ನಟ ದರ್ಶನ್ ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅವರು ಅರೆಸ್ಟ್ ಆಗಿದ್ದು, ಅವರ ವೃತ್ತಿ ಬದುಕಿಗೆ ಕಪ್ಪು ಚುಕ್ಕಿ ಆಗಿದೆ. ಅವರ ವಿರುದ್ಧ ಪ್ರಬಲ ಸಾಕ್ಷಿಗಳು ಸಿಕ್ಕಿವೆ ಎನ್ನಲಾಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಒಬ್ಬರು ಒಂದೊಂದು ರೀತಿಯ ಅಭಿಪ್ರಾಯ ತಿಳಿಸುತ್ತಿದ್ದಾರೆ. ಬಿಗ್ ಬಾಸ್ಗೆ ಅತಿಥಿಯಾಗಿ ಬಂದು ಖ್ಯಾತಿ ಪಡೆದಿರೋ ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಅವರು ದರ್ಶನ್ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.
‘14-15 ವರ್ಷಗಳಲ್ಲಿ ಅವರು ಒಂದಲ್ಲಾ ಒಂದು ವಿವಾದ ಮಾಡಿಕೊಳ್ಳುತ್ತಿದ್ದಾರೆ. ಕೋಪ ಅನ್ನೋದು ಆಯುಧವೂ ಹೌದು, ದೌರ್ಬಲ್ಯವೂ ಹೌದು. ಆತುರಗಾರನಿಗೆ ಬುದ್ಧಿಮಟ್ಟ. ದರ್ಶನ್ ಅವರು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯಾರ ತಪ್ಪು ಯಾರು ಸರಿ ಎಂಬುದನ್ನು ನಾವು ಹೇಳಬಾರದು. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಬರುತ್ತದೆ’ ಎಂದಿದ್ದಾರೆ ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ.
ದರ್ಶನ್ ಅವರ ಜನ್ಮದಿನ, ರಾಶಿ-ನಕ್ಷತ್ರ ಉಲ್ಲೇಖಿಸಿ ಮುಂದೇನಾಗಬಹುದು ಎಂಬುದನ್ನು ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ವಿವರಿಸಿದ್ದಾರೆ. ‘2011ರಿಂದ ಗುರುದಶ ಶುರುವಾಗಿದೆ. ಅವರು ಆಗ ದೊಡ್ಡ ಅಪವಾದ ಅನುಭವಿಸಿದ್ದರು. ಹಲವು ದಿನ ಜೈಲಿನಲ್ಲಿದ್ದರು. ಹೊರಗೆ ಇರೋ ದರ್ಶನ್ಗೂ ಆಂತರ್ಯದಲ್ಲಿರೋ ದರ್ಶನ್ಗೂ ಸಾಕಷ್ಟು ವ್ಯತ್ಯಾಸ ಇದೆ. ಗುರುದಶ ಶುರುವಾದಾಗಿನಿಂದ ಅವರು ಮೇಲೆ ಹೋಗೋದು ಪಾತಾಳಕ್ಕೆ ಬೀಳೋದು ಆಗುತ್ತಿದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ದರ್ಶನ್ ಚಿತ್ರರಂಗದ ಆಸ್ತಿ ಮತ್ತು ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಬಹಳ ದೊಡ್ಡದು: ಹಂಸಲೇಖ
‘2013ರ ನಂತರ ಬಿಡುಗಡೆ ಆದ ಯಾವ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. 2023 ನವೆಂಬರ್ನಿಂದ 2024ರ ಅಕ್ಟೋಬರ್ವರೆಗೆ ಕುಜ ಭುಕ್ತಿ ಇದೆ. ಕುಜ ತುಂಬಾ ಕೋಪದವನು. ಕಾರಾಗೃಹ ವಾಸವನ್ನು ಕೊಡ್ತಾನೆ. ಅಲ್ಲಿಯೇ ಕೇತು ಬೇರೆ ಇದ್ದಾನೆ. ಹೀಗಾಗಿ ಅಪನಿಂದನೆ ಆಗುತ್ತದೆ. ತುಂಬಾನೇ ಜಾಗೃತಿಯಿಂದ ಇರಬೇಕಿತ್ತು. ದರ್ಶನ್ ಅರೆಸ್ಟ್ ಆದ ದಿನ ನೋಡೋದಾದರೆ ಮಂಗಳವಾರ ಅವರು ಅರೆಸ್ಟ್ ಆಗಿದ್ದಾರೆ. ಹುಟ್ಟಿದಾಗಲೂ, ಅರೆಸ್ಟ್ ಆದಾಗಲೂ ಗುರು ಇದ್ದಾನೆ. 2024ರ ಅಕ್ಟೋಬರ್ವರೆಗೂ ಅವರಿಗೆ ಕಠಿಣ ಇದೆ. ಅಕ್ಟೋಬರ್ ನಂತರ ಅವರು ಜೀವನ ಬದಲಾಗುತ್ತದೆ. ದರ್ಶನ್ಗೆ ಅಕ್ಟೋಬರ್ 28ವರೆಗೂ ಜಾಮೀನು ಅಸಾಧ್ಯ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.