ನಟ ದರ್ಶನ್ (Darshan Thoogudeepa) ಅವರಿಗೆ ಇಂದು (ಫೆಬ್ರವರಿ 16) ಜನ್ಮದಿನದ ಸಂಭ್ರಮ. ಫೆಬ್ರವರಿ 15ರ ಮಧ್ಯರಾತ್ರಿ ಅವರ ಮನೆಯ ಎದುರು ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು. ಅವರ ಫ್ಯಾನ್ಸ್ ಆಗಮಿಸಿ ದರ್ಶನ್ಗೆ ಶುಭಾಶಯ ಕೋರಿದ್ದಾರೆ. ಅಭಿಮಾನಿಗಳ ಜೊತೆ ಸಂಭ್ರಮದಿಂದ ಬರ್ತ್ಡೇ ಆಚರಣೆ ಮಾಡಿಕೊಂಡಿದ್ದಾರೆ ದರ್ಶನ್. ಅವರ ಬರ್ತ್ಡೇ ಸಂದರ್ಭದಲ್ಲಿ ದರ್ಶನ್ ಅವರ ಮದುವೆ ಆಮಂತ್ರಣ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅವರ ಆಮಂತ್ರಣ ಪತ್ರ ಹೇಗಿತ್ತು ಎಂಬುದರ ಝಲಕ್ ಇಲ್ಲಿದೆ.
2003ರಲ್ಲಿ ಧರ್ಮಸ್ಥಳದಲ್ಲಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಮದುವೆ ಆದರು. ವಿಜಯಲಕ್ಷ್ಮಿ ಕೆಮಿಕಲ್ ಇಂಜಿನಿಯರ್ ಓದಿದ್ದಾರೆ. ದರ್ಶನ್-ವಿಜಯಲಕ್ಷ್ಮಿ ಪುತ್ರನ ಹೆಸರು ವಿನೀಶ್. ದರ್ಶನ್-ವಿಜಯಲಕ್ಷ್ಮಿ ದಾಂಪತ್ಯಕ್ಕೆ 20 ವರ್ಷಗಳು ಕಳೆದಿವೆ. ಈ ಪಯಣದಲ್ಲಿ ಈ ದಂಪತಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ.
19-05-2003ನೇ ಸೋಮವಾರ ಬೆಳಿಗ್ಗೆ 9:10ರಿಂದ 9:50ರವರೆಗಿನ ಮಿಥುನ ಲಗ್ನದಲ್ಲಿ ನಾವು ವಿವಾಹವಾಗುತ್ತಿದ್ದೇವೆ. ಧರ್ಮಸ್ಥಳದ ವಸಂತ್ ಮಹಲ್ನಲ್ಲಿ ಮದುವೆ ನಡೆಯಲಿದೆ. ಎಲ್ಲರೂ ಮದುವೆಗೆ ಆಗಮಿಸಬೇಕು ಎಂದು ಆಮಂತ್ರಣ ಕೋರುತ್ತಿದ್ದೇನೆ ಎಂಬುದಾಗಿ ಆಮಂತ್ರಣ ಪತ್ರದಲ್ಲಿ ಇದೆ.
ಇದನ್ನೂ ಓದಿ: ದರ್ಶನ್ಗೆ ಹಸು ಸಾಕುವ ಹವ್ಯಾಸ ಬಂದಿದ್ದು ಹೇಗೆ? ಎಲ್ಲವನ್ನೂ ಹೇಳಿಕೊಂಡಿದ್ದ ಚಾಲೆಂಜಿಂಗ್ ಸ್ಟಾರ್
ದರ್ಶನ್ ಅವರ ‘ಡೆವಿಲ್’ ಲುಕ್ ಸಾಕಷ್ಟು ಗಮನ ಸೆಳೆದಿದೆ. ದರ್ಶನ್ ಅವರ ಹೊಸ ಅವತಾರ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಕ್ಲೀನ್ ಶೇವ್ನಲ್ಲಿ ಅವರು ಪ್ರೇಕ್ಷಕರ ಎದುರು ಬಂದಿದ್ದಾರೆ. ಈ ಸಿನಿಮಾದ ಮೊದಲ ಗ್ಲಿಂಪ್ಸ್ ನೋಡಿದ ಎಲ್ಲರಿಗೂ ಸಿನಿಮಾ ಸೂಪರ್ ಹಿಟ್ ಆಗುವ ಮುನ್ಸೂಚನೆ ಸಿಕ್ಕಿದೆ. ಈ ಚಿತ್ರದ ಟೀಸರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಮಧ್ಯರಾತ್ರಿ ಈ ಟೀಸರ್ ರಿಲೀಸ್ ಆಗಿದೆ.
ಕಳೆದ ವರ್ಷ ಡಿಸೆಂಬರ್ ಅಂತ್ಯಕ್ಕೆ ರಿಲೀಸ್ ಆದ ‘ಕಾಟೇರ’ ದೊಡ್ಡ ಗೆಲುವು ಕಂಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿ ಭರ್ಜರಿ ವೀಕ್ಷಣೆ ಕಾಣುತ್ತಿದೆ. ಈ ಸಿನಿಮಾದ ಯಶಸ್ಸು ದರ್ಶನ್ ಬರ್ತ್ಡೇ ಖುಷಿಯನ್ನು ಹೆಚ್ಚಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