KGF-2 ಶೂಟಿಂಗ್ ಪೂರ್ಣವಾದರೂ ಯಶ್​ ಗಡ್ಡಕ್ಕಿಲ್ಲ ಕತ್ತರಿ; ರಾಕಿಂಗ್​ ಸ್ಟಾರ್​ ನಿರ್ಧಾರದ ಹಿಂದಿದೆ ಬಹುದೊಡ್ಡ ಕಾರಣ

ಕೆಜಿಎಫ್​-1 ಶೂಟಿಂಗ್​ ಪೂರ್ಣಗೊಂಡ ನಂತರ ಯಶ್​ ಗಡ್ಡಕ್ಕೆ ರಾಧಿಕಾ ಪಂಡಿತ್​ ಕತ್ತರಿ ಹಾಕಿದ್ದರು. ಇದನ್ನು ವಿಡಿಯೋ ಮಾಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು.

KGF-2 ಶೂಟಿಂಗ್ ಪೂರ್ಣವಾದರೂ ಯಶ್​ ಗಡ್ಡಕ್ಕಿಲ್ಲ ಕತ್ತರಿ; ರಾಕಿಂಗ್​ ಸ್ಟಾರ್​ ನಿರ್ಧಾರದ ಹಿಂದಿದೆ ಬಹುದೊಡ್ಡ ಕಾರಣ
ಯಶ್​
Follow us
ರಾಜೇಶ್ ದುಗ್ಗುಮನೆ
|

Updated on: Apr 07, 2021 | 6:49 PM

ಕೆಜಿಎಫ್ ಚಾಪ್ಟರ್​ 2 ಚಿತ್ರದ ಶೂಟಿಂಗ್​ ಪೂರ್ಣಗೊಂಡು ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಆರಂಭವಾಗಿವೆ. ಜುಲೈ 16ರಂದು ಸಿನಿಮಾ ತೆರೆಗೆ ಬರಲಿದ್ದು, ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಚ್ಚರಿ ಎಂದರೆ, ಕೆಜಿಎಫ್​ ಚಾಪ್ಟರ್​ 2 ಶೂಟಿಂಗ್​ ಪೂರ್ಣಗೊಂಡಿದ್ದರೂ ಯಶ್​ ಗಡ್ಡಕ್ಕೆ ಕತ್ತರಿ ಹಾಕಿಲ್ಲ. ಇದರ ಹಿಂದೆ ಬಹುದೊಡ್ಡ ಕಾರಣವಿದೆಯಂತೆ. ಕೆಜಿಎಫ್​-1 ಶೂಟಿಂಗ್​ ಪೂರ್ಣಗೊಂಡ ನಂತರ ಯಶ್​ ಗಡ್ಡಕ್ಕೆ ರಾಧಿಕಾ ಪಂಡಿತ್​ ಕತ್ತರಿ ಹಾಕಿದ್ದರು. ಇದನ್ನು ವಿಡಿಯೋ ಮಾಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ಆದರೆ, ಕೆಜಿಎಫ್​-2 ಚಿತ್ರೀಕರಣ ಪೂರ್ಣಗೊಂಡು ಅನೇಕ ತಿಂಗಳು ಕಳೆದರೂ ಯಶ್​ ಗಡ್ಡಕ್ಕೆ ಕತ್ತರಿ ಹಾಕಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೂ ಕಾಡಿತ್ತು.

ಪ್ರಶಾಂತ್​ ನೀಲ್​ ನಿರ್ದೇಶಿಸುವ ಸಿನಿಮಾಗಳು ಅಚ್ಚುಕಟ್ಟಾಗಿ ಮೂಡಿ ಬರುತ್ತವೆ. ಅವರು ಪ್ರತಿ ದೃಶ್ಯ, ಪ್ರತಿ ಡೈಲಾಗ್​ಗಳನ್ನು ಅಳೆದು-ತೂಗಿ ಪೊಣಿಸಿರುತ್ತಾರೆ. ಅವರು ಸಿನಿಮಾ ವಿಚಾರದಲ್ಲಿ ರಾಜಿ ಆದವರೇ ಅಲ್ಲ. ಯಾವುದಾದರೂ ದೃಶ್ಯ ಹೀಗೆ ಮೂಡಿ ಬರಬೇಕು ಎಂದರೆ, ಹಾಗೆಯೇ ಬರಬೇಕು. ಇಲ್ಲವಾದರೆ ಅವರಿಗೆ ಸಮಾಧಾನ ಆಗುವುದೇ ಇಲ್ಲ. ಯಶ್​ ಗಡ್ಡಕ್ಕೆ ಕತ್ತರಿ ಬೀಳದೆ ಇರಲು ಇದುವೇ ಕಾರಣ.

ಈಗಾಗಲೇ ಕೆಜಿಎಫ್​-2 ಎಡಿಟಿಂಗ್​ ಕಾರ್ಯಗಳು ಭರದಿಂದ ಸಾಗಿವೆ. ಸಿನಿಮಾ ಶೂಟಿಂಗ್​ ವೇಳೆ ಪ್ರತಿ ಸೀನ್​ ಪರ್ಫೆಕ್ಟ್​ ಬಂದ ನಂತರವೇ ಪ್ರಶಾಂತ್​ ನೀಲ್ ಶಾಟ್​ ಒಕೆ ಮಾಡುತ್ತಾರೆ. ಆದರೆ, ಕೆಲವೊಮ್ಮೆ ಕಣ್ತಪ್ಪಿನಿಂದ ದೃಶ್ಯಗಳು ಚೆನ್ನಾಗಿ ಮೂಡಿ ಬಂದಿರುವುದಿಲ್ಲ. ಇಂಥ ದೃಶ್ಯಗಳು ಎಡಿಟಿಂಗ್​ನಲ್ಲಿ ಕಂಡರೆ ಅದನ್ನು ರಿ-ಶೂಟ್​ ಮಾಡುವ ಆಲೋಚನೆ ಪ್ರಶಾಂತ್​ ನೀಲ್​ ಅವರದ್ದು. ಈ ಕಾರಣಕ್ಕೆ, ಯಶ್​ಗೆ ಗಡ್ಡ ತೆಗೆಯಬೇಡಿ ಎನ್ನುವ ಸೂಚನೆ ನೀಡಿದ್ದಾರಂತೆ ಪ್ರಶಾಂತ್​ ನೀಲ್​.

ಕೆಜಿಎಫ್​-2 ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸಂಜಯ್​ ದತ್​ ಸಿನಿಮಾದಲ್ಲಿ ಪ್ರಮುಖ ಖಳನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರವೀನಾ ಟಂಡನ್ ಕೂಡ ಕೆಜಿಎಫ್​-2ನಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಜುಲೈ 16ರಂದು ಸಿನಿಮಾ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ಪ್ರಶಾಂತ್​ ನೀಲ್​ ಜೊತೆ ದಳಪತಿ ವಿಜಯ್​ ಹೊಸ ಸಿನಿಮಾ? ಕೆಜಿಎಫ್​ ಡೈರೆಕ್ಟರ್​ ಬಗ್ಗೆ ಬಿಗ್​ ನ್ಯೂಸ್​

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್