ರಾಜ್ಕುಮಾರ್ ಮಕ್ಕಳ ಪೈಕಿ ಪುನೀತ್ ಹೆಚ್ಚು ಲಕ್ಕಿ; ಅವರೇ ಹೇಳಿದ್ದರು ನೋಡಿ
ಪುನೀತ್ ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ರಾಜ್ಕುಮಾರ್ ಅವರಿಗೆ ಐವರು ಮಕ್ಕಳು. ಈ ಪೈಕಿ ಪುನೀತ್ ಹೆಚ್ಚು ಅದೃಷ್ಟವಂತರು. ಬಾಲ್ಯದಲ್ಲಿ ಇದ್ದಾಗ ಅವರು ತಂದೆಯ ಜೊತೆ ಹೆಚ್ಚು ಸಮಯ ಕಳೆದಿದ್ದರು.
ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ಅವರು ಇಲ್ಲ ಎಂಬ ನೋವು ಎಂದಿಗೂ ಕಡಿಮೆ ಆಗುವಂಥದ್ದಲ್ಲ. ಅವರು ಇಲ್ಲದೇ ಇದ್ದರೂ ಫ್ಯಾನ್ಸ್ ಅದ್ದೂರಿಯಾಗಿ ಪುನೀತ್ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಅವರ ಹೆಸರಲ್ಲಿ ಇಂದು ಸಾಕಷ್ಟು ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ಪುನೀತ್ ರಾಜ್ಕುಮಾರ್ ಜನ್ಮದಿನದಂದು ಅವರ ಹಳೆಯ ಸಂದರ್ಶನಗಳು ವೈರಲ್ ಆಗುತ್ತಿವೆ. ಈ ವೇಳೆ ಅವರು ಹೇಳಿದ ಒಂದು ಮಾತು ಎಲ್ಲರ ಗಮನ ಸೆಳೆದಿತ್ತು. ರಾಜ್ಕುಮಾರ್ ಮಕ್ಕಳ ಪೈಕಿ ಪುನೀತ್ ಹೆಚ್ಚು ಲಕ್ಕಿ ಆಗಿದ್ದರು. ಅದು ಏಕೆ ಎನ್ನುವ ಬಗ್ಗೆ ಈ ಸ್ಟೋರಿಯಲ್ಲಿದೆ ಉತ್ತರ.
ಪುನೀತ್ ರಾಜ್ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಹಲವು ಕಡೆಗಳಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿ ಅವರ ಸಮಾಧಿಗೆ ಕುಟುಂಬ ಪೂಜೆ ಸಲ್ಲಿಸಲಿದೆ. ಪುನೀತ್ ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ರಾಜ್ಕುಮಾರ್ ಅವರಿಗೆ ಐವರು ಮಕ್ಕಳು. ಈ ಪೈಕಿ ಪುನೀತ್ ಹೆಚ್ಚು ಅದೃಷ್ಟವಂತರು. ಬಾಲ್ಯದಲ್ಲಿ ಇದ್ದಾಗ ಅವರು ತಂದೆಯ ಜೊತೆ ಹೆಚ್ಚು ಸಮಯ ಕಳೆದಿದ್ದರು.
ರಾಜ್ಕುಮಾರ್ಗೆ ಐವರು ಮಕ್ಕಳು. ರಾಘವೇಂದ್ರ ರಾಜ್ಕುಮಾರ್, ಶಿವರಾಜ್ಕುಮಾರ್, ಲಕ್ಷ್ಮಿ, ಪೂರ್ಣಿಮಾಗಿಂತ ಪುನೀತ್ ವಯಸ್ಸು ಸಣ್ಣದು. ಕಿರಿಮಗನ ಎಂಬ ಕಾರಣಕ್ಕೆ ರಾಜ್ಕುಮಾರ್ಗೆ ಪುನೀತ್ ಮೇಲೆ ಹೆಚ್ಚು ಪ್ರೀತಿ ಇತ್ತೇ ಎನ್ನುವ ಪ್ರಶ್ನೆ ಮೂಡೋದು ಸಹಜ. ಅದಕ್ಕೆ ಪುನೀತ್ ಅವರು ಈ ಮೊದಲು ಉತ್ತರ ನೀಡಿದ್ದರು. ಹಳೆಯ ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು.
