AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ರೌಡಿ ಅಭಿಮಾನಿಗಳಿಂದ ಪ್ರಥಮ್ ಹತ್ಯಾ ಯತ್ನ

Darshan Thoogudeepa: ದರ್ಶನ್ ಅಭಿಮಾನಿಗಳು ಮತ್ತು ಪ್ರಥಮ್ ನಡುವೆ ಸಾಮಾಜಿಕ ಜಾಲತಾಣದಲ್ಲಿ ಜಗಳ ಕಳೆದ ಒಂದೆರಡು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಇಷ್ಟು ದಿನ ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗಿದ್ದ ಈ ಜಗಳ ಬೆದರಿಕೆ ಈಗ ನಿಜರೂಪಕ್ಕೆ ಬಂದಿವೆ. ಪ್ರಥಮ್ ಅವರಿಗೆ ಆಯುಧ ತೋರಿಸಿ ಕೆಲ ದರ್ಶನ್ ಅಭಿಮಾನಿಗಳು ಕೊಲೆಗೆ ಯತ್ನಿಸಿದ್ದಾರೆ.

ದರ್ಶನ್ ರೌಡಿ ಅಭಿಮಾನಿಗಳಿಂದ ಪ್ರಥಮ್ ಹತ್ಯಾ ಯತ್ನ
Pratham Darshan
ಮಂಜುನಾಥ ಸಿ.
|

Updated on:Jul 27, 2025 | 11:12 PM

Share

ನಟ ದರ್ಶನ್ ತೂಗುದೀಪ (Darshan Thoogudeepa) ಈಗಾಗಲೇ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಹೊರಬಂದಿದ್ದು, ಈಗ ಆ ಜಾಮೀನು ರದ್ದಾಗುವ ಸಾಧ್ಯತೆಯಲ್ಲಿದೆ. ಜೈಲಿಗೆ ಹೋಗಿ ಬಂದ ಬಳಿಕ ದರ್ಶನ್ ತಮ್ಮೆಲ್ಲ ಚಟುವಟಿಕೆಗಳನ್ನು ಬಂದ್ ಮಾಡಿ ತಾವಾಯ್ತು, ತಮ್ಮ ಕೆಲಸವಾಯ್ತು ಎಂದಿದ್ದಾರೆ. ಆದರೆ ಅವರ ಕೆಲ ಅಭಿಮಾನಿಗಳು ಮಾತ್ರ ದರ್ಶನ್ ಬಿಟ್ಟಿರುವ ದುಂಡಾವರ್ತನೆಯನ್ನು ಮುಂದುವರೆಸಿಕೊಂಡು ಹೋಗುವ ಪಣ ತೊಟ್ಟಂತಿದೆ. ಇಷ್ಟು ದಿನ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತವಾಗಿದ್ದ ಅಶ್ಲೀಲ ಬೈಗುಳ, ಕೊಲೆ ಬೆದರಿಕೆ ಈಗ ನೇರಾ-ನೇರಾ ಕೊಡಲು ಶುರು ಮಾಡಿದಂತಿದ್ದಾರೆ.

ನಟ ಪ್ರಥಮ್ ಮೊದಲಿನಿಂದಲೂ ದರ್ಶನ್ ಅಭಿಮಾನಿಗಳ ದುರ್ವರ್ತನೆಯನ್ನು ತಮ್ಮದೇ ಶೈಲಿಯಲ್ಲಿ ಖಂಡಿಸುತ್ತಾ, ಅವರಿಗೆ ಬುದ್ಧಿವಾದ ಹೇಳುತ್ತಾ ಬಂದಿದ್ದರು. ದರ್ಶನ್ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ಪ್ರಥಮ್ ಅವರಿಗೆ ನಿಂದಿಸುತ್ತಲೇ ಬಂದಿದ್ದರು. ಆದರೆ ಇತ್ತೀಚೆಗೆ ದರ್ಶನ್ ಅಭಿಮಾನಿಗಳು ಕೆಲವರು ಪ್ರಥಮ್ ಅವರಿಗೆ ಆಯುಧಗಳನ್ನು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರಲ್ಲದೆ, ಕೊಲೆ ಮಾಡುವ ಪ್ರಯತ್ನವನ್ನೂ ಮಾಡಿದ್ದಾಗಿ ಸ್ವತಃ ಪ್ರಥಮ್ ಆರೋಪಿಸಿದ್ದಾರೆ.

