್ಲರ್ಸ್ ಜೊತೆ ನಿರಂತರ ಸಂಪರ್ಕ ಹೊಂದಿದ್ದ ರವಿಶಂಕರ್ ಮೊಬೈಲ್ ಡಾಟಾದಲ್ಲಿ ಎಲ್ಲವು ಬಹಿರಂಗವಾಗಿದೆ. ಪೆಡ್ಲರ್ಸ್ ಜೊತೆ ಮಾತನಾಡಿರುವುದು,ಚಾಟ್ ಮಾಡಿರುವುದು ಬಯಲಿಗೆ ಬಂದಿದೆ.

ರಾಗಿಣಿ ಮೊಬೈಲ್​ನಲ್ಲಿ ಪಾರ್ಟಿ ಫೋಟೋಗಳು ಪತ್ತೆ..
ಇನ್ನೂ ರಾಗಿಣಿ ಮೊಬೈಲ್​ನಲ್ಲಿ ಪಾರ್ಟಿ ಫೋಟೋಗಳು ಹಾಗೂ ಎಲ್ಲೆಲ್ಲಿ ಯಾವ ಯಾವ ದಿನದಲ್ಲಿ ಭೇಟಿ ನೀಡಿದ್ರು ಎಂಬುದು ಪತ್ತೆಯಾಗಿದೆ. ಇದುವರೆಗಿನ ರಾಗಿಣಿ ಹೇಳಿಕೆಗಳನ್ನು ಮುಂದಿಟ್ಟು ಈಗ ಇರುವ ಡಾಟಾವನ್ನು ಮುಂದಿಟ್ಟು ಸಿಸಿಬಿ ಪ್ರಶ್ನೆ ಮಾಡಲಿದೆ. ರಾಹುಲ್ ಮೊಬೈಲ್​ನಲ್ಲಿ ಸಮಾಜದ ಪ್ರಮುಖ ವ್ಯಕ್ತಿಗಳಿಗೆ ಸಂಭಂದಿಸಿದ ಡಾಟಾ ಪತ್ತೆಯಾಗಿದ್ದು, ಇನ್ನೂ ರಾಹುಲ್ ಹಲವಾರು ಜನರನ್ನು ಶ್ರೀಲಂಕಾಕ್ಕೆ ಕಳಿಸುತಿದ್ದ ಎನ್ನಲಾಗುತ್ತಿದೆ. ಸಮಾಜದ ಗಣ್ಯವ್ಯಕ್ತಿಗಳ ಮಾಹಿತಿ ರಾಹುಲ್ ಮೊಬೈಲ್​ನಲ್ಲಿದ್ದು, ಈ ಟೆಕ್ನಿಕಲ್ ಎವಿಡೆನ್ಸ್​ಗಳು ಸಂಪೂರ್ಣ ತನಿಖೆಯ ಸ್ಪೀಡ್ ಹೆಚ್ಚಿಸಲಿವೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us