Chaithra Kotoor: ಮದುವೆಯಾದ ಬೆನ್ನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್

ಮಾರ್ಚ್ 28 ರಂದು ಮಂಡ್ಯ ಮೂಲದ ನಾಗಾರ್ಜುನ್ ಎಂಬುವರೊಂದಿಗೆ ಚೈತ್ರಾ ಕೋಟೂರ್ ಮದುವೆಯಾಗಿದ್ದರು. ಆದರೆ ಮದುವೆಯಾದ ದಿನವೆ ವಿವಾದಕ್ಕೀಡಾಗಿ ಪೊಲೀಸ್ ಠಾಣೆ ಮಟ್ಟಿಲೇರಿತ್ತು.

Chaithra Kotoor: ಮದುವೆಯಾದ ಬೆನ್ನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್
ಚೈತ್ರಾ ಕೋಟೂರ್
Follow us
guruganesh bhat
|

Updated on:Apr 08, 2021 | 1:56 PM

ಕೋಲಾರ: ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಕೋಲಾರ ನಗರದ ಕುರುಬರ ಪೇಟೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮದುವೆ ವಿಚಾರವಾಗಿ ವಿವಾದದ ಹಿನ್ನೆಲೆ ‌ಮನನೊಂದು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಾರ್ಚ್ 28 ರಂದು ಮಂಡ್ಯ ಮೂಲದ ನಾಗಾರ್ಜುನ್ ಎಂಬುವರೊಂದಿಗೆ ಚೈತ್ರಾ ಕೋಟೂರ್ ಮದುವೆಯಾಗಿದ್ದರು. ಆದರೆ ಮದುವೆಯಾದ ದಿನವೆ ವಿವಾದಕ್ಕೀಡಾಗಿ ಪೊಲೀಸ್ ಠಾಣೆ ಮಟ್ಟಿಲೇರಿತ್ತು. ಇದೇ ಕಾರಣಕ್ಕೆ ನಟಿ, ಕವಯಿತ್ರಿ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬಿಗ್​ ಬಾಸ್ ಮಾಜಿ​ ಸ್ಪರ್ಧಿ ಚೈತ್ರಾ ಕೋಟೂರ್​ ಅವರು ಕನ್​ಸ್ಟ್ರಕ್ಷನ್ ಮತ್ತು ರಿಯಲ್​ ಎಸ್ಟೇಟ್​​ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ನಾಗಾರ್ಜುನ್​ ಎಂಬುವವರ ಜೊತೆ ಮಾ.28ರ ಬೆಳಗ್ಗೆ ಸಿಂಪಲ್ ಆಗಿ ಮದುವೆ ಆಗಿದ್ದರು. ಆದರೆ ವಿವಾಹವಾಗಿ ಕೆಲವೇ ಗಂಟೆಗಳು ಕಳೆಯುವುದರೊಳಗೆ ನಾಗಾರ್ಜುನ್​ ಮನೆಯವರು ತಕರಾರು ತೆಗೆದಿದ್ದರು.  ಅಷ್ಟಕ್ಕೂ ಹೀಗೆ ಆಗಲು ಕಾರಣ ಏನು ಎಂದು ಟಿವಿ9 ಡಿಜಿಟಲ್​ಗೆ ಚೈತ್ರಾ ಕೋಟೂರ್​ ಪ್ರತಿಕ್ರಿಯೆ ನೀಡಿದ್ದರು.

ಚೈತ್ರಾ ಹೇಳಿಕೊಂಡಿರುವಂತೆ, ಅವರಿಬ್ಬರ ಪ್ರೀತಿಗೆ ನಾಗಾರ್ಜುನ್​ ಮನೆಯವರ ಒಪ್ಪಿಗೆ ಇರಲಿಲ್ಲ. ಆದರೆ ಸಂಘಟನೆಯೊಂದರ ಬೆಂಬಲದೊಂದಿಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಇರುವ ಗಣಪತಿ ದೇವಸ್ಥಾನದಲ್ಲಿ ಮದುವೆ ಆಗಲು ನಾಗಾರ್ಜುನ್​ ಒಪ್ಪಿಕೊಂಡರು. ಆದರೆ ಮದುವೆ ನಡೆದ ಬಳಿಕ ನಾಗಾರ್ಜುನ್​ ಮನೆಯವರು ಬಂದು ಗಲಾಟೆ ಮಾಡಿದ್ದಾರೆ. ಬೀದಿಯಲ್ಲಿ ಜಗಳ ಮಾಡುವುದು ಬೇಡ, ಮನೆಯಲ್ಲಿ ಕುಳಿತು ಮಾತಾಡೋಣ ಎಂದು ಕೋಲಾರದಲ್ಲಿ ಇರುವ ತಮ್ಮ ನಿವಾಸಕ್ಕೆ ಚೈತ್ರಾ ತೆರಳಿದರು. ಆದರೆ ಇಲ್ಲಿಯೂ ನಾಗಾರ್ಜುನ್​ ಕುಟುಂಬದವರು ಜಗಳ ಮಾಡಿದರು. ನಂತರ ಈ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು.

