ಬರ್ತ್​ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ ಡಾಲಿ ಧನಂಜಯ್; ಕಾರಣ ಇಲ್ಲಿದೆ

Daali Dhananjaya Birthday: ಖ್ಯಾತ ಕನ್ನಡ ನಟ ಡಾಲಿ ಧನಂಜಯ್ ಅವರು ತಮ್ಮ 39ನೇ ಹುಟ್ಟುಹಬ್ಬವನ್ನು ಈ ಬಾರಿ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಅವರು ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳ ನಿರಾಶೆಗೆ ಕಾರಣವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ

ಬರ್ತ್​ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ ಡಾಲಿ ಧನಂಜಯ್; ಕಾರಣ ಇಲ್ಲಿದೆ
ಧನಂಜಯ್

Updated on: Aug 21, 2025 | 11:03 AM

ಸೆಲೆಬ್ರಿಟಿಗಳ ಬರ್ತ್​ಡೇ ಎಂದರೆ ಫ್ಯಾನ್ಸ್ ಹಬ್ಬದ ರೀತಿ ಸಂಭ್ರಮಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ಗಳನ್ನು ಹಾಕುತ್ತಾರೆ. ನೆಚ್ಚಿನ ನಟನ ಮನೆ ಮುಂದೆ ರಾತ್ರಿಯೇ ಹಾಜರಿ ಹಾಕಿ, ಕೇಕ್ ಕತ್ತರಿಸಿ, ನಟನಿಗೆ ಹೂವಿನ ಹಾರ ಹಾಕಿ ಸಂಭ್ರಮಿಸುತ್ತಾರೆ. ಆದರೆ, ಕೆಲವೊಮ್ಮೆ ವೈಯಕ್ತಿಕ ಕಾರಣಗಳಿಗೆ ಸೆಲೆಬ್ರಿಟಿಗಳು ಬರ್ತ್​ಡೇ ಆಚರಿಸಿಕೊಳ್ಳೋದಿಲ್ಲ. ನಟ ಡಾಲಿ ಧನಂಜಯ್ (Daali Dhananjay) ಕೂಡ ಈಗ ಇದೇ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.

ಕನ್ನಡದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಧನಂಜಯ್​ಗೆ ಇದೆ. ಅವರು ‘ಟಗರು’ ಸಿನಿಮಾದಲ್ಲಿ ‘ಡಾಲಿ’ ಪಾತ್ರ ಮಾಡಿ ಅದೇ ಹೆಸರಲ್ಲಿ ಫೇಮಸ್ ಆದರು. ಆಗಸ್ಟ್ 23ರಂದು ಅವರು 39ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಆದರೆ, ಈ ಬಾರಿ ಅವರು ಅಭಿಮಾನಿಗಳಿಗೆ ಸಿಗುತ್ತಿಲ್ಲ. ಈ ವಿಚಾರದ ಬಗ್ಗೆ ಅವರು ಕೆಲವೇ ದಿನ ಮೊದಲ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ
ಬಾಲಿವುಡ್​ ಮೇಲೆ ಮುನಿಸಿಕೊಂಡ ರಾಜಮೌಳಿ? ಕಾರಣ ಏನು?
ಸ್ವರಾ​ಗೆ ಸಂಸದೆ ಮೇಲೆ ಕ್ರಶ್; ಲೈಂಗಿಕ ಆಸಕ್ತಿ ರಿವೀಲ್ ಮಾಡಿ ಟ್ರೋಲ್
ಒಂದೇ ವಾರಕ್ಕೆ ಸುಸ್ತಾದ ‘ಕೂಲಿ’; ಹೀನಾಯ ಕಲೆಕ್ಷನ್​​​ ಆರಂಭಿಸಿದ ಸಿನಿಮಾ
‘ಕ್ವಾಟ್ಲೆ ಕಿಚನ್’ ಶೋ​ನಿಂದ ದಿಢೀರ್​ ಹೊರ ನಡೆದ ಕೆಂಪಮ್ಮ; ಇಲ್ಲಿದೆ ವಿವರ

ಇದನ್ನೂ ಓದಿ: ನಾನು ಡಾಲಿ ಧನಂಜಯ್ ಅಭಿಮಾನಿ ಎಂದ ಸಿದ್ಧಾರ್ಥ್, ಕೊಟ್ಟರು ಕಾರಣ

‘ನನ್ನ ಪ್ರೀತಿಯ ಅಭಿಮಾನಿಗಳೇ, ಆಗಸ್ಟ್ 23ರಂದು ನನ್ನ ಬರ್ತ್​ಡೇ. ಪ್ರತಿ ವರ್ಷ ನನ್ನ ಜನ್ಮದಿನ ಅಂದರೆ ಅದು ನನ್ನ ಹಬ್ಬಕ್ಕಿಂತ ಹೆಚ್ಚು ನಿಮ್ಮ ಹಬ್ಬ. ನಿಮ್ಮ ಪ್ರೀತಿ, ನಿಮ್ಮ ಎನರ್ಜಿ, ನಿಮ್ಮ ಸಂಭ್ರಮ ಅದೇ ನನ್ನ ಶಕ್ತಿ. ಆದರೆ ಈ ಬಾರಿ ನಾನು ಕೆಲಸದ ನಿಮಿತ್ತ ಹೊರಗಡೆ ಹೋಗುತ್ತಿದ್ದೇನೆ. ಈ ಸಂಭ್ರಮಾಚರಣೆಗೆ ನಿಮ್ಮ ಜೊತೆ ಇರಲಾಗದಿದ್ದರೂ, ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನೊಡನೆ ಇರುತ್ತದೆ ಎನ್ನುವ ದೃಢ ನಂಬಿಕೆಯಿದೆ. ಮುಂದಿನ ಸಲ ಇನ್ನೂ ಡಬ್ಬಲ್ ಎನರ್ಜಿ, ಡಬ್ಬಲ್ ಸಂಭ್ರಮ, ಜೊತೆಗೆ ಆಚರಿಸೋಣ. ಲವ್​ ಯೂ ಆಲ್, ಡಾಲಿ’ ಎಂದು ಬರೆದುಕೊಂಡಿದ್ದಾರೆ.

ಡಾಲಿ ಧನಂಜಯ್​ಗೆ ವಿವಾಹ ಆದ ಬಳಿಕ ಇದು ಮೊದಲ ಜನ್ಮದಿನ. ಹೀಗಾಗಿ, ಪತ್ನಿ ಧನ್ಯಾತ ಜೊತೆ ಅವರು ಎಲ್ಲಾದರೂ ಸುತ್ತಾಡಲು ಹೋಗಲು ಪ್ಲ್ಯಾನ್ ಮಾಡಿರಬಹುದು ಎನ್ನಲಾಗುತ್ತಿದೆ. ಅಲ್ಲದೆ, ಈ ಬಾರಿ ಆರ್​ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣ ಎಲ್ಲರಿಗೂ ಭಯ ತರಿಸಿದೆ. ಈ ಕಾರಣದಿಂದಲೇ ಅನೇಕರು ಅಭಿಮಾನಿಗಳನ್ನು ಸೇರಿಸಲು ಹೆದರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:01 am, Thu, 21 August 25