ಸಂಗೀತ ನಿರ್ದೇಶಕ/ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಕಾರಣಾಂತರಗಳಿಂದ ಅವರ ವಿಚ್ಛೇದನ ಆಯ್ತು. ಈಗ ಒಂದು ಫೋಟೋ ವೈರಲ್ ಆಗುತ್ತಿದೆ. ನಿವೇದಿತಾ ಗೌಡ ಎದುರು ಚಂದನ್ ಶೆಟ್ಟಿ ಅವರು ಗುಲಾಬಿ ಹೂವು ಹಿಡಿದು ಪ್ರಪೋಸ್ ಮಾಡುತ್ತಿರುವ ಫೋಟೋ ಇದು. ಇದನ್ನು ನೋಡಿದರೆ ಜನರಿಗೆ ಅಚ್ಚರಿ ಆಗೋದು ಗ್ಯಾರಂಟಿ. ಅಂದಹಾಗೆ, ಇದು ‘ಮುದ್ದು ರಾಕ್ಷಸಿ’ ಸಿನಿಮಾದ ಫೋಟೋ. ಈ ಸಿನಿಮಾದ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..
ಚಂದನ್ ಶೆಟ್ಟಿ ಅವರು ನಿಜವಾಗಿಯೂ ಈಗ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿಲ್ಲ. ಅವರು ಹೀಗೆಲ್ಲ ಮಾಡಿರುವುದು ‘ಮುದ್ದು ರಾಕ್ಷಸಿ’ ಸಿನಿಮಾಗಾಗಿ. ಇದು ಯಾವ ಸಿನಿಮಾ ಎಂಬ ಗೊಂದಲ ಮೂಡುವುದು ಸಹಜ. ಅದಕ್ಕೆ ಉತ್ತರ, ‘ಕ್ಯಾಂಡಿ ಕ್ರಶ್’. ಹೌದು, ಈ ಮೊದಲು ‘ಕ್ಯಾಂಡಿ ಕ್ರಶ್’ ಎಂದಿದ್ದ ಸಿನಿಮಾ ಶೀರ್ಷಿಕೆಯನ್ನು ಈಗ ‘ಮುದ್ದು ರಾಕ್ಷಸಿ’ ಎಂದು ಬದಲಾಯಿಸಲಾಗಿದೆ.
ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದು ಜೋಡಿಯಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸಿದ ಸಿನಿಮಾ ಇದು. ಪುನೀತ್ ಶ್ರೀನಿವಾಸ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸೈಕೋಥ್ರಿಲ್ಲರ್ ಕಥಾಹಂದರ ಈ ಸಿನಿಮಾದಲ್ಲಿ ಇರಲಿದೆ. ತಾತ್ಕಾಲಿಕವಾಗಿ ‘ಕ್ಯಾಂಡಿ ಕ್ರಷ್’ ಎಂಬ ಟೈಟಲ್ ಇಟ್ಟುಕೊಳ್ಳಲಾಗಿತ್ತು. ಇನ್ಮುಂದೆ ಈ ಸಿನಿಮಾವನ್ನು ‘ಮುದ್ದು ರಾಕ್ಷಸಿ’ ಅಂತ ಕರೆಯಲಾಗುತ್ತದೆ.
‘ಮುದ್ದು ರಾಕ್ಷಸಿ ’ ಟೈಟಲ್ ಭಿನ್ನವಾಗಿದ್ದು, ಜನರಲ್ಲಿ ಕೌತುಕ ಮೂಡಿಸಿದೆ. ಇದರಲ್ಲಿ ಒಂದು ಡಿಫರೆಂಟ್ ಆದ ರೊಮ್ಯಾಂಟಿಕ್ ಪ್ರೇಮ್ ಕಹಾನಿ ಇರಲಿದೆ. ಸೈಕೋಥ್ರಿಲ್ಲರ್ ಕಥಾಹಂದರ ಪ್ರಮುಖವಾಗಿ ಇರಲಿದೆ. ಸಿನಿಮಾದ ಹಾಡುಗಳಿಗೆ ಎಂ.ಎಸ್. ತ್ಯಾಗರಾಜ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಎ. ಕರುಣಾಕರ್ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ.
ಇದನ್ನೂ ಓದಿ: ಹಬ್ಬದ ಸೀಸನ್: ಸಾಂಪ್ರದಾಯಿಕ ಲುಕ್ನಲ್ಲಿ ಕಂಗೊಳಿಸುತ್ತಿರುವ ನಿವೇದಿತಾ ಗೌಡ
ಮೋಹನ್ ಕುಮಾರ್ ಅವರು ‘ಶ್ರೀಚೌಡೇಶ್ವರಿ ಸಿನಿ ಕಂಬೈನ್ಸ್’ ಮೂಲಕ ‘ಮುದ್ದು ರಾಕ್ಷಸಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಪುನೀತ್ ಶ್ರೀನಿವಾಸ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಬಹುತೇಕ ದೃಶ್ಯಗಳ ಶೂಟಿಂಗ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.