ದರ್ಶನ್ ಮಧ್ಯಂತರ ಜಾಮೀನಿಗೆ ಆಕ್ಷೇಪಣೆ: ಕಡತ ಸಿದ್ಧ, ಅಂತಿಮ ಒಪ್ಪಿಗೆಗೆ ನಿರೀಕ್ಷೆ

ದರ್ಶನ್ ರವರಿಗೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಆದರೆ, ಪೊಲೀಸರು ಈ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧರಾಗಿದ್ದಾರೆ. ಅನಾರೋಗ್ಯದ ಆಧಾರದ ಮೇಲೆ ದರ್ಶನ್ ಜಾಮೀನು ಪಡೆದಿದ್ದಾರೆ. ಪೊಲೀಸರು ಕಾನೂನು ತಜ್ಞರ ಸಲಹೆಯೊಂದಿಗೆ ಕಡತಗಳನ್ನು ಸಿದ್ಧಪಡಿಸಿದ್ದಾರೆ ಮತ್ತು ಗೃಹ ಇಲಾಖೆಯ ಅನುಮತಿಗಾಗಿ ಕಾಯುತ್ತಿದ್ದಾರೆ.

ದರ್ಶನ್ ಮಧ್ಯಂತರ ಜಾಮೀನಿಗೆ ಆಕ್ಷೇಪಣೆ: ಕಡತ ಸಿದ್ಧ, ಅಂತಿಮ ಒಪ್ಪಿಗೆಗೆ ನಿರೀಕ್ಷೆ
Follow us
|

Updated on:Nov 05, 2024 | 1:43 PM

ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್​ಗೆ ರಾಜ್ಯ ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅನಾರೋಗ್ಯದ ಕಾರಣ ನೀಡಿ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದಾರೆ. ಆದರೆ ಇದೀಗ ದರ್ಶನ್​ರ ಮಧ್ಯಂತರ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿ ಮೇಲ್ಮನವಿ ಸಲ್ಲಿಸಲು ಪೊಲೀಸರು ಸಿದ್ಧವಾಗಿದ್ದು, ಈ ಬಗ್ಗೆ ಕಾನೂನು ತಜ್ಞರ ಸಲಹೆಗಳನ್ನು ಪಡೆದಿದ್ದಾರೆ. ಕಾನೂನು ತಜ್ಞರ ಸಲಹೆ ಮೇರೆಗೆ ಸುಪ್ರೀಂಕೋರ್ಟ್​ನಲ್ಲಿ ಮಧ್ಯಂತರ ಜಾಮೀನಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿದ್ಧವಾಗಿದ್ದು, ಗೃಹ ಇಲಾಖೆಯ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.

ದರ್ಶನ್​ಗೆ ದೊರೆತಿರುವ ಮಧ್ಯಂತರ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಕಡತಗಳನ್ನು ಪೊಲೀಸ್ ಇಲಾಖೆ ಸಿದ್ಧಪಡಿಸಿಕೊಂಡಿದೆ. ಕಾನೂನು ತಜ್ಞರ ಸಲಹೆ ಮೇರೆಗೆ ಈ ಕಡತಗಳನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು, ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸುವ ಮುಂಚೆ ಗೃಹ ಇಲಾಖೆಯ ಒಪ್ಪಿಗೆ ಕೇಳಲಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಗೃಹ ಇಲಾಖೆಗೆ ಪತ್ರ ಬರೆದಿದ್ದು, ಇಲಾಖೆಯ ಒಪ್ಪಿಗೆ ಕೇಳಿದ್ದಾರೆ. ಒಂದೊಮ್ಮೆ ಗೃಹ ಇಲಾಖೆ ಒಪ್ಪಿಗೆ ಸೂಚಿಸಿದರೆ ಕೂಡಲೇ ಸುಪ್ರೀಂ ಕೋರ್ಟ್​ನಲ್ಲಿ ಮಧ್ಯಂತರ ಜಾಮೀನು ರದ್ದತಿಗೆ ಮೇಲ್ಮನವಿ ಸಲ್ಲಿಸಲಾಗುತ್ತದೆ.

ಕೊಲೆ ಆರೋಪಿ ದರ್ಶನ್​ ಸುಮಾರು ಐದು ತಿಂಗಳು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದರು, ಆದರೆ ಇತ್ತೀಚೆಗೆ ಅವರಿಗೆ ಬೆನ್ನು ನೋವು ಹೆಚ್ಚಾಗಿರುವ ಕಾರಣ ಚಿಕಿತ್ಸೆಯ ಅಗತ್ಯವಿದೆಯೆಂದು ನ್ಯಾಯಾಲಯದಲ್ಲಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು. ಅಂತೆಯೇ ತುರ್ತಾಗಿ ಚಿಕಿತ್ಸೆ ಅಗತ್ಯವಿದೆಯೆಂದು ಮನಗಂಡ ಕರ್ನಾಟಕ ರಾಜ್ಯ ಹೈಕೋರ್ಟ್, ದರ್ಶನ್​ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಕೆಲವು ಷರತ್ತುಗಳನ್ನು ಸಹ ವಿಧಿಸಿತ್ತು.

