ಸಿಸಿಎಲ್ (CCL) 2024ರ ಕ್ವಾಲಿಫೈಯರ್ 1 ಮ್ಯಾಚ್ನಲ್ಲಿ ಕಿಚ್ಚ ಸುದೀಪ್ ಅವರ ‘ಕರ್ನಾಟಕ ಬುಲ್ಡೋಜರ್ಸ್’ ತಂಡ ಫಿನಾಲೆ ತಲುಪಿದೆ. ಬೆಂಗಾಲ್ ಟೈಗರ್ಸ್ ತಂಡವನ್ನು 8 ವಿಕೆಟ್ಗಳಲ್ಲಿ ಮಣಿಸಿ ಫಿನಾಲೆಗೆ ಟಿಕೆಟ್ ಪಡೆದಿದೆ. ಮಾರ್ಚ್ 25ರಂದು ಫಿನಾಲೆ ನಡೆಯಲಿದೆ. ಎಲ್ಲರೂ ಸುದೀಪ್ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ. ಫಿನಾಲೆಯಲ್ಲಿ ಯಾವ ರೀತಿಯ ಸೆಣೆಸಾಟ ನಡೆಯಲಿದೆ ಎನ್ನುವ ಕುತೂಹಲ ಮೂಡಿದೆ.
ತಿರುವನಂತಪುರದ ಗ್ರೀನ್ಫೀಲ್ಡ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ್ ಟೈಗರ್ಸ್ ಮಧ್ಯೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ನಮ್ಮ ಕರ್ನಾಟಕದ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಸಿಸಿಎಲ್ನ ಫಾರ್ಮ್ಯಾಟ್ ಬೇರೆ ರೀತಿಯಲ್ಲಿ ಇದೆ. 10 ಓವರ್ಗಳ ನಾಲ್ಕು ಇನ್ನಿಂಗ್ಸ್ ಇರುತ್ತದೆ. ಈ ಪೈಕಿ ಎರಡೂ ತಂಡಗಳು ಮೊದಲು 10 ಓವರ್ ಆಡಬೇಕು. ಎರಡನೇ ಇನ್ನಿಂಗ್ಸ್ನಲ್ಲಿ ಮತ್ತೆ ತಲಾ 10 ಓವರ್ ಆಡಬೇಕು.
ಮೊದಲು ಬ್ಯಾಟ್ ಮಾಡಿದ ಬೆಂಗಾಲ್ ಟೈಗರ್ಸ್ 86ರನ್ಗೆ 3 ವಿಕೆಟ್ ಕಳೆದುಕೊಂಡಿತು. ಈ ಸಣ್ಣ ಮೊತ್ತವನ್ನು ಬೆನ್ನು ಹತ್ತಿದ ಸುದೀಪ್ ಪಡೆ 114ರನ್ಗೆ 4 ವಿಕೆಟ್ ಕಳೆದುಕೊಂಡಿತು. ಈ ಮೂಲಕ 28ರನ್ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ ಬೆಂಗಾಲ್ ಟೈಗರ್ಸ್ ಒಳ್ಳೆಯ ಪ್ರದರ್ಶನ ನೀಡಿತು.
ಎರಡನೇ ಇನ್ನಿಂಗ್ಸ್ ಆಡಿದ ಬೆಂಗಾಲ್ ಟೈಗರ್ಸ್ 127ರನ್ಗೆ 6 ವಿಕೆಟ್ ಕಳೆದುಕೊಂಡಿತು. ಈ ಮೂಲಕ 100 ರನ್ಗಳ ಟಾರ್ಗೆಟ್ನ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆನ್ನು ಹತ್ತಿತು. ಉತ್ತಮ ಆರಂಭ ಕಂಡ ತಂಡ ಇನ್ನೂ ಎರಡು ಓವರ್ ಇರುವಾಗಲೇ ಎರಡು ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿತು. ಈ ಮೂಲಕ ಫಿನಾಲೆ ಕನಸನ್ನು ನನಸಾಗಿಸಿಕೊಂಡಿತು .
ಇದನ್ನೂ ಓದಿ: CCL 2024: ಸಿಸಿಎಲ್ನಲ್ಲಿ ಸತತ ಮೂರನೇ ಅರ್ಧಶತಕ ಸಿಡಿಸಿದ ಡಾರ್ಲಿಂಗ್ ಕೃಷ್ಣ..!
ಈ ಮೊದಲು 2013 ಹಾಗೂ 2014ರಲ್ಲಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಟೀಂ ಸಿಸಿಎಲ್ ಟ್ರೋಫಿ ಗೆದ್ದಿತ್ತು. ಈಗ ಮತ್ತೊಮ್ಮೆ ಗೆಲ್ಲುವ ಕನಸು ಕಾಣುತ್ತಿದೆ. ಫಿನಾಲೆಯಲ್ಲಿ ಯಾವ ತಂಡ ಆಡಲಿದೆ ಎಂಬುದು ಇಂದು ಗೊತ್ತಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:51 am, Sat, 16 March 24