ನಟ ದರ್ಶನ್ ಹೇಳಿದ್ದನ್ನು ಅಭಿಮಾನಿಗಳು ಚಾಚೂತಪ್ಪದೆ ಪಾಲಿಸುತ್ತಾರೆ. ಈ ಮೊದಲು ಕರ್ನಾಟಕದಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ‘ನನ್ನ ಬರ್ತ್ಡೇ ಆಚರಣೆ ಬೇಡ. ಬದಲಿಗೆ ದಿನಸಿ ತಂದುಕೊಡಿ. ಅದನ್ನು ಪ್ರವಾಹ ಪೀಡಿತ ಪ್ರದೇಶಕ್ಕೆ ತಲುಪಿಸುತ್ತೇವೆ’ ಎಂದು ದರ್ಶನ್ ಹೇಳಿದ್ದರು. ಇದನ್ನು ಅಭಿಮಾನಿಗಳು ಮಾಡಿದ್ದರು. ಈಗ ಕೊವಿಡ್ ಸಂದರ್ಭದಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವಂತೆ ದರ್ಶನ್ ಮನವಿ ಮಾಡಿದ್ದು, ಅವರ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೊವಿಡ್ನಿಂದ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ, ಪ್ರವಾಸಿ ಸ್ಥಳಗಳು, ಝೂಗಳು ಕ್ಲೋಸ್ ಆಗಿವೆ. ಹೀಗಾಗಿ ಝೂಗಳಿಗೆ ಯಾವುದೇ ಆದಾಯ ಬರುತ್ತಿಲ್ಲ. ಇದರಿಂದ ಅಲ್ಲಿರುವ ಪ್ರಾಣಿಗಳ ನಿರ್ವಹಣೆ ಕಷ್ಟವಾಗುತ್ತಿದೆ. ಇದು ದರ್ಶನ್ ಗಮನಕ್ಕೆ ಬಂದಿದೆ. ಕರ್ನಾಟಕದಲ್ಲಿ 9 ಝೂಗಳಿವೆ. ಎಲ್ಲಾ ಪ್ರಾಣಿ ಸಂಗ್ರಹಾಲಯದ ಪರಿಸ್ಥಿತಿಯೂ ಒಂದೇ ರೀತಿ ಇದೆ. ಹಾಗಾಗಿ ನಿಮ್ಮ ಕೈಲಾದ ಪ್ರಾಣಿಗಳನ್ನ ದತ್ತು ಪಡೆಯಿರಿ ಎಂದು ದರ್ಶನ್ ಮನವಿ ಮಾಡಿದ್ದರು. ಇದಕ್ಕೆ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಬಂದಿದೆ.
ದರ್ಶನ್ ಕರೆ ನೀಡಿದ ಒಂದೇ ದಿನದಲ್ಲಿ ಸಾಕಷ್ಟು ಜನರು ಮುಂದೆ ಬಂದು ಝೂನ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ. ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ದರ್ಶನ್ ಹೆಸರಿನ ಸಿಂಹವನ್ನು ನಿರ್ಮಾಪಕರಾದ ಶೈಲಜಾ ನಾಗ್ ದತ್ತು ಪಡೆದಿದ್ದಾರೆ. ಇದಕ್ಕೆ ದರ್ಶನ್ ಧನ್ಯವಾದ ಅರ್ಪಿಸಿದ್ದಾರೆ.
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ” ದರ್ಶನ್ ” ಎಂಬ ಹೆಸರಿನ ಸಿಂಹವನ್ನು ದತ್ತು ಪಡೆದ ನಿರ್ಮಾಪಕರಾದ ಶೈಲಜಾ ನಾಗ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು @shylajanag pic.twitter.com/BeqYFcfdbo
— Darshan Thoogudeepa (@dasadarshan) June 6, 2021
ಕೆಲವರು ಲವ್ ಬರ್ಡ್ ದತ್ತು ಪಡೆದರೆ, ಇನ್ನೂ ಕೆಲವರು ಕಾಳಿಂಗ ಸರ್ಪ ತೆಗೆದುಕೊಂಡಿದ್ದಾರೆ. ಇವರೆಲ್ಲರಿಗೂ ಧನ್ಯವಾದ ಅರ್ಪಿಸುವ ಕೆಲಸವನ್ನು ದರ್ಶನ್ ಮಾಡಿದ್ದಾರೆ.
ಪ್ರಾಣಿಗಳ ಮೇಲಿನ ನಿಮ್ಮ ಪ್ರೀತಿಗೆ ?ಹೃದಯಪೂರ್ವಕ ಧನ್ಯವಾದಗಳು Naveen Raj
– ನಿಮ್ಮ ದಾಸ ದರ್ಶನ್ pic.twitter.com/tbYo6Py2Qt— Darshan Thoogudeepa (@dasadarshan) June 6, 2021
ಇದನ್ನೂ ಓದಿ: Darshan: ಪ್ರಾಣಿಗಳನ್ನು ದತ್ತು ಪಡೆಯೋದು ಹೇಗೆ? ದರ್ಶನ್ ವಿಶೇಷ ಮನವಿಯಲ್ಲಿದೆ ಸಂಪೂರ್ಣ ಮಾಹಿತಿ
Challenging Star Darshan Fans : ದರ್ಶನ್ ಕರೆಯನ್ನ ಚಾಲೆಂಜಿಂಗ್ ಆಗಿ ತಗೊಂಡ ಡಿ ಬಾಸ್ ಫ್ಯಾನ್ಸ್