Totapuri 2: ‘ತೋತಾಪುರಿ 2’ ಬಿಡುಗಡೆಗೆ ಸಜ್ಜಾದ ನಿರ್ಮಾಪಕರು; ಜಗ್ಗೇಶ್​, ಡಾಲಿ ಧನಂಜಯ್​ ಫಸ್ಟ್​ ಲುಕ್​ ಬಿಡುಗಡೆ

Daali Dhananjay: ಡಾಲಿ ಧನಂಜಯ್​ ಅವರ ಅಭಿಮಾನಿಗಳಿಗೆ ‘ತೋತಾಪುರಿ 2’ ಚಿತ್ರದಲ್ಲಿ ಸಖತ್​ ಮನರಂಜನೆ ಸಿಗಲಿದೆ ಎಂದು ಚಿತ್ರತಂಡ ಭರವಸೆ ನೀಡಿದೆ. ಸದ್ಯಕ್ಕೆ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್​ ಮಾಡಲಾಗಿದೆ.

Totapuri 2: ‘ತೋತಾಪುರಿ 2’ ಬಿಡುಗಡೆಗೆ ಸಜ್ಜಾದ ನಿರ್ಮಾಪಕರು; ಜಗ್ಗೇಶ್​, ಡಾಲಿ ಧನಂಜಯ್​ ಫಸ್ಟ್​ ಲುಕ್​ ಬಿಡುಗಡೆ
ಡಾಲಿ ಧನಂಜಯ್​, ಜಗ್ಗೇಶ್​

Updated on: Jul 04, 2023 | 12:17 PM

ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ‘ತೋತಾಪುರಿ’ ಸಿನಿಮಾ (Totapuri Movie) ಬಿಡುಗಡೆ ಆಗಿತ್ತು. ಪ್ರಪಂಚವೇ ಒಂದು ಕುಟುಂಬ ಎನ್ನುವ ಭಾವೈಕ್ಯತೆಯ ಸಂದೇಶವನ್ನು ಸಾರಿದ್ದ ಆ ಸಿನಿಮಾಗೆ ವಿಜಯ್​ ಪ್ರಸಾದ್​ ನಿರ್ದೇಶನ ಮಾಡಿದ್ದರು. ‘ತೋತಾಪುರಿ‌’ ಸಿನಿಮಾದ 2ನೇ ಭಾಗ ಕೂಡ ಬರಲಿದೆ ಎಂದು ಆಗಲೇ ಹೇಳಲಾಗಿತ್ತು. ಆ ಬಗ್ಗೆ ಈಗ ಅಪ್​ಡೇಟ್​ ಸಿಕ್ಕಿದೆ. ಶೀಘ್ರದಲ್ಲೇ ‘ತೋತಾಪುರಿ 2’ (Totapuri 2) ಬಿಡುಗಡೆ ಆಗಲಿದೆ. ಅದಕ್ಕಾಗಿ ಸಕಲ ತಯಾರಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿರುವ ಡಾಲಿ ಧನಂಜಯ್​ (Daali Dhananjay) ಮತ್ತು ‘ನವರಸ ನಾಯಕ’ ಜಗ್ಗೇಶ್​ ಅವರ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

ಡಾಲಿ ಧನಂಜಯ್ ಅವರು ‘ತೋತಾಪುರಿ’ ಕ್ಲೈಮ್ಯಾಕ್ಸ್​ನಲ್ಲಿ ಕಾಣಿಸಿಕೊಂಡಿದ್ದರು. ‘ತೋತಾಪುರಿ 2’ ಸಿನಿಮಾದಲ್ಲಿ ಅವರ ಪಾತ್ರ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದೆ. ಇತ್ತೀಚೆಗೆ ಗುರುಪೂರ್ಣಿಮೆ ಪ್ರಯುಕ್ತ ಈ ಸಿನಿಮಾದ ಫಸ್ಟ್​ ಲುಕ್​ ಅನಾವರಣ ಮಾಡಲಾಗಿದೆ. ಡಾಲಿ ಧನಂಜಯ್​ ಮತ್ತು ಜಗ್ಗೇಶ್​ ಅವರ ಗೆಟಪ್​ ಹೇಗಿರಲಿದೆ ಎಂಬುದು ಈ ಪೋಸ್ಟರ್​ ಮೂಲಕ ತಿಳಿದು ಬಂದಿದೆ.