ಇದನ್ನೂ ಓದಿ:ಆಸ್ಪತ್ರೆಗೆ ದಾಖಲಾಗಿರುವ ದರ್ಶನ್ ಮೇಲೆ ಪೊಲೀಸರ ನಿಗಾ

ಜಾಮೀನು ದೊರೆತ ಬಳಿಕ ದರ್ಶನ್, ಬೆಂಗಳೂರಿನ ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಹಲವು ಪರೀಕ್ಷೆಗಳನ್ನು ಮಾಡಿದ್ದು, ಕುಟುಂಬದೊಂದಿಗೆ ಚರ್ಚಿಸಿ ಚಿಕಿತ್ಸೆ ಪ್ರಾರಂಭಿಸಿದ್ದಾರೆ. ದರ್ಶನ್​ಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಇತರೆ ಕೆಲವು ಚಿಕಿತ್ಸೆಗಳನ್ನು ಸಹ ಪ್ರಾರಂಭ ಮಾಡಲಾಗುತ್ತಿದೆ. ಇದರ ನಡುವೆ ಈಗ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಕಡತ ತಯಾರಿಸಲಾಗಿದ್ದು, ದರ್ಶನ್​ಗೆ ಆತಂಕ ಶುರುವಾಗಿದೆ. ಆರೋಗ್ಯ ಮೂಲಭೂತ ಹಕ್ಕು ಎಂದು ಪರಿಗಣಿತವಾಗಿದ್ದು, ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಲಾಗುವ ಮೇಲ್ಮನವಿ ಮಾನ್ಯವಾಗುತ್ತದೆಯೇ ಎಂಬ ಅನುಮಾನವೂ ಸಹ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:39 pm, Tue, 5 November 24

ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕೋಲಾರದಲ್ಲಿ ಅಭಿಮಾನಿಗಳಿಂದ ಸಂಭ್ರಮ
ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕೋಲಾರದಲ್ಲಿ ಅಭಿಮಾನಿಗಳಿಂದ ಸಂಭ್ರಮ
ಅಭಿಮಾನಿ ಮತ್ತು ಕಾರ್ಯಕರ್ತರು ತಂದ ಕೇಕನ್ನು ಕಟ್ ಮಾಡಿದ ಬಿವೈ ವಿಜಯೇಂದ್ರ
ಅಭಿಮಾನಿ ಮತ್ತು ಕಾರ್ಯಕರ್ತರು ತಂದ ಕೇಕನ್ನು ಕಟ್ ಮಾಡಿದ ಬಿವೈ ವಿಜಯೇಂದ್ರ
ಪ್ರಬಲ ಸುದ್ದಿಸಂಸ್ಥೆಯಾಗಿರುವ ಟಿವಿ9 ನೀಡುವ ಪ್ರಚಾರವೇ ನನಗೆ ಸಾಕು: ದೇವೇಗೌಡ
ಪ್ರಬಲ ಸುದ್ದಿಸಂಸ್ಥೆಯಾಗಿರುವ ಟಿವಿ9 ನೀಡುವ ಪ್ರಚಾರವೇ ನನಗೆ ಸಾಕು: ದೇವೇಗೌಡ
ಎಲ್ಲ ತನಿಖಾ ಸಂಸ್ಥೆಗಳು ಸರ್ಕಾರಗಳ ಅಧೀನದಲ್ಲಿರುತ್ತವೆ: ಸ್ನೇಹಮಯಿ ಕೃಷ್ಣ
ಎಲ್ಲ ತನಿಖಾ ಸಂಸ್ಥೆಗಳು ಸರ್ಕಾರಗಳ ಅಧೀನದಲ್ಲಿರುತ್ತವೆ: ಸ್ನೇಹಮಯಿ ಕೃಷ್ಣ
ಕಾಂಗ್ರೆಸ್​ಗೆ ಮತನೀಡಿ ಅಧಿಕಾರಕ್ಕೆ ತಂದ ಹಿಂದೂಗಳು ಸೈತಾನರೇ? ಕರಂದ್ಲಾಜೆ
ಕಾಂಗ್ರೆಸ್​ಗೆ ಮತನೀಡಿ ಅಧಿಕಾರಕ್ಕೆ ತಂದ ಹಿಂದೂಗಳು ಸೈತಾನರೇ? ಕರಂದ್ಲಾಜೆ
‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?
ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?