‘ಪುಟ್ಟಮಲ್ಲಿ’ ಹಾಡಿನಿಂದ ಸದ್ದು ಮಾಡುತ್ತಿದೆ ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ

ಡಾಲಿ ಧನಂಜಯ, ರೀಷ್ಮಾ ನಾಣಯ್ಯ ಮತ್ತು ಉಮಾಶ್ರೀ ಅವರು ‘ಪುಟ್ಟಮಲ್ಲಿ’ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾದ ಈ ಹಾಡು ಸಖತ್ ಸದ್ದು ಮಾಡುತ್ತಿದೆ. ಈ ಹಾಡಿನಿಂದ ಚಿತ್ರದ ಮೇಲಿನ ಕ್ರೇಜ್ ಜಾಸ್ತಿ ಆಗಿದೆ. ಡಿಸೆಂಬರ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

‘ಪುಟ್ಟಮಲ್ಲಿ’ ಹಾಡಿನಿಂದ ಸದ್ದು ಮಾಡುತ್ತಿದೆ ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ
Daali Dhananjay, Reeshma Nanaiah

Updated on: Sep 04, 2026 | 10:47 PM

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಡಾಲಿ ಧನಂಜಯ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ಹೊಸ ಹಾಡು ‘ಪುಟ್ಟಮಲ್ಲಿ..’ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಿರುವ ಈ ಹಾಡು ಸದ್ಯ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹವಾ ಮಾಡುತ್ತಿದೆ. ರೆಟ್ರೋ ಶೈಲಿ ಹಾಗೂ ಆಧುನಿಕ ಟ್ರೆಂಡ್‌ಗಳ ಸಮ್ಮಿಲನವಾಗಿರುವ ಈ ಹಾಡು ಇನ್‌ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್ ಹಾಗೂ ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ಟ್ರೆಂಡ್ ಆಗುತ್ತಿದೆ.

ವಾಸುಕಿ ವೈಭವ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಸುಮಧುರ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಖ್ಯಾತ ಗಾಯಕ ಸಂಜಿತ್ ಹೆಗ್ಡೆ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ಅತ್ಯಂತ ಆಕರ್ಷಕವಾಗಿ ಈ ಹಾಡು ಹೊರಹೊಮ್ಮಿದೆ. ಕೇಳುಗರನ್ನು ತಕ್ಷಣವೇ ಆಕರ್ಷಿಸುವ ಗುಣ ಈ ಹಾಡಿಗೆ ಇದೆ.

ಶಂಕರ್ ಗುರು ನಿರ್ದೇಶನದ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದಲ್ಲಿ ಸಾಹಸ, ಹಾಸ್ಯ ಹಾಗೂ ಕೌಟುಂಬಿಕ ಮನರಂಜನೆಯ ಅಂಶಗಳು ಇರಲಿವೆ. ಕ್ರಿಸ್‌ಮಸ್ ಪ್ರಯುಕ್ತ ಡಿಸೆಂಬರ್ 24ರಂದು ಈ ಸಿನಿಮಾವನ್ನು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಈ ಹಾಡಿನ ಮೂಲಕ ಸದ್ದು ಮಾಡಿರುವ ಚಿತ್ರತಂಡ, ರಿಲೀಸ್ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಚಿತ್ರದ ಮಾಸ್ ಸಾಂಗ್​ಗಳನ್ನು ಅನಾವರಣ ಮಾಡಲು ಸಿದ್ಧತೆ ನಡೆಸಿದೆ.

ಪುಟ್ಟಮಲ್ಲಿ ಹಾಡು:

Puttamalli Song | Anna from Mexico | Daali Dhananjaya | Reeshma | Sanjith Hegde | Vasuki Vaibhav

‘ದಿ ರಾಯಲ ಸ್ಟುಡಿಯೋಸ್’ ಹಾಗೂ ‘ಐರಾ ಫಿಲ್ಮ್ಸ್’ ಬ್ಯಾನರ್ ಮೂಲಕ ಚನ್ನರಾಜ್ ಬಿ. ಹಟ್ಟಿಹೊಳಿ, ಮೃಣಾಲ್, ಸತ್ಯ ರಾಯಲ ಹಾಗೂ ಜಾನ್ವಿ ರಾಯಲ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಧನಂಜಯ ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದಾರೆ. ಉಮಾಶ್ರೀ, ರಂಗಾಯಣ ರಘು, ನಾಗಭೂಷಣ್, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು, ಹುಲಿ ಕಾರ್ತಿಕ್ ಅವರು ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ‘ಖಾಕಿ’ ಧರಿಸಿದರೆ ಜೋಶ್ ಬರುತ್ತೆ: ಪೊಲೀಸರ ಬಗ್ಗೆ ಡಾಲಿ ಧನಂಜಯ್ ಮಾತು

‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾಗೆ ಎ.ಜೆ. ಶೆಟ್ಟಿ ಹಾಗೂ ಎಸ್.ಕೆ. ರಾವ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಪ್ರಶಾಂತ್ ರಾಜಪ್ಪ ಅವರು ಸಂಭಾಷಣೆ ಬರೆದಿದ್ದಾರೆ. ಅಜಯ್ ಕುಮಾರ್ ಮತ್ತು ನಿರಂಜನ್ ದೇವರಮನೆ ಅವರ ಸಂಕಲನ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us