ಇದನ್ನೂ ಓದಿ: Dhananjay: ‘ಆ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ’; ಸ್ಪಷ್ಟನೆ ನೀಡಿದ ಡಾಲಿ ಧನಂಜಯ್

‘ತೋತಾಪುರಿ’ ಮೊದಲ ಪಾರ್ಟ್​ನಲ್ಲಿ ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ‘ಶಿವಲಿಂಗ’ ಚಿತ್ರದ ಖ್ಯಾತಿಯ ನಿರ್ಮಾಪಕ ಕೆ.ಎ. ಸುರೇಶ್ ಅವರು ನಿರ್ಮಾಣ ಮಾಡಿದ್ದರು. ಅಷ್ಟೇ ಉತ್ಸಾಹದಿಂದ ಅವರು ಪಾರ್ಟ್​ 2 ಮಾಡಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾದ ಟೀಸರ್, ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಬಗ್ಗೆ ಚಿತ್ರತಂಡದಿಂದ ಮಾಹಿತಿ ಹೊರಬೀಳಲಿದೆ. ಸೆನ್ಸಾರ್ ಪ್ರಮಾಣಪತ್ರ ಸಿಕ್ಕ ಕೂಡಲೇ ರಿಲೀಸ್ ದಿನಾಂಕ ತಿಳಿಸುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಅದಿತಿ ಪ್ರಭುದೇವ, ದತ್ತಣ್ಣ, ಸುಮನ್​ ರಂಗನಾಥ್, ಹೇಮಾದತ್, ವೀಣಾ ಸುಂದರ್ ಅವರ ಪಾತ್ರಗಳು 2ನೇ ಪಾರ್ಟ್​ನಲ್ಲೂ ಮುಂದುವರಿಯಲಿವೆ.

ಇದನ್ನೂ ಓದಿ: ‘ಇಂಡಸ್ಟ್ರಿಗೆ ಬಂದಾಗ ಜಗ್ಗೇಶ್ ಇರೋಕೆ ಜಾಗ ಕೊಟ್ರು’ ಎಂದ ಗೋವಿಂದೇ ಗೌಡ

‘ಡಾಲಿ ಧನಂಜಯ್​ ಅವರ ಅಭಿಮಾನಿಗಳಿಗೆ ‘ತೋತಾಪುರಿ 2’ ಸಿನಿಮಾದಲ್ಲಿ ಭರ್ಜರಿ ಮನರಂಜನೆ ಸಿಗಲಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದ ಒಂದಷ್ಟು ಕೆಲಸಗಳು ಬಾಕಿ ಇವೆ. ಕೆಲವೇ ದಿನಗಳಲ್ಲಿ ಫಸ್ಟ್ ಕಾಪಿ ಸಿದ್ಧವಾಗಲಿದೆ. ನಮ್ಮ ನಿರೀಕ್ಷೆಯಂತೆಯೇ ಈ ಚಿತ್ರ ಬಹಳ ಉತ್ತಮವಾಗಿ ಮೂಡಿಬಂದಿದೆ. ಜನರಿಗೆ ಇಷ್ಟವಾಗುವ ಮನರಂಜನೆಯ ಕಥಾಹಂದರ ಈ ಸಿನಿಮಾದಲ್ಲಿದೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಸಖತ್​ ಮನರಂಜನೆ ಸಿಗಲಿದೆ’ ಎಂದು ಭರವಸೆ ನೀಡಿದ್ದಾರೆ ನಿರ್ಮಾಪಕ ಕೆ.ಎ. ಸುರೇಶ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us