ಮತ್ತೊಂದು ಸಿನಿಮಾಗೆ ಹೀರೋ ಆದ ಚಂದನ್​ ಶೆಟ್ಟಿ; ಟೈಟಲ್​ ಲಾಂಚ್​ ಮಾಡೋದು ಸಾಕ್ಷಾತ್​ ಮಹಾಲಕ್ಷಿ?

ಅರುಣ್ ಅಮುಕ್ತ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ. ಸಿನಿಮಾದ ಶೀರ್ಷಿಕೆಯನ್ನು ಆಗಸ್ಟ್​ 25ರಂದು ಮಧ್ಯಾಹ್ನ 12.21ಕ್ಕೆ ಬಿಡುಗಡೆ ಮಾಡಲು ಟೈಮ್​ ಫಿಕ್ಸ್​ ಮಾಡಲಾಗಿದೆ. ಟೈಟಲ್​ ಜೊತೆಗೆ ಸಿನಿಮಾದ ಕಥೆ ಬಗ್ಗೆ ಒಂದಷ್ಟು ಸುಳಿವು ಬಿಟ್ಟುಕೊಡುವ ನಿರೀಕ್ಷೆ ಇದೆ. ಸದ್ಯ ಬಿಡುಗಡೆ ಆಗಿರುವ ಪ್ರಮೋಷನಲ್​ ವಿಡಿಯೋ ಗಮನ ಸೆಳೆಯುತ್ತಿದೆ.

ಮತ್ತೊಂದು ಸಿನಿಮಾಗೆ ಹೀರೋ ಆದ ಚಂದನ್​ ಶೆಟ್ಟಿ; ಟೈಟಲ್​ ಲಾಂಚ್​ ಮಾಡೋದು ಸಾಕ್ಷಾತ್​ ಮಹಾಲಕ್ಷಿ?
ಚಂದನ್​ ಶೆಟ್ಟಿ ಹೊಸ ಸಿನಿಮಾ ಟೀಮ್​
Follow us
ಮದನ್​ ಕುಮಾರ್​
|

Updated on: Aug 18, 2023 | 12:19 PM

ರ‍್ಯಾಪ್​ ಸಿಂಗರ್​, ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರು ನಟನೆಯಲ್ಲೂ ಆಸಕ್ತಿ ಹೊಂದಿರುವುದು ಗೊತ್ತೇ ಇದೆ. ಈಗಾಗಲೇ ಅವರು ಒಂದೆರಡು ಸಿನಿಮಾಗಳಿಗೆ ಹೀರೋ ಆಗಿದ್ದಾರೆ. ಆ ಚಿತ್ರಗಳು ಬಿಡುಗಡೆ ಆಗುವುದಕ್ಕೂ ಮುನ್ನವೇ ಅವರಿಗೆ ಹೊಸ ಹೊಸ ಅವಕಾಶಗಳು ಬರುತ್ತಿವೆ. ಈಗ ಅವರ ಹೊಸ ಸಿನಿಮಾ (Chandan Shetty New Movie) ಬಗ್ಗೆ ಮಾಹಿತಿ ಕೇಳಿಬಂದಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫಿಕ್ಸ್​ ಆಗಿಲ್ಲ. ಸಾಮಾನ್ಯವಾಗಿ ಚಿತ್ರದ ಟೈಟಲ್​ ಅನ್ನು ಸ್ಟಾರ್​ ನಟ-ನಟಿಯರ ಕೈಯಿಂದ ಅನಾವರಣ ಮಾಡಿಸಲಾಗುತ್ತದೆ. ಆದರೆ ಚಂದನ್​ ಶೆಟ್ಟಿಯ ಹೊಸ ಸಿನಿಮಾದ ಶೀರ್ಷಿಕೆ ಬಿಡುಗಡೆ ಮಾಡಲು ಸಾಕ್ಷಾತ್​ ವರಮಹಾಲಕ್ಷ್ಮಿ (Varamahalakshmi) ಬರ್ತಾಳಂತೆ. ಏನಿದು ಟ್ವಿಸ್ಟ್​ ಅಂತೀರಾ? ಆ ಬಗ್ಗೆ ಇಲ್ಲಿದೆ ಮಾಹಿತಿ..

