ಆಟೋದಲ್ಲಿ ‘ಪುಟ್ಟಮಲ್ಲಿ’ ಹಾಡಿಗೆ ಡ್ಯಾನ್ಸ್ ಮಾಡಿದ ಡಾಲಿ ಧನಂಜಯ್, ವಾಸುಕಿ ಹಾಗೂ ರೀಷ್ಮಾ

'ಅಣ್ಣ ಇನ್ ಮೆಕ್ಸಿಕೋ' ಚಿತ್ರದ 'ಪುಟ್ಟಮಲ್ಲಿ' ಹಾಡು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಹಾಡಿನ ಪ್ರಚಾರಕ್ಕಾಗಿ ಡಾಲಿ ಧನಂಜಯ್, ವಾಸುಕಿ ವೈಭವ್ ಹಾಗೂ ರೀಷ್ಮಾ ನಾಣಯ್ಯ ಆಟೋರಿಕ್ಷಾದಲ್ಲಿ ಸವಾರಿ ಮಾಡುತ್ತಾ ಸಖತ್ ಮಜಾ ಮಾಡಿದ್ದಾರೆ. ಈ ವಿಭಿನ್ನ ಹಾಗೂ ಕ್ರಿಯೇಟಿವ್ ಪ್ರಚಾರದ ವೀಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆಟೋದಲ್ಲಿ ‘ಪುಟ್ಟಮಲ್ಲಿ’ ಹಾಡಿಗೆ ಡ್ಯಾನ್ಸ್ ಮಾಡಿದ ಡಾಲಿ ಧನಂಜಯ್, ವಾಸುಕಿ ಹಾಗೂ ರೀಷ್ಮಾ
ಡಾಲಿ, ರೀಷ್ಮಾ, ವಾಸುಕಿ

Updated on: Sep 29, 2026 | 9:01 AM

ಮುಖ್ಯಾಂಶಗಳು

  • ಆಟೋದಲ್ಲಿ 'ಪುಟ್ಟಮಲ್ಲಿ' ರೈಡ್
  • ಡಾಲಿ-ರೀಷ್ಮಾ-ವಾಸುಕಿ ಮಜಬೂತ್ ಜುಗಲ್ಬಂದಿ
  • ಸೋಶಿಯಲ್ ಮೀಡಿಯಾದಲ್ಲಿ 'ಅಣ್ಣ ಇನ್ ಮೆಕ್ಸಿಕೋ' ಹವಾ

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಇನ್ ಮೆಕ್ಸಿಕೋ’ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಈ ಸಿನಿಮಾದ ‘ಪುಟ್ಟಮಲ್ಲಿ’ ಎನ್ನುವ ರೊಮ್ಯಾಂಟಿಕ್ ಹಾಡು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾ ಹಾಗೂಡ ಹಾಡಿನ ಪ್ರಮೋಷನ್​ಗೆ ಚಿತ್ರತಂಡ ವಿಭಿನ್ನವಾದ ಹಾದಿ ಹಿಡಿದಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಈ ಹಿಂದೆ ಡಾಲಿ ಧನಂಜಯ್ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಕಾರಿನಲ್ಲಿ ಡ್ರೈವ್ ಹೋಗುತ್ತಾ ಈ ಹಾಡನ್ನು ಎಂಜಾಯ್ ಮಾಡಿದ್ದರು. ಇದನ್ನು ನೋಡಿ ಚಿತ್ರದ ನಾಯಕಿ ರೀಷ್ಮಾ ನಾಣಯ್ಯ ‘ಪುಟ್ಟಮಲ್ಲಿನೇ ಬಿಟ್ಟು ಡ್ರೈವ್‌ಗೆ ಹೋಗಿದ್ದೀರಾ?’ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಡಾಲಿ ಧನಂಜಯ್ ಹಾಗೂ ವಾಸುಕಿ ವೈಭವ್ ಈ ಬಾರಿ ಹೆಚ್ಚು ‘ಮಾಸ್’ ಆಗಿ ಆಟೋರಿಕ್ಷಾದಲ್ಲಿ ರೀಷ್ಮಾ ಅವರನ್ನು ಪಿಕಪ್ ಮಾಡಿಕೊಂಡು ರೈಡ್ ಹೊರಟಿದ್ದಾರೆ.

ಆಟೋ ರೈಡ್ ವೇಳೆ ಮೂವರೂ ಸೇರಿ ‘ಪುಟ್ಟಮಲ್ಲಿ’ ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕುತ್ತಾ, ಸಖತ್ ಮಜಾ ಮಾಡಿದ್ದಾರೆ. ‘ವೋಲ್ಯೂಮ್ ಅಪ್, ವೈಬ್ ಮ್ಯಾಚ್ಡ್’ ಮತ್ತು ‘ಮೀಟರ್ ಡೌನ್’ ಎಂಬ ಕಾನ್ಸೆಪ್ಟ್‌ನಲ್ಲಿ ಮೂವರ ಜುಗಲ್ಬಂದಿ ವೀಕ್ಷಕರನ್ನು ರಂಜಿಸುತ್ತಿದೆ. ಈ ತಮಾಷೆಯ ಹಾಗೂ ಕ್ರಿಯೇಟಿವ್ ಪ್ರಚಾರದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್​ಗೆ ಮತ್ತೊಂದು ಪ್ರಕರಣದಲ್ಲಿ ಸಂಕಷ್ಟ: ದಾಖಲಾಯ್ತು ದೂರು

ಯೂಟ್ಯೂಬ್‌ನಲ್ಲಿ ಈ ಹಾಡು ಈಗಾಗಲೇ 4.7 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 35 ಸಾವಿರಕ್ಕೂ ಹೆಚ್ಚು ರೀಲ್ಸ್‌ನೊಂದಿಗೆ ಸಖತ್ ಟ್ರೆಂಡಿಂಗ್‌ನಲ್ಲಿದೆ. ವಾಸುಕಿ ವೈಭವ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡು ಸಂಗೀತ ಪ್ರಿಯರ ನೆಚ್ಚಿನ ಸಾಲಿಗೆ ಸೇರಿದೆ. ‘ಅಣ್ಣ ಇನ್ ಮೆಕ್ಸಿಕೋ’ ಸಿನಿಮಾ ಡಿಸೆಂಬರ್ 24ರಂದು ಬೆಳ್ಳಿಪರದೆಯ ಮೇಲೆ ಬರಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:01 am, Tue, 29 September 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us