‘ಮನೆ ಮನೆಗೆ ಹೋಗಿ ಚಿಕ್ಕಣ್ಣ ಧನ್ಯವಾದ ಹೇಳಬೇಕು’: ‘ಉಪಾಧ್ಯಕ್ಷ’ ಗೆಲುವಲ್ಲಿ ನಿರ್ದೇಶಕರ ಮಾತು
ಹಾಸ್ಯ ನಟ ಚಿಕ್ಕಣ್ಣ ಅವರು ಹೀರೋ ಆಗಿ ನಟಿಸಿದ ‘ಉಪಾಧ್ಯಕ್ಷ’ ಸಿನಿಮಾ ಗೆದ್ದಿದೆ. ಈ ಖುಷಿಯಲ್ಲಿ ಚಿತ್ರತಂಡದವರು ಅನೇಕರಿಗೆ ಧನ್ಯವಾದ ತಿಳಿಸಿದ್ದಾರೆ. ಸಕ್ಸಸ್ ಮೀಟ್ನಲ್ಲಿ ನಿರ್ದೇಶಕ ಅನಿಲ್ ಕುಮಾರ್ ಮಾತನಾಡಿದ್ದಾರೆ. ಜನರು ಮತ್ತು ಸೆಲೆಬ್ರಿಟಿಗಳು ನೀಡಿದ ಬೆಂಬಲಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಈ ಸಿನಿಮಾದ ಗೆಲುವಿನಿಂದ ಚಿಕ್ಕಣ್ಣ ಅವರ ಖ್ಯಾತಿ ಹೆಚ್ಚಾಗಿದೆ.
ಚಿಕ್ಕಣ್ಣ ನಟನೆಯ ‘ಉಪಾಧ್ಯಕ್ಷ’ ಸಿನಿಮಾ ಗೆದ್ದಿದೆ. ಈ ಚಿತ್ರಕ್ಕೆ ಅನಿಲ್ ಕುಮಾರ್ (Anil Kumar) ನಿರ್ದೇಶನ ಮಾಡಿದ್ದಾರೆ. ಜನರಿಂದ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ಸಿನಿಮಾಗೆ ಬೆಂಬಲ ನೀಡಿದ್ದಾರೆ. ದರ್ಶನ್ ಅವರು ಸಿನಿಮಾ ವೀಕ್ಷಿಸಿ ಬೆನ್ನು ತಟ್ಟಿದ್ದಾರೆ. ಇದೆಲ್ಲದರ ಪರಿಣಾಮವಾಗಿ ‘ಉಪಾಧ್ಯಕ್ಷ’ (Upadhyaksha) ಗೆದ್ದಿದ್ದಾನೆ. ಚಿತ್ರದ ಸಕ್ಸಸ್ ಮೀಟ್ನಲ್ಲಿ ನಿರ್ದೇಶಕ ಅನಿಲ್ ಕುಮಾರ್ ಮಾತನಾಡಿದ್ದಾರೆ. ‘ಚಿಕ್ಕಣ್ಣ ಕರ್ನಾಟಕದ ಪ್ರತಿ ಮನೆಗೆ ಹೋಗಿ ಧನ್ಯವಾದ ಹೇಳಬೇಕು. ಅಷ್ಟು ಚೆನ್ನಾಗಿ ಈ ಸಿನಿಮಾಗೆ ಜನರು ಪ್ರೀತಿ ತೋರಿಸಿದ್ದಾರೆ. ಒಬ್ಬ ಸ್ನೇಹಿತವಾಗಿ ಚಿಕ್ಕಣ್ಣನ ಈ ಗೆಲುವು ಕಂಡು ನನಗೆ ಖುಷಿ ಆಗಿದೆ. ಈ ಗೆಲುವಿಗಾಗಿ ಅವರು ಪಟ್ಟಿರುವ ಕಷ್ಟ ಏನು ಎಂಬದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಮುಂದೆಯೂ ನಿಮಗೆ ಇದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಒಳ್ಳೆಯದು ಆಗಲಿ’ ಎಂದು ಅನಿಲ್ ಕುಮಾರ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಚಿಕ್ಕಣ್ಣ (Chikkanna) ಅವರಿಗೆ ಜೋಡಿಯಾಗಿ ಮಲೈಕಾ ನಟಿಸಿದ್ದಾರೆ. ಅವರಿಗೂ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ. ‘ಉಪಾಧ್ಯಕ್ಷ’ ಸಿನಿಮಾಗೆ ದರ್ಶನ್ ಕೊಟ್ಟ ಬೆಂಬಲಕ್ಕೂ ನಿರ್ದೇಶಕರು ಧನ್ಯವಾದ ಅರ್ಪಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.