AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದೇ ಆಸ್ಪತ್ರೆಗೆ ಭೇಟಿ ನೀಡಲಿರುವ ದರ್ಶನ್, ಯಾವ ಆಸ್ಪತ್ರೆ?

ಅನಾರೋಗ್ಯದ ಕಾರಣ ನೀಡಿ ಆರು ವಾರಗಳ ಮಧ್ಯಂತರ ಜಾಮೀನನ್ನು ದರ್ಶನ್ ತೂಗುದೀಪ ಪಡೆದುಕೊಂಡಿದ್ದಾರೆ. ಜಾಮೀನು ದೊರೆತ ಮೇಲೆ ದರ್ಶನ್ ಇಂದು ಮೊದಲ ಬಾರಿಗೆ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ದರ್ಶನ್?

ಇಂದೇ ಆಸ್ಪತ್ರೆಗೆ ಭೇಟಿ ನೀಡಲಿರುವ ದರ್ಶನ್, ಯಾವ ಆಸ್ಪತ್ರೆ?
ಮಂಜುನಾಥ ಸಿ.
| Edited By: |

Updated on:Nov 01, 2024 | 3:44 PM

Share

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​ಗೆ ಆರೋಗ್ಯ ಚಿಕಿತ್ಸೆಗೆಂದು ಮಾನ್ಯ ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಎರಡು ದಿನದ ಹಿಂದೆ ಬಳ್ಳಾರಿ ಜೈಲಿನಿಂದ ಮನೆಗೆ ಮರಳಿರುವ ದರ್ಶನ್ ಇನ್ನೂ ಆಸ್ಪತ್ರೆ ಕಡೆ ಮುಖ ಹಾಕಿಲ್ಲ. ಅಲ್ಲದೆ ಒಂದು ವಾರದಲ್ಲಿ ದರ್ಶನ್​ರ ಚಿಕಿತ್ಸೆಯ ಮಾಹಿತಿಯನ್ನು ನೀಡಬೇಕೆಂದು ನ್ಯಾಯಾಲಯ ಹೇಳಿದೆ, ಹೀಗಿದ್ದರೂ ಸಹ ದರ್ಶನ್ ಆಸ್ಪತ್ರೆಗೆ ಹೋಗದೇ ಇರುವುದು ಆಶ್ಚರ್ಯ ತರಿಸಿತ್ತು. ಆದರೆ ಇಂದು ದರ್ಶನ್ ಆಸ್ಪತ್ರೆಗೆ ಹೋಗುತ್ತಿದ್ದಾರೆ.

ದರ್ಶನ್, ಬೆಂಗಳೂರಿನ ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ಹೋಗುತ್ತಿದ್ದು, ಇಂದು ಹಲವು ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ. ಪರೀಕ್ಷೆಗಳ ವರದಿ ಆಧರಿಸಿ, ವೈದ್ಯರೊಟ್ಟಿಗೆ ಚರ್ಚೆ ನಡೆಸಿ ಮುಂದಿನ ಚಿಕಿತ್ಸೆ ಬಗ್ಗೆ ನಿರ್ಣಯವನ್ನು ದರ್ಶನ್ ಹಾಗೂ ಅವರ ಕುಟುಂಬ ತೆಗೆದುಕೊಳ್ಳಲಿದೆ.

ಬುಧವಾರ ರಾತ್ರಿ ಜೈಲಿನಿಂದ ಬಿಡುಗಡೆ ಆಗಿ ಮನೆಗೆ ಬಂದ ದರ್ಶನ್, ವೈದ್ಯರ ಸಲಹೆಯಂತೆ ಬೆನ್ನಿಗೆ ನೋವು ನಿವಾರಕ ಪಟ್ಟಿಕೊಂಡಿದ್ದರು. ಆ ನಂತರ ನಿನ್ನೆ ಪತ್ನಿಯ ಮನೆಗೆ ತಮ್ಮ ವಾಹನಗಳನ್ನು ಸಹಾಯಕರಿಂದ ಕರೆಸಿಕೊಂಡು ಎಲ್ಲ ವಾಹನಗಳಿಗೆ ಪೂಜೆ ಮಾಡಿದರು. ನಿನ್ನೆ ದರ್ಶನ್ ಪುತ್ರ ವಿನೀಶ್ ಹುಟ್ಟುಹಬ್ಬ ಸಹ ಇತ್ತಾದ್ದರಿಂದ ನಿನ್ನೆ ಆಸ್ಪತ್ರೆಗೆ ಹೋಗಿರಲಿಲ್ಲ. ಇಂದು ಅಮವಾಸ್ಯೆ ಇದ್ದು, ಅಮವಾಸ್ಯೆ ಮುಗಿಸಿಕೊಂಡು ಆಸ್ಪತ್ರೆಗೆ ಹೋಗಲಿದ್ದಾರೆ ಎನ್ನಲಾಗಿತ್ತು. ಆದರೆ ದರ್ಶನ್ ಅಮವಾಸ್ಯ ಮುಗಿಯುವ ಮುಂಚೆಯೇ ಆಸ್ಪತ್ರೆಗೆ ಹೋಗಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:ನಟ ದರ್ಶನ್​ ವಿಚಾರದಲ್ಲಿ ಅರ್ಜುನ್ ಗುರೂಜಿ ನುಡಿದಿದ್ದ ಭವಿಷ್ಯ ನಿಜ ಆಯ್ತು

ದರ್ಶನ್ ಈ ಹಿಂದೆಯೂ ಸಹ ಬಿಜಿಎಸ್​ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದರು. 2013 ರಲ್ಲಿ ದರ್ಶನ್ ‘ಬೃಂದಾವನ’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಕುದುರೆ ಓಡಿಸುವಾಗ ಕುದುರೆಯಿಂದ ಬಿದ್ದು ಬೆನ್ನು ಹಾಗೂ ಕತ್ತಿನ ಭಾಗಕ್ಕೆ ಗಾಯ ಮಾಡಿಕೊಂಡಿದ್ದರು. ಆಗ ಇದೇ ಬಿಜಿಎಸ್​ಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಲ್ಲದೆ ಆಗ ಹಲವು ದಿನಗಳ ಕಾಲ ಕೊರಳಿಗೆ ಪಟ್ಟಿಕಟ್ಟಿಕೊಂಡು ಓಡಾಡುತ್ತಿದ್ದರು. ಈಗ ಮತ್ತೆ ಬಿಜಿಎಸ್​ಗೆ ದಾಖಲಾಗುತ್ತಿದ್ದಾರೆ.

ಶುಕ್ರವಾರ ಮೂರು ಗಂಟೆ ಮೇಲೆ ದರ್ಶನ್ ಬಿಜಿಎಸ್​ ಆಸ್ಪತ್ರೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಆಸ್ಪತ್ರೆಗೆ ಆಗಮಿಸುವ ಮುನ್ನವೇ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಅದೇ ಆಸ್ಪತ್ರೆಗೆ ಬಂದು ದರ್ಶನ್​ಗಾಗಿ ಕಾಯುತ್ತಿದ್ದರು. ಆಸ್ಪತ್ರೆ ಮುಂದೆ ಪೊಲೀಸರು ಬ್ಯಾರಿಕೇಡ್​ಗಳನ್ನು ಹಾಕಿದ್ದು, ಮುನ್ನೆಚ್ಚರಿಕೆಗಾಗಿ ಪೊಲೀಸ್ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಿದ್ದಾರೆ. ಎಸಿಪಿ ಬಸವರಾಜು ಬಿಜಿಸ್​ಗೆ ಆಗಮಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Fri, 1 November 24