Chaithra Kotoor marriage

ಚೈತ್ರಾ ಕೋಟೂರ್​ – ನಾಗಾರ್ಜುನ್​

‘ನಾಗಾರ್ಜುನ್​ ಮನೆಯವರು ಮೊದಲಿನಿಂದ ವಿರೋಧಿಸುತ್ತ ಇದ್ದರು. ಇವನು ಒಮ್ಮೆ ಮದುವೆ ಆಗುತ್ತೇನೆ ಎನ್ನುತ್ತಿದ್ದ. ಇನ್ನೊಮ್ಮೆ ಆಗಲ್ಲ ಎನ್ನುತ್ತಿದ್ದ. ಯಾಕೆ ಹೀಗೆ ಮಾಡುತ್ತಿದ್ದಾನೆ? ಇಷ್ಟು ದಿನ ಜೊತೆಗಿದ್ದು ಈಗ ಮೋಸ ಮಾಡುತ್ತಾನಾ ಎಂದು ನನಗೆ ತಲೆ ಕೆಡುತ್ತಿತ್ತು. ನಿನ್ನೆ ಮದುವೆ ಆದೆವು. ಆದರೆ ಈಗ ಮನಸ್ಸು ಬದಲಾಯಿಸಿದ್ದಾನೆ’ ಎಂದು ಚೈತ್ರಾ ಹೇಳಿದ್ದರು.

‘ನಾಗಾರ್ಜುನ್​ ಮನೆಯವರು ಅವನ ಮೈಂಡ್​ ವಾಶ್​ ಮಾಡಿದ್ದಾರೆ. ನನ್ನನ್ನು ಸಿನಿಮಾದವಳು ಎಂಬ ಕಾರಣಕ್ಕೆ ನಿಂದಿಸಿದ್ದಾರೆ. ಮಂಡ್ಯಕ್ಕೆ ಬಂದರೆ ಹುಷಾರ್​ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ. ನಮ್ಮ ಮನೆಯವರ ಮೇಲೆ ಹಲ್ಲೆ ಮಾಡಿದ್ದಾರೆ. ಇದರ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಲು ನಾನು ತೆರಳಿದ್ದೆ. ನಂತರ ಮಾತುಕತೆಯಲ್ಲಿ ಬಗೆಹರಿಸಿಕೊಳ್ಳೋಣ ಎಂದು ಮನವಿ ಮಾಡಿಕೊಂಡರು ಎಂಬ ಕಾರಣಕ್ಕೆ ದೂರು ನೀಡಲಿಲ್ಲ. ಆದರೆ ಈಗ ಮತ್ತೆ ವಿವಾದ ಮಾಡುತ್ತಿದ್ದಾರೆ’ ಎಂದು ಚೈತ್ರಾ ಪ್ರತಿಕ್ರಿಯೆ ನೀಡಿದ್ದರು. ನಾಗಾರ್ಜುನ್​ ಎರಡು ದಿನ ಸಮಯ ತೆಗೆದುಕೊಂಡಿದ್ದಾರೆ. ತವರು ಮನೆಯಲ್ಲಿ ಚೈತ್ರಾ ಇದ್ದಾರೆ. ಎರಡು ದಿನಗಳ ಬಳಿಕ ಮತ್ತೆ ಮಾತುಕತೆ ನಡೆಸುವುದಾಗಿ ಚೈತ್ರಾ ತಿಳಿಸಿದ್ದರು.

Chaithra Kotoor image 2

ಚೈತ್ರಾ- ನಾಗಾರ್ಜುನ್​

ರಂಗಭೂಮಿ ಕಲಾವಿದೆಯಾಗಿ, ಸಿನಿಮಾ ನಟಿಯಾಗಿ, ಬಿಗ್​ ಬಾಸ್​ ಸ್ಪರ್ಧಿಯಾಗಿ, ಜಾಹೀರಾತು ನಿರ್ದೇಶಕಿಯಾಗಿ ಚೈತ್ರಾ ಗುರುತಿಸಿಕೊಂಡಿದ್ದಾರೆ. ‘ಸೂಜಿದಾರ’ ಸಿನಿಮಾದಲ್ಲಿ ಅವರೊಂದು ಗಮನಾರ್ಹ ಪಾತ್ರ ಮಾಡಿದ್ದರು. ಬಿಗ್​ ಬಾಸ್​ ಕನ್ನಡ ಸೀಸನ್​ 7ರಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ಲಗ್ನ ಪತ್ರಿಕೆ ಸೀರಿಯಲ್​ನಲ್ಲಿ ಅವರೊಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

ಇದನ್ನೂ ಓದಿ: ಚೈತ್ರಾ ಕೋಟೂರ್​-ನಾಗಾರ್ಜುನ್​ ಮದುವೆ ವಿವಾದ! ಏನು ಹೇಳುತ್ತಿವೆ ಈ ಫೋಟೋಗಳು?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ ಬಾಸ್​ ಚೈತ್ರಾ ಕೋಟೂರ್​! ಉದ್ಯಮಿ ಜೊತೆ ಸಿಂಪಲ್​ ವಿವಾಹ

(Chaithra Kotoor Bigg Boss Kannada 7 contestant attempts suicide after marriage in Kolar)

Published On - 1:43 pm, Thu, 8 April 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್