ದರ್ಶನ್ ಮೇಕಪ್ ಆರ್ಟಿಸ್ಟ್ ಹೊನ್ನೆ ಗೌಡ ನಿಧನ; ಸಂತಾಪ ಸೂಚಿಸಿದ ಡಿ ಬಾಸ್

ದರ್ಶನ್ ಅವರ ಪರ್ಸನಲ್ ಮೇಕಪ್ ಆರ್ಟಿಸ್ಟ್ ಆಗಿ ಹೊನ್ನೆ ಗೌಡ ಅವರು ಕೆಲಸ ಮಾಡುತ್ತಿದ್ದರು. ಇಂದು (ಮೇ 20) ಅವರು ನಿಧನರಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರು ಪೋಸ್ಟ್ ಮಾಡಿದ್ದಾರೆ. ಡಿ ಬಾಸ್ ಫ್ಯಾನ್ಸ್ ಕೂಡ ಹೊನ್ನೆ ಗೌಡ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ದರ್ಶನ್ ಮೇಕಪ್ ಆರ್ಟಿಸ್ಟ್ ಹೊನ್ನೆ ಗೌಡ ನಿಧನ; ಸಂತಾಪ ಸೂಚಿಸಿದ ಡಿ ಬಾಸ್
Darshan, Honne Gowda

Updated on: May 20, 2025 | 3:10 PM

ನಟ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Darshan) ಅವರ ಸಿನಿಮಾಗಳಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ ಹೊನ್ನೆ ಗೌಡ (Honne Gowda) ಅವರು ನಿಧನರಾಗಿದ್ದಾರೆ. ಈ ಕಹಿ ಸುದ್ದಿಯಿಂದ ದರ್ಶನ್ ಅವರಿಗೆ ನೋವಾಗಿದೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಹೊನ್ನೆ ಗೌಡರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅಲ್ಲದೇ, ಕುಟುಂಬದವರಿಗೆ ಸಂತಾಪ ಸೂಚಿಸಿದ್ದಾರೆ. ಅನೇಕ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹೊನ್ನೆ ಗೌಡ ಅವರು ಸಕ್ರಿಯವಾಗಿದ್ದರು. ಹಲವು ಸಿನಿಮಾಗಳಿಗೆ ಅವರು ಮೇಕಪ್ ಆರ್ಟಿಸ್ಟ್ (Makeup Artist) ಆಗಿ ಕೆಲಸ ಮಾಡಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ.

‘25 ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡಿದ ಪ್ರಿಯ ಮೇಕಪ್ ಆರ್ಟಿಸ್ಟ್ ಹೊನ್ನೆ ಗೌಡ್ರು ಇಂದು ಅಗಲಿದ ಸುದ್ದಿ ನಮ್ಮೆಲ್ಲರನ್ನು ಶೋಕದಲ್ಲಿ ಮುಳುಗಿಸಿದೆ. ಅವರ ಕಲೆ, ನಿಷ್ಠೆ ಮತ್ತು ನಗುಮೊಗದ ಸೇವೆಯನ್ನು ಎಂದಿಗೂ ಮರೆಯಲಾಗದು. ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ನೋವನ್ನು ನುಂಗುವ ಶಕ್ತಿ ನೀಡಲಿ. ಹೊನ್ನೆ ಗೌಡರ ಆತ್ಮಕ್ಕೆ ಶಾಂತಿ ದೊರೆಯಲಿ. ಓಂ ಶಾಂತಿ’ ಎಂದು ನಟ ದರ್ಶನ್ ಪೋಸ್ಟ್ ಮಾಡಿದ್ದಾರೆ.

ದರ್ಶನ್ ಅವರ ಬಹುತೇಕ ಸಿನಿಮಾಗಳಿಗೆ ಹೊನ್ನೆ ಗೌಡ ಅವರೇ ಮೇಕಪ್ ಆರ್ಟಿಸ್ಟ್ ಆಗಿದ್ದರು. ಆ ದಿನಗಳನ್ನು ದರ್ಶನ್ ಈಗ ನೆನಪಿಸಿಕೊಂಡಿದ್ದಾರೆ. ಹೊನ್ನೆ ಗೌಡ ಅವರ ಕೆಲಸದ ವೈಖರಿಯನ್ನು ದರ್ಶನ್ ಅವರು ಸ್ಮರಿಸಿದ್ದಾರೆ. ಕಮೆಂಟ್ ಮಾಡಿದ ಅಭಿಮಾನಿಗಳು ಕೂಡ ಹೊನ್ನೆ ಗೌಡ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.