ಮೈಸೂರಿನಲ್ಲಿರೋ ಚಂದನ್ ಶೆಟ್ಟಿ ಮನೆ ಹೇಗಿದೆ? ಇಲ್ಲಿದೆ ಹೋಮ್​ ಟೂರ್

ಬೆಂಗಳೂರಿನ ಹೊರವಲಯದಲ್ಲಿ ಈ ಮನೆ ಇದ್ದು ಬಿಗ್ ಬಾಸ್ ಮನೆಯ ರೀತಿಯೇ ದೊಡ್ಡ ಕಾಂಪೌಂಡ್ ಹಾಕಿಸಲಾಗಿದೆ. ಎಂಟ್ರಿಯಲ್ಲಿ ಬಿಗ್ ಬಾಸ್ ಮನೆಯ ರೀತಿಯಲ್ಲೇ ಸಣ್ಣದಾದ ಡೋರ್ ಮಾಡಿಸಿದ್ದಾರೆ. ಮನೆ ಸಾಕಷ್ಟು ಭವ್ಯವಾಗಿದೆ.

ಮೈಸೂರಿನಲ್ಲಿರೋ ಚಂದನ್ ಶೆಟ್ಟಿ ಮನೆ ಹೇಗಿದೆ? ಇಲ್ಲಿದೆ ಹೋಮ್​ ಟೂರ್
ಚಂದನ್

Updated on: Oct 08, 2024 | 7:01 AM

ಚಂದನ್ ಶೆಟ್ಟಿ ಅವರು ಇತ್ತೀಚೆಗೆ ಸಾಕಷ್ಟು ಬೇಸರಗೊಳ್ಳುವಂತ ಘಟನೆ ಒಂದು ನಡೆದಿತ್ತು. ಅವರು ಪತ್ನಿ ನಿವೇದಿತಾಗೆ ವಿಚ್ಛೇದನ ನೀಡಿದರು. ಈ ಬೆಳವಣಿಗೆ ಶಾಕಿಂಗ್ ಎನಿಸಿತ್ತು. ಇದಾದ ಬಳಿಕ ಅವರು ಸೈಲೆಂಟ್ ಆಗಿಲ್ಲ. ಸಿನಿಮಾ ಪ್ರಮೋಷನ್​ಗಳಲ್ಲಿ ಭಾಗಿ ಆಗುತ್ತಿದ್ದಾರೆ. ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರ ಕನಸಿನ ಮನೆಯ ಅನಾವರಣ ಆಗಿದೆ. ನಿರಂಜನ್ ದೇಶ್​ಪಾಂಡೆ ಹಾಗೂ ಕಿರಿಕ್ ಕೀರ್ತಿ ಅವರು ಈ ಮನೆಯ ಹೋಂ ಟೂರ್ ಮಾಡಿಸಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ ‘ಮಿಸ್ಟರ್​ ನಿರಿಕ್’ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಹೊರವಲಯದಲ್ಲಿ ಈ ಮನೆ ಇದ್ದು ಬಿಗ್ ಬಾಸ್ ಮನೆಯ ರೀತಿಯೇ ದೊಡ್ಡ ಕಾಂಪೌಂಡ್ ಹಾಕಿಸಲಾಗಿದೆ. ಎಂಟ್ರಿಯಲ್ಲಿ ಬಿಗ್ ಬಾಸ್ ಮನೆಯ ರೀತಿಯಲ್ಲೇ ಸಣ್ಣದಾದ ಡೋರ್ ಮಾಡಿಸಿದ್ದಾರೆ. ಮನೆ ಸಾಕಷ್ಟು ಭವ್ಯವಾಗಿದೆ. ಆರಂಭದಲ್ಲಿ ಕಾರ್ ಪಾರ್ಕಿಂಗ್​ಗೆ ದೊಡ್ಡದಾದ ಜಾಗ ಇದೆ. ವಿಶೇಷ ಎಂದರೆ ಮ್ಯಾಟ್ ಮೇಲೆ ಕನ್ನಡದಲ್ಲೇ ಸುಸ್ವಾಗತ ಎಂದು ಬರೆಯಲಾಗಿದೆ.

ಸಣ್ಣದಾದ ಹಾಲ್ ಇದೆ. ಅಡುಗೆ ಮನೆ ಕಾಣಬಾರದು ಎಂಬ ಕಾರಣಕ್ಕೆ ಸಣ್ಣದಾದ ಪಾರ್ಟೀಷಿಯನ್ ಮಾಡಲಾಗಿದೆ. ಅಡುಗೆ ಮನೆ ಕೂಡ ಸಖತ್ ಆಗಿದೆ. ಬೆಡ್​ರೂಂ ಸಾಕಷ್ಟು ವಿಶಾಲವಾಗಿದೆ. ಬೆಡ್​ರೂಂ ಹೊರಗೆ ಬಾಲ್ಕನಿ ಇದೆ. ಸಣ್ಣದಾದ ಪೂಲ್ ಕೂಡ ಇದೆ. ಪೂಲ್ ಪಾರ್ಟಿಗೆ ಇದನ್ನು ಮಾಡಲಾಗಿದೆ ಎಂದು ಚಂದನ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಈ ಕಟ್ಟಡ ಇದ್ದು ಕಮರ್ಷಿಯಲೈಸ್ ಮಾಡುವ ಆಲೋಚನೆಯೂ ಅವರಿಗೆ ಇದೆ. ಇಡೀ ಮನೆಗೆ ಅವರೇ ಕಲ್ಪನೆ ನೀಡಿದ್ದಾರೆ.

YouTube video player

ಇದನ್ನೂ ಓದಿ: ಅಶ್ಲೀಲ ಸಂದೇಶ ಕಳಿಸುವವರಿಗೆ ದರ್ಶನ್ ಪ್ರಕರಣ ಎಚ್ಚರಿಕೆ ಘಂಟೆ: ಚಂದನ್ ಶೆಟ್ಟಿ 

ಚಂದನ್ ಶೆಟ್ಟಿ ಅವರು ಸಂಗೀತ ಸಂಯೋಜನೆಯ ಜೊತೆಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ಕೆಲವು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಅವರು ಈ ಮೊದಲು ಬಿಗ್ ಬಾಸ್​ಗೆ ಕಾಲಿಟ್ಟಿದ್ದರು. ಅಲ್ಲಿ ಗೆದ್ದು ಜನಪ್ರಿಯತೆ ಪಡೆದರು. ನಿವೇದಿತಾ ಗೌಡ ಸಿಕ್ಕಿದ್ದು ಕೂಡ ಅಲ್ಲಿಯೇ. ಕೆಲವು ವರ್ಷ ಸಂಸಾರ ನಡೆಸಿದ್ದ ಇವರು ಆ ಬಳಿಕ ದೂರ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us