ಇದನ್ನೂ ಓದಿ:ಮತ್ತೆ ದರ್ಶನ್ ಅಭಿಮಾನಿಗಳ ಮೇಲೆ ಆಕ್ರೋಶ ಹೊರಹಾಕಿದ ರಮ್ಯಾ

ಇದೇ ತಿಂಗಳ 22 ರಂದು ನಟ ಪ್ರಥಮ್, ಯಾರೋ ಇನ್​ಫ್ಲ್ಯುಯೆನ್ಸರ್ ಒಬ್ಬರು ಕರೆದಿದ್ದಾರೆಂದು ದೊಡ್ಡಬಳ್ಳಾಪುರ ಬಳಿಯ ರಾಮಸ್ವಾಮಿಪಾಳ್ಯ ಎಂಬ ಊರಿನ ಕಾರ್ಯಕ್ರಮವೊಂದಕ್ಕೆ ಹೋಗಿದ್ದರಂತೆ. ಅಲ್ಲಿ ವ್ಯಕ್ತಿಯೊಬ್ಬ ಬಂದು ಬಾಸ್ ಕರೆಯುತ್ತಿದ್ದಾರೆ ಬಾ ಎಂದನಂತೆ. ಬಳಿಕ ಪ್ರಥಮ್ ಅನ್ನು ಕೆಲವರು ಮುತ್ತಿಕೊಂಡರಂತೆ. ಕೊನೆಗೆ ವಿಧಿ ಇಲ್ಲದೆ ಪ್ರಥಮ್ ಕಾರು ಹತ್ತಿ ಹೋಗಿದ್ದಾರೆ. ಅಲ್ಲಿ ರಕ್ಷಕ್ ಬುಲೆಕ್ ಸಹ ಇದ್ದರಂತೆ. ಅಲ್ಲಿ ಕೆಲವರು ಪ್ರಥಮ್ ಹೋದ ವರ್ಷ ದರ್ಶನ್ ಅಭಿಮಾನಿಗಳ ಬಗ್ಗೆ ಆಡಿದ ಮಾತುಗಳನ್ನು ಇರಿಸಿಕೊಂಡು ಬೆದರಿಕೆ ಹಾಕಿದರಂತೆ.

ಒಬ್ಬ ವ್ಯಕ್ತಿಯಂತೂ ಉದ್ದನೆಯ ಡ್ರಾಗರ್ ಆಯುಧವನ್ನು ತೋರಿಸಿ ಅದನ್ನು ಪ್ರಥಮ್ ಅವರ ಹೊಟ್ಟೆಗೆ ಚುಚ್ಚುವಂತೆ ನಟನೆ ಮಾಡುತ್ತಾ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದನಂತೆ. ಈ ಎಲ್ಲ ಘಟನೆ ನಡೆಯುವಾಗ ರಕ್ಷಕ್ ಬುಲೆಟ್ ಅಲ್ಲಿಯೇ ಇದ್ದರಂತೆ. ಈ ವಿಷಯವನ್ನು ಸ್ವತಃ ಪ್ರಥಮ್ ಟಿವಿ9 ಬಳಿ ಹೇಳಿಕೊಂಡಿದ್ದಾರೆ. ಘಟನೆ ಬಳಿಕ ಈ ವಿಷಯದ ಬಗ್ಗೆ ಪ್ರಥಮ್ ಅವರು ಬೆಂಗಳೂರು ಗ್ರಾಮಾಂತರ ಎಸ್​ಪಿ ಅವರ ಬಳಿ ಮೌಖಿಕ ದೂರು ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:53 pm, Sun, 27 July 25

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್