ನಮ್ಮಿಂದಲೇ ಕನ್ನಡ ಸಿನಿಮಾಗಳು ಓಡುತ್ತಿಲ್ಲ ಎಂದು ಬೀಗುತ್ತಿದ್ದ ದರ್ಶನ್ ಅಭಿಮಾನಿಗಳಿಗೆ ನಿರಾಸೆ

|

Updated on: Aug 12, 2024 | 12:14 PM

‘ಭೀಮ’ ಸಿನಿಮಾದಲ್ಲಿ ಸಮಾಜಕ್ಕೆ ಸಂದೇಶ ಸಾರುವ ಕಥೆ ಇಡಲಾಗಿದೆ. ಬೆಂಗಳೂರಲ್ಲಿ ನಡೆಯೋ ಮಾದಕವಸ್ತು ದಂಧೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಆಗಿದೆ. ಇದಕ್ಕೆ ದುನಿಯಾ ವಿಜಯ್ ಆಯ್ಕೆ ಮಾಡಿಕೊಂಡ ಭಾಷೆ ಸಖತ್ ರಗಡ್. ಈಗ ‘ಭೀಮ’ ಸಿನಿಮಾ ಮೂರು ದಿನಕ್ಕೆ 11.15 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿ ಆಗಿದೆ.

ನಮ್ಮಿಂದಲೇ ಕನ್ನಡ ಸಿನಿಮಾಗಳು ಓಡುತ್ತಿಲ್ಲ ಎಂದು ಬೀಗುತ್ತಿದ್ದ ದರ್ಶನ್ ಅಭಿಮಾನಿಗಳಿಗೆ ನಿರಾಸೆ
ದರ್ಶನ್
Follow us on

ದರ್ಶನ್ ಬಂಧನ ಆದಾಗಿನಿಂದಲೂ ಅವರ ಫ್ಯಾನ್ಸ್ ಸಾಕಷ್ಟು ದುಃಖಕ್ಕೆ ಒಳಗಾಗಿದ್ದಾರೆ. ‘ದರ್ಶನ್ ಬಂಧನ ತಪ್ಪು’ ಎಂದು ಅವರು ವಾದಿಸುತ್ತಿದ್ದಾರೆ. ಈ ಬೆನ್ನಲೇ ಕೆಲ ದರ್ಶನ್ ಅಭಿಮಾನಿಗಳು ‘ದರ್ಶನ್ ಬಿಡುಗಡೆ ಆಗುವವರೆಗೆ ಕನ್ನಡದ ಯಾವುದೇ ಸಿನಿಮಾ ನೋಡಲ್ಲ’ ಎಂದು ಶಪಥ ಮಾಡಿದ್ದರು. ಇದೇ ಸಮಯಕ್ಕೆ ಕೆಲ ಸಿನಿಮಾಗಳು ಫ್ಲಾಪ್ ಆದವು. ದರ್ಶನ್ ಫ್ಯಾನ್ಸ್ ಸಿನಿಮಾ ನೋಡದೇ ಇರುವುದೇ ಇದಕ್ಕೆ ಕಾರಣ ಎನ್ನುವ ಮಾತು ಕೇಳಿ ಬಂತು. ಇದನ್ನು ‘ಭೀಮ’ ಸಿನಿಮಾ ಸುಳ್ಳು ಮಾಡಿದೆ. ಜನರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಇದರಿಂದ ದರ್ಶನ್ ಫ್ಯಾನ್ಸ್​ಗೆ ನಿರಾಸೆ ಆಗಿದೆ.

ದರ್ಶನ್ ಬಂಧನದ ಬಳಿಕ ಅವರ ಫ್ಯಾನ್ಸ್ ಮಾಡಿದ ಶಪಥದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ‘ದರ್ಶನ್ ಫ್ಯಾನ್ಸ್ ಸಿನಿಮಾ ನೋಡದೇ ಇರುವುದರಿಂದಲೇ ಕನ್ನಡ ಸಿನಿಮಾಗಳು ಓಡುತ್ತಿಲ್ಲ’ ಎಂದು ಕೆಲವರು ಅಭಿಪ್ರಾಯಪಟ್ಟರು. ಆದರೆ, ಈಗ ‘ಭೀಮ’ ಸಿನಿಮಾ ಗೆಲುವು ಕಂಡಿರುವುದರಿಂದ ಈ ಥಿಯರಿ ಸುಳ್ಳಾಗಿದೆ.

‘ಭೀಮ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಚಿತ್ರ ಮೂರೇ ದಿನಕ್ಕೆ ಗಳಿಕೆ ಮಾಡಿರೋದು ಬರೋಬ್ಬರಿ 11 ಕೋಟಿ ರೂಪಾಯಿ. ಈ ಚಿತ್ರದಿಂದ ಚಿತ್ರರಂಗಕ್ಕೆ ಹೊಸ ಕಳೆ ಬಂದಿದೆ. ಮುಚ್ಚಲ್ಪಟ್ಟ ಅನೇಕ ಥಿಯೇಟರ್​ಗಳು ಮತ್ತೆ ತೆರೆಯಲ್ಪಟ್ಟಿವೆ. ಒಳ್ಳೆಯ ಚಿತ್ರಗಳು ಬಂದರೆ ಜನರು ಥಿಯೇಟರ್​ಗೆ ಬಂದೇ ಬರುತ್ತಾರೆ ಅನ್ನೋದಕ್ಕೆ ಇದು ಉತ್ತಮ ಉದಾಹರಣೆ.

ಈ ವಿಚಾರವನ್ನು ನಿರ್ದೇಶಕ, ನಟ ರಾಜ್​ ಬಿ. ಶೆಟ್ಟಿ ಮೊದಲೇ ಹೇಳಿದ್ದರು. ‘ದರ್ಶನ್ ಅಭಿಮಾನಿಗಳು ಸಭೆ ನಡೆಸಿ ಹೇಳಿದ ಮಾತಲ್ಲ. ಯಾರೋ ಒಂದಿಬ್ಬರು ಈ ರೀತಿ ಹೇಳಿಕೆ ನೀಡಿದ್ದಾರೆ. ಕನ್ನಡ ಸಿನಿಮಾಗಳಿಗೆ ಮೊದಲಿನಿಂದಲೂ ಜನರು ಬರುತ್ತಿಲ್ಲ’ ಎಂದಿದ್ದರು. ‘ಭೀಮ’ ಸಿನಿಮಾ ಗೆಲುವಿನಿಂದ ಈ ಮಾತು ನಿಜವಾಗಿದೆ.

ಇದನ್ನೂ ಓದಿ: ವೀಕೆಂಡ್​ನಲ್ಲಿ ‘ಭೀಮ’ ಚಿತ್ರಕ್ಕೆ ಉತ್ತಮ ಕಲೆಕ್ಷನ್; ಒಟ್ಟೂ ಗಳಿಕೆ ಎಷ್ಟು?

‘ಭೀಮ’ ಚಿತ್ರ ವೀಕೆಂಡ್​ನಲ್ಲಿ ಒಳ್ಳೆಯ ಪ್ರದರ್ಶನ ಕಂಡಿದೆ. ಈ ಚಿತ್ರದಿಂದ ಕರ್ನಾಟಕದ ಚಿತ್ರಮಂದಿರ ತುಂಬಿದೆ. ಮುಂದಿನ ದಿನಗಳಲ್ಲಿ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’, ಶಿವರಾಜ್​ಕುಮಾರ್ ನಟನೆಯ ‘ಭೈರತಿ ರಣಗಲ್’, ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ರಿಲೀಸ್ ಆಗಲಿದೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.