ಚಂದನ್​ ಶೆಟ್ಟಿ ಅವರು ಅಭಿನಯಿಸಲಿರುವ ಹೊಸ ಸಿನಿಮಾ ಬಗ್ಗೆ ಅಪ್​ಡೇಟ್​ ನೀಡಲು ಒಂದು ಪ್ರಮೋಷನಲ್​ ವಿಡಿಯೋ ಮಾಡಲಾಗಿದೆ. ಅದರಲ್ಲಿ ಟೈಟಲ್​ ಲಾಂಚ್​ ಬಗ್ಗೆಯೇ ಚರ್ಚೆ ನಡೆದಿದೆ. ಯಾರಿಂದ ಶೀರ್ಷಿಕೆ ಬಿಡುಗಡೆ ಮಾಡಿಸೋದು ಎಂಬ ಬಗ್ಗೆ ನಿರ್ದೇಶನ ತಂಡದವರು ಮತ್ತು ಚಂದನ್​ ಶೆಟ್ಟಿ ತಲೆ ಕೆಡಿಸಿಕೊಳ್ಳುತ್ತಾರೆ. ಅಂದು ರಾತ್ರಿ ನಿರ್ದೇಶಕರ ಕನಸಿನಲ್ಲಿ ಸಾಕ್ಷಾತ್​ ಮಹಾಲಕ್ಷ್ಮಿ ಬರುತ್ತಾಳೆ. ‘ನಿಮ್ಮ ಸಿನಿಮಾದ ಟೈಟಲ್​ ಅನ್ನು ವರಮಹಾಲಕ್ಷ್ಮಿ ಹಬ್ಬದ ದಿನ ನಾನೇ ಲಾಂಚ್​ ಮಾಡ್ತೀನಿ’ ಎಂದು ಆಕೆ ಭರವಸೆ ನೀಡುತ್ತಾಳೆ. ಈ ರೀತಿ ತಮಾಷೆಯ ಪ್ರಸಂಗ ಈ ಪ್ರೋಮೋ ವಿಡಿಯೋದಲ್ಲಿದೆ.

ಚಂದನ್​ ಶೆಟ್ಟಿ ಹೊಸ ಸಿನಿಮಾದ ಪ್ರಮೋಷನಲ್​ ವಿಡಿಯೋ:

ಈ ಸಿನಿಮಾದಲ್ಲಿ ಚಂದನ್ ಶೆಟ್ಟಿ ಜತೆ ಭಾವನಾ, ಅಮರ್, ವಿವಾನ್, ಮಾನಸಿ, ಸುನೀಲ್ ಪುರಾಣಿಕ್, ಭವ್ಯ, ಸಿಂಚನಾ, ಅರವಿಂದ ರಾವ್, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ ಸೇರಿದಂತೆ ಅನೇಕರು ಅಭಿನಯಿಸಲಿದ್ದಾರೆ. ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

ಇದನ್ನೂ ಓದಿ: ನೀರಿನೊಳಗೆ ಚಂದನ್​ ಶೆಟ್ಟಿ-ನಿವೇದಿತಾ ಗೌಡ ರೊಮ್ಯಾನ್ಸ್​; ವೈರಲ್​ ವಿಡಿಯೋ ನೋಡಿ ಜನ ಹೇಳಿದ್ದೇನು?

ಅರುಣ್ ಅಮುಕ್ತ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ. ಸಿನಿಮಾದ ಶೀರ್ಷಿಕೆಯನ್ನು ಆಗಸ್ಟ್​ 25ರಂದು ಮಧ್ಯಾಹ್ನ 12.21ಕ್ಕೆ ಬಿಡುಗಡೆ ಮಾದಲು ಟೈಮ್​ ಫಿಕ್ಸ್​ ಮಾಡಲಾಗಿದೆ. ಟೈಟಲ್​ ಜೊತೆಗೆ ಸಿನಿಮಾದ ಕಥೆ ಬಗ್ಗೆ ಒಂದಷ್ಟು ಸುಳಿವು ಬಿಟ್ಟುಕೊಡುವ ನಿರೀಕ್ಷೆ ಇದೆ. ಈ ಹಿಂದೆ ‘ಲೂಸ್​ಗಳು’ ಚಿತ್ರಕ್ಕೆ ಅರುಣ್​ ಅಮುಕ್ತ ಅವರು ನಿರ್ದೇಶನ ಮಾಡಿದ್ದರು. ಜಾಹೀರಾತು ಕ್ಷೇತ್ರದಲ್ಲೂ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಯುವ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಕಹಾನಿಯನ್ನು ಇಟ್ಟುಕೊಂಡು ಅವರೀಗ ಚಂದನ್​ ಶೆಟ್ಟಿಗೆ ಆ್ಯಕ್ಷನ್​-ಕಟ್​ ಹೇಳಲು ಸಜ್ಜಾಗಿದ್ದಾರೆ.

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