‘ಶೂಟಿಂಗ್ ಮುಗಿದಿದೆ, ಸದ್ಯದಲ್ಲೇ ನಿಮ್ಮ ಮುಂದೆ ಬರ್ತೀವಿ’; ‘ಟಗರು ಪಲ್ಯ’ ಚಿತ್ರದ ಬಗ್ಗೆ ಅಪ್​ಡೇಟ್ ನೀಡಿದ ಧನಂಜಯ್

ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ‘ಟಗರು ಪಲ್ಯ’ ಚಿತ್ರಕ್ಕೆ ಉಮೇಶ್ ಕೆ ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ನಟಿಯಾಗಿ ನೆನಪಿರಲಿ ಪ್ರೇಮ್ ಮಗಳು ಅಮೃತಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

‘ಶೂಟಿಂಗ್ ಮುಗಿದಿದೆ, ಸದ್ಯದಲ್ಲೇ ನಿಮ್ಮ ಮುಂದೆ ಬರ್ತೀವಿ’; ‘ಟಗರು ಪಲ್ಯ’ ಚಿತ್ರದ ಬಗ್ಗೆ ಅಪ್​ಡೇಟ್ ನೀಡಿದ ಧನಂಜಯ್
ಟಗರು ಪಲ್ಯ ಸಿನಿಮಾ ಪೋಸ್ಟರ್

Updated on: Jun 01, 2023 | 7:28 AM

ನಟ ಧನಂಜಯ್ (Dhananjay) ಅವರು ನಟನೆಯಲ್ಲಿ ಮಾತ್ರವಲ್ಲ, ನಿರ್ಮಾಣದಲ್ಲೂ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡ ಬಯಸುತ್ತಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಉದ್ದೇಶದೊಂದಿಗೆ ಅವರು ‘ಡಾಲಿ ಪಿಕ್ಚರ್ಸ್​’ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಇದರ ಮೂಲಕ ಮೂಡಿ ಬರುತ್ತಿರುವ ‘ಟಗರು ಪಲ್ಯ’ (Tagaru Palya Movie) ಚಿತ್ರದ ಶೂಟಿಂಗ್ ಮುಗಿದಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಧನಂಜಯ್ ಅವರಿಗೆ ಎಲ್ಲರೂ ಆಲ್​ ದಿ ಬೆಸ್ಟ್ ಹೇಳಿದ್ದಾರೆ.

ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ‘ಟಗರು ಪಲ್ಯ’ ಚಿತ್ರಕ್ಕೆ ಉಮೇಶ್ ಕೆ ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಅನೇಕ ಹೊಸಬರಿಗೆ ಅವಕಾಶ ಸಿಕ್ಕಿದೆ. ಈ ಸಿನಿಮಾ ಮೂಲಕ ನಟಿಯಾಗಿ ನೆನಪಿರಲಿ ಪ್ರೇಮ್ ಮಗಳು ಅಮೃತಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಪೋಸ್ಟರ್​ಗಳು ಈಗಾಗಲೇ ರಿಲೀಸ್ ಆಗಿ ಗಮನ ಸೆಳೆದಿವೆ. ಈಗ ಸಿನಿಮಾದ ಶೂಟಿಂಗ್ ಮುಗಿಸಿದ ಖುಷಿಯನ್ನು ಚಿತ್ರತಂಡ ತಿಳಿಸಿದೆ. ಸಿನಿಮಾ ಶೂಟಿಂಗ್ ಹೇಗಿತ್ತು ಎಂಬುದನ್ನು ವಿಡಿಯೋ ಮೂಲಕ ತಿಳಿಸಲಾಗಿದೆ.

‘ಟಗರು ಪಲ್ಯ’ ಚಿತ್ರೀಕರಣ ಮುಕ್ತಾಯ. ನಮ್ಮ ಮಣ್ಣಿನ ಕಥೆಯೊಂದನ್ನು ನಿರ್ಮಿಸಿದ ಹೆಮ್ಮೆ. ಕನ್ನಡಕ್ಕೊಬ್ಬ ಹೊಸ ಪ್ರತಿಭಾನ್ವಿತ ನಿರ್ದೇಶಕ, ನಾಯಕನಾಗಿ ನಾಗಭೂಷಣ, ನಾಯಕಿಯಾಗಿ ಅಮೃತಾ ಪ್ರೇಮ್ ಮತ್ತು ಹೊಸ ಪ್ರತಿಭಾನ್ವಿತರ ದಂಡು, ಜೊತೆಗೆ ರಂಗಾಯಣ ರಘು, ತಾರಮ್ಮ, ಬಿರಾದರ್ ಅವರಂತಹ ಮೇರು ಕಲಾವಿದರ ಹೆಗಲು. ಸದ್ಯದಲ್ಲೆ ನಿಮ್ಮ ಮುಂದೆ’ ಎಂದು ಧನಂಜಯ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಬಡವರಿಗೆ ಅಕ್ಕಿ ಕೊಟ್ಟರೆ ತಪ್ಪಲ್ಲ, ಅವರು ಸೋಮಾರಿ ಆಗಲ್ಲ’; ಕಾಂಗ್ರೆಸ್ ಯೋಜನೆ ಬಗ್ಗೆ ಧನಂಜಯ್ ಮಾತು

ಧನಂಜಯ್ ಕೆಲಸವನ್ನು ಅನೇಕರು ಶ್ಲಾಘಿಸಿದ್ದಾರೆ. ‘ಒಳ್ಳೆಯದಾಗಲಿ. ಇನ್ನು ಹೆಚ್ಚು ಕಲಾವಿದರು ಮತ್ತು ಸಿನಿಮಾ ನಿಮ್ಮ ಗರಡಿ ಇಂದ ಬರಲಿ’ ಎಂದು ಕೆಲವರು ಕೋರಿದ್ದಾರೆ. ‘ಟಗರು ಪಲ್ಯ’ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದು, ಎಸ್. ಕೆ. ರಾವ್ ಛಾಯಾಗ್ರಹಣ ಚಿತ್ರಕ್ಕಿದೆ. ನಾಗಭೂಷಣ್-ಅಮೃತಾ ಜತೆಗೆ, ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.