ನಟ ದರ್ಶನ್ ಅವರು ಶುಕ್ರವಾರ (ಸೆಪ್ಟೆಂಬರ್ 27) ಜಾಮೀನು ಸಿಗುವ ನಿರೀಕ್ಷೆಯಲ್ಲಿ ಇದ್ದರು. ಆದರೆ, ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಪರ ವಕೀಲರು ಸಮಯ ಕೇಳಿದ್ದರಿಂದ ಅರ್ಜಿ ವಿಚಾರಣೆ ಸೆಪ್ಟೆಂಬರ್ 30ಕ್ಕೆ ಮುಂದೂಡಿಕೆ ಆಗಿದೆ. ಈ ಕಾರಣಕ್ಕೆ ದರ್ಶನ್‌ಗೆ ಟೆನ್ಷನ್ ಶುರುವಾಗಿದೆ. ಇದರ ಜೊತೆಗೆ ಒಂದು ವಿಚಾರದ ಬಗ್ಗೆ ಅವರಿಗೆ ಆತಂಕ ಶುರುವಾಗಿದೆ. ಇದೇ ವಿಚಾರ ಅವರ ಜಾಮೀನಿಗೆ ತೊಂದರೆ ತಂದೊಡ್ಡಬಹುದು ಎನ್ನುವ ಆತಂಕ ಶುರುವಾಗಿದೆ.
ಸೋಮವಾರ (ಸೆಪ್ಟೆಂಬರ್ 30) ಜಾಮೀನು ಸಿಗುವ ನಿರೀಕ್ಷೆಯಲ್ಲಿ ದರ್ಶನ್ ಇದ್ದಾರೆ. ಆದರೆ, ಜಾಮೀನು ಸಿಗೋದು ಅಷ್ಟು ಸುಲಭದಲ್ಲಿ ಇಲ್ಲ. ದರ್ಶನ್ ಅವರನ್ನು IT ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ. ಇದು ದರ್ಶನ್‌ಗೆ ತೊಡಕಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಹಣದ ವ್ಯವಹಾರ ಕೂಡ ನಡೆದಿದೆ. ಇದರಿಂದ ದರ್ಶನ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ. ಈ ವಿಚಾರಣೆಯ ಕೆಲ ಅಂಶಗಳು, ಕೊಲೆ ಬಳಿಕ ಹಣ ವಹಿವಾಟು ಮೇಲೆ ಸರ್ಕಾರಿ ವಕೀಲರು ಅಪಸ್ವರ ತೆಗೆಯೋ ಸಾಧ್ಯತೆ ಇದೆ.
ಕೊಲೆ ನಡೆದ ಸ್ಥಳದಲ್ಲಿ ಪವಿತ್ರಾಗೌಡ ಇಲ್ಲ ಎಂದು ಅವರ ಪರ ವಕೀಲರು ವಾದ ಮುಂದಿಟ್ಟಿದ್ದಾರೆ. ಐಟಿ ವಿಚಾರಣೆ ಹಾಗೂ ಪವಿತ್ರಾ ಗೌಡ ಅವರ ನಿಲವು ನೋಡಿಕೊಂಡು ದರ್ಶನ್ ಕಾನೂನು ಹೋರಾಟಕ್ಕೆ ಮುಂದಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 30ಕ್ಕೆ ಮುಂದೂಡಿಕೆ: ಕಾರಣ?
ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿರೋದು ಕೆಳ ಹಂತದ ನ್ಯಾಯಾಲಯದಲ್ಲಿ. ಒಂದೊಮ್ಮೆ ಇಲ್ಲಿ ಜಾಮೀನು ಸಿಗದೇ ಇದ್ದರೆ ಹೈಕೋರ್ಟ್ ಹೋಗಬಹುದು. ಅಲ್ಲಿಯೂ ಅವರಿಗೆ ಬೇಲ್ ಸಿಗದೆ ಇದ್ದರೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದೆ. ದರ್ಶನ್ ಅವರು ಇನ್ನೂ ಹಲವು ದಿನ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಬಂದೊದಗಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.