AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪು-ಅಪ್ಪಾಜಿಯ ಕೊಂಡಾಡಿದ ಸಿಎಂ ಸಿದ್ದರಾಮಯ್ಯ, ಪೃಥ್ವಿ ಸ್ಕಾಲರ್​ಶಿಪ್ ಟೆಸ್ಟ್ ಲೋಗೋ ಬಿಡುಗಡೆ

Dr Rajkumar Academy: ಶಕ್ತಿಧಾಮ, ಡಾ ರಾಜ್​ಕುಮಾರ್ ಐಎಎಸ್ ಅಕಾಡೆಮಿ ಮೂಲಕ ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದೊಡ್ಮನೆ ಕುಟುಂಬ ಇದೀಗ ಪುನೀತ್ ರಾಜ್​ಕುಮಾರ್ ಹೆಸರಲ್ಲಿ ಸ್ಕಾಲರ್​ಶಿಪ್ ಬಿಡುಗಡೆ ಮಾಡಿದೆ.

ಅಪ್ಪು-ಅಪ್ಪಾಜಿಯ ಕೊಂಡಾಡಿದ ಸಿಎಂ ಸಿದ್ದರಾಮಯ್ಯ, ಪೃಥ್ವಿ ಸ್ಕಾಲರ್​ಶಿಪ್ ಟೆಸ್ಟ್ ಲೋಗೋ ಬಿಡುಗಡೆ
ಅಪ್ಪು-ಅಪ್ಪಾಜಿ
ಮಂಜುನಾಥ ಸಿ.
|

Updated on: Jun 09, 2023 | 7:25 PM

Share

ದೊಡ್ಮನೆ ಕುಟುಂಬ (Dr Rajkumar Family) ಸಿನಿಮಾಗಳ ಮೂಲಕ ಜನರನ್ನು ದಶಕಗಳಿಂದಲೂ ರಂಜಿಸುತ್ತಾ ಬರುತ್ತಿರುವ ಜೊತೆಗೆ ಶಿಕ್ಷಣ ದಾಸೋಹದ ಕಾರ್ಯವನ್ನೂ ಸಹ ಅದರ ಜೊತೆಗೇ ಮಾಡುತ್ತಾ ಬಂದಿದೆ. ಮೈಸೂರಿನ ಶಕ್ತಿಧಾಮ ಆಗಿರಬಹುದು, ಅಪ್ಪಾಜಿ ಹೆಸರಲ್ಲಿ ಮೂವರೂ ಅಪ್ಪು, ಶಿವಣ್ಣ, ರಾಘವೇಂದ್ರ ರಾಜ್​ಕುಮಾರ್ ನಿರ್ಮಿಸಿದ ಡಾ ರಾಜ್​ಕುಮಾರ್ (Dr Rajkumar) ಐಎಎಸ್ ಅಕಾಡೆಮಿ ಆಗಿರಬಹುದು ತಮ್ಮದೇ ರೀತಿಯ ಕಾಣ್ಕೆಯನ್ನು ಸಮಾಜಕ್ಕೆ, ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಾ ಬಂದಿದೆ. ಅದರಲ್ಲಿಯೂ ಡಾ ರಾಜ್​ಕುಮಾರ್ ಅಕಾಡೆಮಿಯಿಂದ ಹಲವಾರು ವಿದ್ಯಾರ್ಥಿಗಳು ಐಎಎಸ್​ ಅಧಿಕಾರಿಗಳಾಗಿ ಹೊರಬರುತ್ತಿದ್ದಾರೆ.

ಕೆಲವೇ ದಿನಗಳ ಹಿಂದೆ ಐಎಎಸ್ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗಿದ್ದು ಈ ಬಾರಿಯೂ ರಾಜ್​ಕುಮಾರ್ ಅಕಾಡೆಮಿಯಿಂದ ಹಲವು ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಐಎಎಸ್​ ಅಧಿಕಾರಿಗಳಾಗುತ್ತಿದ್ದಾರೆ. ಅಂಥಹವರಿಗೆ ಸನ್ಮಾನ ಕಾರ್ಯಕ್ರಮವನ್ನು ರಾಜ್​ಕುಮಾರ್ ಕುಟುಂಬ ಇರಿಸಿಕೊಂಡಿತ್ತು, ಜೊತೆಗೆ ಅಪ್ಪು ಹೆಸರಲ್ಲಿ ಪೃಥ್ವಿ ಸ್ಕಾಲರ್​ಶಿಪ್ ಟೆಸ್ಟ್ ಲೋಗೋ ಬಿಡುಗಡೆ ಕಾರ್ಯಕ್ರಮವೂ ಇಂದು ನಡೆಯಿತು. ದೊಡ್ಮನೆ ಕುಟುಂಬದವರು ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ಪೃಥ್ವಿ ಸ್ಕಾಲರ್​ಶಿಪ್ ಲೋಗೋ ಮೇಲೆ ಸಹಿ ಮಾಡುವ ಮೂಲಕ ಲೋಗೋ ಲಾಂಚ್ ಮಾಡಿದ ಸಿಎಂ ಸಿದ್ದರಾಮಯ್ಯ ಬಳಿಕ ಮಾತನಾಡಿ, ”ಈ ಕಾರ್ಯಕ್ರಮದಲ್ಲಿ ನಾನು‌ ಬಹಳ ಸಂತೋಷದಿಂದ ಭಾಗವಹಿಸಿದ್ದೇನೆ. ಡಾ ರಾಜ್ ಈ ನಾಡು ಕಂಡ ಶ್ರೇಷ್ಠ ನಟ, ಅವರು ಹಳ್ಳಿಯವರು ನಮ್ಮ ಜಿಲ್ಲೆಯವರೇ. ಅವರನ್ನ ಭೇಟಿಯಾದಾಗ ಬನ್ನಿ ಬನ್ನಿ ನಮ್ ಕಾಡಿನವರು ಅಂತ ಕರೀತಾ ಇದ್ರು. ಜನರನ್ನ ಬಹಳ‌ ಗೌರವಯುತವಾಗಿ ಮಾತಾಡಿಸುವ ಸಂಸ್ಕೃತಿಯನ್ನ ರೂಢಿಸಿಕೊಂಡಿದ್ದರು, ಅದನ್ನ ನಾವು ಸಹ ರೂಢಿಸಿಕೊಳ್ಳಬೇಕು. ಎಲ್ಲರನ್ನು ಗೌರವಿಸುವುದನ್ನು ಪ್ರೀತಿಸುವುದನ್ನು ಕಲಿಯಬೇಕು. ಅದನ್ನು ರಾಜಕುಮಾರ್ ರಿಂದ ಕಲೀಬೇಕು, ಮಕ್ಕಳಂತಿದ್ದವರು ರಾಜಕುಮಾರ್, ಅವರು ಯಾವತ್ತು ಕೆಟ್ಟದ್ದನ್ನ ಯೋಚನೆ ಮಾಡಿರಲಿಲ್ಲ” ಎಂದು ಗುಣಗಾನ ಮಾಡಿದರು.

