ಚಿಕ್ಕಣ್ಣ ಈಗ ಖುಷಿಯಲ್ಲಿದ್ದಾರೆ. ನೂರಾರು ಸಿನಿಮಾಗಳಲ್ಲಿ ಹಾಸ್ಯನಟರಾಗಿ ನಟಿಸಿರುವ ಚಿಕ್ಕಣ್ಣ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟ 13 ವರ್ಷದ ಬಳಿಕ ಚಿಕ್ಕಣ್ಣ ಇದೀಗ ನಾಯಕ ನಟನಾಗಿದ್ದಾರೆ. ತಾವೇ ನಟಿಸಿದ್ದ ‘ಅಧ್ಯಕ್ಷ’ ಸಿನಿಮಾದ ಸ್ಪಿನ್ಆಫ್ ಸಿನಿಮಾ ‘ಉಪಾಧ್ಯಕ್ಷ’ದಲ್ಲಿ (Upadyaksha) ಚಿಕ್ಕಣ್ಣ (Chikkanna) ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದ್ದು, ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಯಶಸ್ವಿಯಾಗಿದೆ. ನಾಯಕ ನಟನಾಗಿ ತಮ್ಮ ಈ ಮೊದಲ ಪ್ರಯತ್ನಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಚಿಕ್ಕಣ್ಣ ಧನ್ಯವಾದ ಅರ್ಪಿಸಿದ್ದಾರೆ.
‘ಉಪಾಧ್ಯಕ್ಷ’ ಸಿನಿಮಾದ ಸಕ್ಸಸ್ ಮೀಟ್ನಲ್ಲಿ ಮಾತನಾಡಿದ ಉಪಾಧ್ಯಕ್ಷ, ತಮ್ಮ ಸಿನಿಮಾಕ್ಕೆ ಬೆಂಬಲ ನೀಡಿದ ಚಿತ್ರರಂಗದ ಗಣ್ಯರಿಗೆ ಧನ್ಯವಾದ ಹೇಳಿದರು. ‘ಉಪಾಧ್ಯಕ್ಷ’ ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ ಶಿವರಾಜ್ ಕುಮಾರ್ ಅವರಿಗೆ ವಿಶೇಷ ಧನ್ಯವಾದ ಹೇಳಿದ ಚಿಕ್ಕಣ್ಣ, ‘ಸಿನಿಮಾದ ಸೆಟ್ಗೆ ಬಂದಿದ್ದರು. ಟ್ರೈಲರ್ ಲಾಂಚ್ ಸಹ ಮಾಡಿಕೊಟ್ಟರು, ಬಳಿಕ ಬಿಡುವು ಮಾಡಿಕೊಂಡು ಸಿನಿಮಾ ನೋಡಿ ಶುಭ ಹಾರೈಸಿದರು’ ಅವರಿಗೆ ಧನ್ಯವಾದ.
‘ಉಪಾಧ್ಯಕ್ಷ’ ಸಿನಿಮಾಕ್ಕೆ ಶುಭಾಶಯ ಹೇಳಿ ವಿಡಿಯೋ ಬೈಟ್ಸ್ ಕೊಟ್ಟವರಿಗೆ ಧನ್ಯವಾದ ಹೇಳಿದ ಚಿಕ್ಕಣ್ಣ, ‘ನಾನು ಎಲ್ಲ ಕಡೆ ಹೋಗಲಾಗಲಿಲ್ಲ, ಆದರೂ ಸಹ ಹಲವರು ನಾವು ಕೇಳಿದ ಕೂಡಲೇ ಅವರೇ ವಿಡಿಯೋ ಮಾಡಿ ನಮಗೆ ಕಳಿಸಿಕೊಟ್ಟರು. ರಿಷಬ್ ಶೆಟ್ಟಿ, ಆಶಿಕಾ ರಂಗನಾಥ್, ಉಪೇಂದ್ರ, ಉಪೇಂದ್ರ, ಡಾಲಿ ಧನಂಜಯ್, ರಂಗಾಯಣ ರಘು’ ಇನ್ನೂ ಹಲವರು ನಮಗೆ ಶುಭಾಶಯ ಕೋರಿದರು ಅವರೆಲ್ಲರೀಗೂ ವಿಶೇಷ ಧನ್ಯವಾದ ಎಂದರು.
ಇದನ್ನೂ ಓದಿ:Chikkanna: ಯಶ್-ರಾಧಿಕಾ ದಂಪತಿ ಜೊತೆ ಬ್ರೇಕ್ಫಾಸ್ಟ್ ಮಾಡಿದ ಚಿಕ್ಕಣ್ಣ
ರಶ್ಮಿಕಾ ಮಂದಣ್ಣ ಸಹ ‘ಉಪಾಧ್ಯಕ್ಷ’ ಸಿನಿಮಾಕ್ಕೆ ವಿಡಿಯೋ ಬೈಟ್ ನೀಡಿದ್ದರು. ‘ಉಪಾಧ್ಯಕ್ಷ’ ಚಿತ್ರತಂಡಕ್ಕೆ ಒಳ್ಳೆಯದಾಗಲಿ, ಎಲ್ಲರೂ ಬಹಳ ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದಿದ್ದರು. ಅವರಿಗೂ ಸಹ ಚಿಕ್ಕಣ್ಣ ಧನ್ಯವಾದ ಹೇಳಿದರು. ಬಳಿಕ ತಮ್ಮ ಸೆಲೆಬ್ರಿಟಿ ಶೋಗೆ ಬಂದಿದ್ದ ಯೋಗರಾಜ್ ಭಟ್, ಶ್ರುತಿ, ಝಾಯಿದ್ ಖಾನ್, ಕೋಮಲ್ ಇನ್ನೂ ಹಲವರಿಗೆ ಚಿಕ್ಕಣ್ಣ ಧನ್ಯವಾದ ಹೇಳಿದರು.
ಚಿಕ್ಕಣ್ಣ ಅವರ ಗೆಳೆಯ ನಟ ದರ್ಶನ್ ತೂಗುದೀಪ ಸಹ ‘ಉಪಾಧ್ಯಕ್ಷ’ ಸಿನಿಮಾಕ್ಕೆ ಶುಭ ಕೋರಿದ್ದರು. ಆ ಬಳಿಕ ಬಂದು ವಿಶೇಷ ಪ್ರದರ್ಶನದಲ್ಲಿ ಸಿನಿಮಾ ವೀಕ್ಷಿಸಿದ್ದರು. ನಟ ಯಶ್ ಸಹ ಚಿಕ್ಕಣ್ಣ ಅವರನ್ನು ಮನೆಗೆ ಆಹ್ವಾನಿಸಿ ಅವರೊಟ್ಟಿಗೆ ಭೋಜನ ಸವಿದು ಸಿನಿಮಾಕ್ಕೆ ಶುಭ ಕೋರಿದ್ದರು. ಸುದೀಪ್ ಸಹ ‘ಉಪಾಧ್ಯಕ್ಷ’ ಸಿನಿಮಾಕ್ಕೆ ಒಳಿತಾಗಲೆಂದು ಹಾರೈಸಿದ್ದರು. ಎಲ್ಲ ಶುಭ ಹಾರೈಕೆಯಿಂದ ಚಿಕ್ಕಣ್ಣ ಗೆದ್ದಿದ್ದಾರೆ. ಇದೇ ಗೆಲುವನ್ನು ಚಿಕ್ಕಣ್ಣ ಮುಂದುವರೆಸುತ್ತಾರೆಯೇ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