ರಾಜ್ಕುಮಾರ್ ಜೊತೆ ಸುತ್ತಾಡುವ ಅವಕಾಶ ಪುನೀತ್ಗೆ ಹೆಚ್ಚು ಸಿಕ್ಕಿದ್ದು ಏಕೆ ಎನ್ನುವ ಬಗ್ಗೆ ಪುನೀತ್ ಹೇಳಿದ್ದು ಹೀಗೆ. ‘ಶಿವಣ್ಣ ಹಾಗೂ ರಾಘಣ್ಣ ಮದ್ರಾಸ್ನಲ್ಲಿ ಓದಿದ್ದು. ಲಕ್ಷ್ಮಿ ಅಕ್ಕ 1982ರಲ್ಲಿ ಮದುವೆ ಆದರು. ಅವರು ಬ್ಯುಸಿ ಇದ್ದರು. ನಾನು ಕಡೆಯ ಮಗ ಬೇರೆ. ಹೀಗಾಗಿ ನಾನು ಹಾಗೂ ನನ್ನ ಅಕ್ಕ ಪೂರ್ಣಿಮಾ ತಂದೆಯ ಜೊತೆ ಹೆಚ್ಚು ಸುತ್ತಾಡಿದ್ದು. ಶೂಟಿಂಗ್ ಕಾರಣದಿಂದ ಸ್ಕೂಲ್ಗೂ ಹೋಗ್ತಾ ಇರಲಿಲ್ಲ. ಹೀಗಾಗಿ ತಂದೆ-ತಾಯಿ ಜೊತೆ ಹೆಚ್ಚು ಸುತ್ತಾಡಿದ್ದೆ’ ಎಂದು ಪುನೀತ್ ರಾಜ್ಕುಮಾರ್ ಅವರು ಹೇಳಿಕೊಂಡಿದ್ದರು.
ಪುನೀತ್ ರಾಜ್ಕುಮಾರ್ ಜನಿಸಿದ್ದು 1975ರಲ್ಲಿ. ಜನಿಸಿದ ಕೇವಲ ಆರೇ ತಿಂಗಳಿಗೆ ಅವರು ಸಿನಿಮಾದಲ್ಲಿ ಕಾಣಿಸಿಕೊಂಡರು. ‘ಪ್ರೇಮದ ಕಾಣಿಕೆ’ ಸಿನಿಮಾದಲ್ಲಿ ಸಣ್ಣ ಮಗುವಿನ ಪಾತ್ರ ಮಾಡಿದರು. ನಂತರ ಸನಾದಿ ಅಪ್ಪಣ್ಣ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದರು. 1985ರಲ್ಲಿ ರಿಲೀಸ್ ಆದ ‘ಬೆಟ್ಟದ ಹೂವು’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದರು.
‘ನನ್ನ ತಂದೆ ಎಂದಿಗೂ ಬಂದು ನನಗೆ ಆ್ಯಕ್ಟಿಂಗ್ ಹೇಳಿಕೊಟ್ಟಿಲ್ಲ. ಅವರು ಹೀಗೆ ಮಾಡಿ, ಹಾಗೆ ಮಾಡಿ ಎಂದು ಫೋರ್ಸ್ ಮಾಡಿಲ್ಲ. ಭಕ್ತ ಪ್ರಹ್ಲಾದ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ನರಸಿಂಹ ಬಂದು ನಮ್ಮ ಅಪ್ಪಾಜಿಯವರ ಎದೆ ಬಗೆಯುವ ದೃಶ್ಯ ನೋಡಿ ನನಗೆ ಅಳು ಬಂದಿತ್ತು’ ಎಂದು ಈ ಮೊದಲು ಹೇಳಿಕೊಂಡಿದ್ದರು.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಬರ್ತ್ಡೇಗೆ ರಿಲೀಸ್ ಆಗಲಿದೆ ಅಪ್ಪು ಅಭಿಮಾನಿಯ ಸಿನಿಮಾ ಟ್ರೇಲರ್
ರಾಜ್ಕುಮಾರ್ ಅವರಿಗೆ ತಿಂಡಿ ಬಗ್ಗೆ ವಿಶೇಷ ಪ್ರೀತಿ ಇತ್ತು. ಅವರು ಹೊರಗೆ ಹೋದಾಗ ನಾನಾ ರೀತಿಯ ಆಹಾರಗಳನ್ನು ಪ್ರಯತ್ನಿಸುತ್ತಿದ್ದರು. ಮನೆಗೆ ಬಂದಾಗ ಅವರಿಗೆ ಹಲವು ರೀತಿಯ ಅಡುಗೆ ಮಾಡುತ್ತಿದ್ದರು. ಈ ಹವ್ಯಾಸ ಪುನೀತ್ ರಾಜ್ಕುಮಾರ್ ಅವರಿಗೂ ಬಂದಿತ್ತು. ಅವರಿಗೂ ಆಹಾರಗಳು ಇಷ್ಟ ಆಗಿತ್ತು. ಅವರು ಹೋದಲ್ಲೆಲ್ಲ ಆ ಊರಿನ ಆಹಾರಗಳನ್ನು ಟೇಸ್ಟ್ ಮಾಡುತ್ತಿದ್ದರು. ಪುನೀತ್ ಜನ್ಮದಿನದ ಹಿನ್ನೆಲೆಯಲ್ಲಿ ‘ಜಾಕಿ’ ರಿ-ರಿಲೀಸ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