”ಸಮಾಜದ ಕೊಡುಗೆ ಅಪಾರವಾಗಿ ನನ್ನ ಮೇಲಿದೆ, ನಾನು ಸಮಾಜಕ್ಕೆ ಏನು ಕೊಟ್ಟೆ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು. ಇದಕ್ಕೆ ಸಮಾಧನಕಾರ ಉತ್ತರ ನಿಮ್ಮ ಆತ್ಮ ನೀಡಿದರೆ ಮಾತ್ರ ನೀವು ಒಳ್ಳೆಯ ಪ್ರಜೆ ಆಗಿರುತ್ತೀರಿ. ನಾನು ರಾಜ್​ಕುಮಾರ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದಿನಿ ಅವರು ಜೀವನವನ್ನು ಸಾರ್ಥಕ ಮಾಡಿಕೊಂಡಿದ್ದರು ಎಂದ ಸಿದ್ದರಾಮಯ್ಯ, ‘ನಮ್ಮ ದೇಶದಲ್ಲಿ ಚಾರಿತ್ರಿಕ ಕಾರಣದಿಂದ ಹಲವಾರು ಮಂದಿಗೆ ಶಿಕ್ಷಣ ಸಿಕ್ಕಿರಲಿಲ್ಲ. ನೂರಾರು ವರ್ಷಗಳ ಕಾಲ ಬಹು ಸಂಖ್ಯಾತ ಜನ ಶಿಕ್ಷಣದಿಂದ ವಂಚಿತರಾಗಿದ್ದರು. ಜಾತಿ ವ್ಯವಸ್ಥೆ ಮತ್ತು ಶಿಕ್ಷಣದ ಕಾರಣದಿಂದ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಭಿವೃದ್ದಿ ಆಗಿರಲಿಲ್ಲ” ಎಂದರು.

ಪುನೀತ್ ರಾಜ್​ಕುಮಾರ್ ಕುರಿತಾಗಿ ಮಾತನಾಡಿದ ಸಿದ್ದರಾಮಯ್ಯ, ”ಪುನೀತ್ ರಾಜ್ ಕುಮಾರ್ ಜನರ ಪ್ರೀತಿ ಗಳಿಸಿದ್ದ ಅಪರೂಪದ ನಟ. ಅವರ ಹೆಸರಲ್ಲಿ ಸ್ಕಾಲರ್ ಶಿಪ್ ಕೊಡುತ್ತಿರುವುದು ಬಹಳ ಒಳ್ಳೆಯ ಕೆಲಸ. ಸರ್ಕಾರಿ ಕೆಲಸ ದೇವರ ಕೆಲಸ ಅಂತ ಕೆಲಸ ಮಾಡಿ ಅಂತ ಕೆಲಸದಲ್ಲಿ ದೇವರನ್ನು ಕಾಣಿ ಎಂದು ಹೊಸದಾಗಿ ಐಎಎಸ್ ಅಧಿಕಾರಿಗಳಾಗಲಿರುವ ಯುವಕರಿಗೆ ಸಿದ್ದರಾಮಯ್ಯ ಹೇಳಿದರು. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರನ್ನು ಡಾ ರಾಜ್​ಕುಮಾರ್ ಅಕಾಡೆಮಿ ಹಾಗೂ ರಾಜ್ ಕುಟುಂಬ ಸನ್ಮಾನ ಮಾಡಿತು. ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್​ಕುಮಾರ್, ಅಶ್ವಿನಿ ಪುನೀತ್ ರಾಜ್​ಕುಮಾರ್, ದೊಡ್ಮನೆ ಕುಟುಂಬದ ಇನ್ನೂ ಕೆಲವರು ಭಾಗಿಯಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?