‘ಕಾಟೇರ’ ಚಿತ್ರದ ಟಿಕೆಟ್​ ಬುಕಿಂಗ್​ಗೆ ಭರ್ಜರಿ ರೆಸ್ಪಾನ್ಸ್​; 300ಕ್ಕೂ ಅಧಿಕ ಶೋ ಸೋಲ್ಡ್​ ಔಟ್​

|

Updated on: Dec 28, 2023 | 11:10 AM

‘ಕಾಟೇರ’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಹಾಡುಗಳು ಸದ್ದು ಮಾಡಿವೆ. ದರ್ಶನ್​ ಅವರ ಮಾಸ್​ ಅವತಾರ ನೋಡಲು ಫ್ಯಾನ್ಸ್​ ಸಜ್ಜಾಗಿದ್ದಾರೆ. ಕೆಲವು ಕಡೆಗಳಲ್ಲಿ ಟಿಕೆಟ್​ ಬೆಲೆ ಸಾವಿರ ರೂಪಾಯಿ ಇದ್ದರೂ ಕೂಡ ಅಭಿಮಾನಿಗಳು ಮುಗಿಬಿದ್ದು ಬುಕ್​ ಮಾಡುತ್ತಿದ್ದಾರೆ. ಹಲವು ಶೋಗಳು ಸೋಲ್ಡ್​ ಔಟ್​ ಆಗಿವೆ.

‘ಕಾಟೇರ’ ಚಿತ್ರದ ಟಿಕೆಟ್​ ಬುಕಿಂಗ್​ಗೆ ಭರ್ಜರಿ ರೆಸ್ಪಾನ್ಸ್​; 300ಕ್ಕೂ ಅಧಿಕ ಶೋ ಸೋಲ್ಡ್​ ಔಟ್​
ದರ್ಶನ್​
Follow us on

ನಟ ದರ್ಶನ್​ (Darshan) ಅಭಿನಯದ ‘ಕಾಟೇರ’ ಸಿನಿಮಾ ಡಿಸೆಂಬರ್​ 29ರಂದು ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಟಿಕೆಟ್​ ಬುಕಿಂಗ್​ ಓಪನ್​ ಆಯಿತು. ಅಭಿಮಾನಿಗಳು ಮುಗಿಬಿದ್ದು ಟಿಕೆಟ್​ ಬುಕ್​ ಮಾಡುತ್ತಿದ್ದಾರೆ. ರಾಜ್ಯದ್ಯಂತ 300ಕ್ಕೂ ಅಧಿಕ ಶೋಗಳು ಸೋಲ್ಡ್​ ಔಟ್​ ಆಗಿವೆ. ಆ ಮೂಲಕ ಮೊದಲ ದಿನ ‘ಕಾಟೇರ’ (Kaatera) ಸಿನಿಮಾದ ಅಬ್ಬರ ಜೋರಾಗಿ ಇರಲಿದೆ ಎಂಬುದು ಖಚಿತವಾಗಿದೆ. ಈ ಸಿನಿಮಾಗೆ ತರುಣ್​ ಸುಧೀರ್​ ನಿರ್ದೇಶನ ಮಾಡಿದ್ದಾರೆ. ರಾಕ್​ಲೈನ್​ ವೆಂಕಟೇಶ್​ ಬಂಡವಾಳ ಹೂಡಿದ್ದಾರೆ.

ಟ್ರೇಲರ್​ ಮೂಲಕ ‘ಕಾಟೇರ’ ಸಿನಿಮಾ ಗಮನ ಸೆಳೆದಿದೆ. ಕಥೆಯ ಬಗ್ಗೆ ಪ್ರೇಕ್ಷಕರಲ್ಲಿ ಭರ್ಜರಿ ಕುತೂಹಲ ಇದೆ. ‘ರಾಬರ್ಟ್​’ ಬಳಿಕ ತರುಣ್​ ಸುಧೀರ್​ ಮತ್ತು ದರ್ಶನ್​ ಅವರು ಮತ್ತೊಮ್ಮೆ ಕೈ ಜೋಡಿಸಿರುವುದರಿಂದ ‘ಕಾಟೇರ’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಹಾಡುಗಳು ಸದ್ದು ಮಾಡಿವೆ. ದರ್ಶನ್​ ಅವರ ಮಾಸ್​ ಅವತಾರ ನೋಡಲು ಫ್ಯಾನ್ಸ್​ ಸಜ್ಜಾಗಿದ್ದಾರೆ.

ಇದನ್ನೂ ಓದಿ: ‘ಕಾಟೇರ’ ವೇದಿಕೆಯಲ್ಲಿ ರೈತರ ಪರ ದನಿ ಎತ್ತಿದ ದರ್ಶನ್

ಗುರುವಾರ (ಡಿಸೆಂಬರ್ 28) ಮಧ್ಯರಾತ್ರಿಯಿಂದಲೇ ‘ಕಾಟೇರ’ ಶೋಗಳು ಆರಂಭ ಆಗುತ್ತಿವೆ. ಅದ್ದೂರಿಯಾಗಿ ಸಿನಿಮಾಗೆ ಸ್ವಾಗತ ಕೋರಲು ಅಭಿಮಾನಿಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ದಾವಣಗೆರೆ, ಬೆಳಗಾವಿ, ಚೆನ್ನಪಟ್ಟಣ ಸೇರಿದಂತೆ ಅನೇಕ ಕಡೆಗಳಲ್ಲಿ ಹಲವು ಶೋಗಳು ಸೋಲ್ಡ್​ಔಟ್​ ಆಗಿವೆ. ಇದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ.

ಇದನ್ನೂ ಓದಿ: ಮಂಡ್ಯದ ‘ಕಾಟೇರ’ ಇವೆಂಟ್​ನಲ್ಲಿ ಸಖತ್ ಮಿಂಚಿದ ಮೇಘಾ ಶೆಟ್ಟಿ

ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್​ ಅವರು ‘ಕಾಟೇರ’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ದರ್ಶನ್​​ಗೆ ಜೋಡಿಯಾಗಿ ಅವರು ನಟಿಸಿದ್ದಾರೆ. ಹರಿಕೃಷ್ಣ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಜಗಪತಿ ಬಾಬು, ಅವಿನಾಶ್​, ಶ್ರುತಿ, ಕುಮಾರ್​ ಗೋವಿಂದ್​ ಮುಂತಾದ ಹಿರಿಯ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕೆಲವು ಕಡೆಗಳಲ್ಲಿ ಟಿಕೆಟ್​ ಬೆಲೆ ಸಾವಿರ ರೂಪಾಯಿ ಇದ್ದರೂ ಕೂಡ ಅಭಿಮಾನಿಗಳು ಮುಗಿಬಿದ್ದು ಬುಕ್​ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.