ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಧೂಳೆಬ್ಬಿಸಿದೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವ ಸಿನಿಮಾ ಮತ್ತಷ್ಟು ಯಶಸ್ಸು ಕಾಣಲು ಮುನ್ನುಗ್ಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ನಡೆಯುತ್ತಿದೆ. ನಟ ದರ್ಶನ್, ನಟಿ ಆಶಾ ಭಟ್, ವಿನೋದ್ ಪ್ರಭಾಕರ್, ನಿರ್ಮಾಪಕ ಉಮಾಪತಿ ಗೌಡ ಮತ್ತಿತರರು ಚಿತ್ರದ ಸಕ್ಸಸ್ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಪೈರೆಸಿ ಬಗ್ಗೆಯೂ ದರ್ಶನ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಯಜಮಾನ ಮೊದಲನೇ ದಿನಾನೇ ಪೈರೆಸಿ ಆಯ್ತು. ಯಾರೇನು ಮಾತಾಡಿದ್ರು? 140 ದಿನಗಳಷ್ಟು ಕಾಲ ಸಿನಿಮಾ ಓಡ್ತು. 49 ದಿನಕ್ಕೆನೇ ಪ್ರೈಮ್ನಲ್ಲಿ ಸಿನಿಮಾ ಬಂತು. ಆದ್ರೂ ನೂರಕ್ಕೂ ಹೆಚ್ಚು ದಿನ ಸಿನಿಮಾ ಓಡಿದೆ. ಸಿನಿಮಾ ನಿಜವಾಗ್ಲೂ ಚೆನ್ನಾಗಿದ್ರೆ ನಾವೇ ತಂದು ಮೊಬೈಲ್ಗೆ ಹಾಕಿ ಕೊಟ್ರೂ ಜನ ಬೇಡ ಅಂತಾರೆ. ಸಿನಿಮಾನ ಥಿಯೇಟರ್ನಲ್ಲೇ ನೋಡ್ತಾರೆ. ಕುರುಕ್ಷೇತ್ರ ಪೈರೆಸಿ ಆಗಿಲ್ವಾ? ಆಗಿದೆ. ಆ ಚಿತ್ರವೂ ಯಶಸ್ವಿಯಾಗಿದೆ ಎಂದೇ ಮಾತನಾಡಿದರು.
ನಮ್ಮ ಸಿನಿಮಾದ ಲಿಂಕ್ ಒಬ್ಬ ಶೇರ್ ಮಾಡಿದ್ದ, ಅವನಿಗೆ ಬುದ್ಧಿ ಹೇಳಿ, ನಮ್ಮ ನಿರ್ಮಾಪಕರೇ ಬೇಲ್ ಕೊಟ್ಟು ಕಳಿಸಿದ್ರು. ಆದ್ರೆ ಹಿಂದೆ ನಮ್ಮ ಹುಡುಗನೊಬ್ಬನ್ನ ಜೈಲಿಗೇ ಕಳಿಸಿದ್ರು ಎಂದು ಬೇಸರ ವ್ಯಕ್ತಪಡಿಸಿದರು. ಸಿನಿಮಾದಲ್ಲಿ ಧಮ್ ಇದ್ದಾಗ ಏನೂ ಮಾಡೊಕಾಗಲ್ಲ. ಸಿನಿಮಾ ಗೆದ್ದೇ ಗೆಲ್ಲುತ್ತೆ ಎಂದು ಹೇಳೀದರು. ನಾನು ಯಾವತ್ತೂ ನನ್ನ ಅಭಿಮಾನಿಗಳನ್ನು ಬಿಟ್ಟುಕೊಡಲ್ಲ. ನಾನು ಅನ್ನ ತಿನ್ನುತ್ತಿರೋದೇ ಅವರಿಂದ ಎಂದು ತಿಳಿಸಿದರು.
ನಾವು ಸಕ್ಸಸ್ ಮೀಟ್ ಮಾಡಿರೋ ಮುಖ್ಯ ಉದ್ದೇಶವೇ ಕನ್ನಡ ಚಿತ್ರರಂಗವನ್ನು ಬೆಳೆಸೋಣ ಎನ್ನುವುದಕ್ಕೆ ಎಂದು ಹೇಳಿದರು. ಈ ಸಿನಿಮಾ ನನ್ನದೊಬ್ಬನದ್ದೇ ಅಲ್ಲ. ಇಲ್ಲಿ ಇಡೀ ಸಿನಿಮಾ ತಂಡದ ಪರಿಶ್ರಮ ಇದೆ. ಎಲ್ಲರೂ ಬಹಳಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನಿರ್ಮಾಪಕ ಉಮಾಪತಿ ಗೌಡ, ನಿರ್ದೇಶಕರ ತರುಣ್ ಸುಧೀರ್, ಹಾಸ್ಯ ನಟ ಶಿವರಾಜ್ ಕೆ.ಆರ್. ಪೇಟೆ, ಕಲಾ ನಿರ್ದೇಶಕ ಮೋಹನ್ ಬಿ. ಕೆರೆ, ಸಂಗೀತ ನಿರ್ದೇಶಕ ಹರಿಕೃಷ್ಣಅ ವರಿಗೆ ಕೃತಜ್ಞತೆ ಸಲ್ಲಿಸಿದರು.
Published On - 10:26 pm, Tue, 16 March 21